Last Updated:
BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ.
ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್‍ಡೇಟ್ ಮೆಟ್ರೋ (Metro) ಪ್ರಯಾಣಿಕರಲ್ಲಿ (Passengers) ಹೊಸ ಭರವಸೆಯನ್ನು ಮೂಡಿಸಿದೆ. ಬಹುನಿರೀಕ್ಷಿತ ಪಿಂಕ್ ಲೈನ್ ರೈಲುಗಳಿಗೆ (Train) ಇದೀಗ ಅಧಿಕೃತ ವೇಗ ಪ್ರಮಾಣಪತ್ರ ಸಿಕ್ಕಿದೆ.
ಈ ಮಾರ್ಗವು ಕಾರ್ಯಾರಂಭ ಮಾಡುತ್ತಿದ್ದಂತೆ, ಬೆಂಗಳೂರಿನ ಮೆಟ್ರೋ ಜಾಲದ ಒಟ್ಟು ಉದ್ದವು 103.6 ಕಿ.ಮೀ ತಲುಪಲಿದೆ. ಇದರೊಂದಿಗೆ ಮುಂಬೈ ಮೆಟ್ರೋ ಜಾಲವನ್ನು (101.43 ಕಿ.ಮೀ) ಹಿಂದಿಕ್ಕಿ, ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಬೆಂಗಳೂರು ಹೊರಹೊಮ್ಮಲಿದೆ.
ಸದ್ಯಕ್ಕೆ ಸಿಗ್ನಲಿಂಗ್ ವ್ಯವಸ್ಥೆಯ ಸುರಕ್ಷತಾ ಮೌಲ್ಯಮಾಪನ (ISA) ಪ್ರಕ್ರಿಯೆ ನಡೆಯುತ್ತಿದೆ. ಜೊಡೋವಾ ಟೆಕ್ನಾಲಜೀಸ್ ಸಂಸ್ಥೆ ಇದರ ಜವಾಬ್ದಾರಿ ಹೊತ್ತಿದ್ದು, ಜುಲೈ ಅಂತ್ಯದ ವೇಳೆಗೆ ಎಲ್ಲಾ ಶಾಸನಬದ್ಧ ಸುರಕ್ಷತಾ ತಪಾಸಣೆಗಳು ಮುಕ್ತಾಯವಾಗಲಿವೆ.
Bangalore [Bangalore],Bangalore,Karnataka
Jun 06, 2026 10:16 AM IST













