City Lihgts Movie: 100 ಪ್ಲಸ್ ಥಿಯೇಟರ್​​ಗಳಲ್ಲಿ ರನ್ನಿಂಗ್, 2ನೇ ವಾರಕ್ಕೆ ಕಾಲಿಟ್ಟ ಸಿಟಿ ಲೈಟ್ಸ್ ಸಿನಿಮಾ | | ACTPnews

100 ಪ್ಲಸ್ ಥಿಯೇಟರ್ ಅಲ್ಲಿ ರನ್ನಿಂಗ್;2ನೇ ವಾರಕ್ಕೆ ಕಾಲಿಟ್ಟ ಸಿಟಿ ಲೈಟ್ಸ್ ಸಿನಿಮಾ!(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)


Last Updated:

ಸಿಟಿ ಲೈಟ್ಸ್ ಚಿತ್ರ 2ನೇ ವಾರಕ್ಕೆ ಕಾಲಿಟ್ಟಿದೆ. 100 ಪ್ಲಸ್ ಥಿಯೇಟರ್ ಅಲ್ಲಿ ಇದು ಓಡ್ತಿದೆ. ಈ ಸಿನಿಮಾದ ಸದ್ಯದ ಇನ್ನಷ್ಟು ವಿವರ ಇಲ್ಲಿದೆ ಓದಿ.

100 ಪ್ಲಸ್ ಥಿಯೇಟರ್ ಅಲ್ಲಿ ರನ್ನಿಂಗ್;2ನೇ ವಾರಕ್ಕೆ ಕಾಲಿಟ್ಟ ಸಿಟಿ ಲೈಟ್ಸ್ ಸಿನಿಮಾ!(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)
100 ಪ್ಲಸ್ ಥಿಯೇಟರ್ ಅಲ್ಲಿ ರನ್ನಿಂಗ್;2ನೇ ವಾರಕ್ಕೆ ಕಾಲಿಟ್ಟ ಸಿಟಿ ಲೈಟ್ಸ್ ಸಿನಿಮಾ!(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ಕನ್ನಡದ ಸಿಟಿ ಲೈಟ್ಸ್ ಚಿತ್ರ (City Lihgts Movie) 2ನೇ ವಾರಕ್ಕೆ ಕಾಲಿಟ್ಟಿದೆ. ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಬಂದಿದೆ. ಪ್ರಮೋಷನ್ (Promotion) ಕೂಡ ಚೆನ್ನಾಗಿ ಆಗಿದೆ. ಈ ಚಿತ್ರದ ಕಂಟೆಂಟ್ ಕೂಡ ಚೆನ್ನಾಗಿದೆ. ದುನಿಯಾ ವಿಜಯ್ (Duniya Vijay) ಈ ಚಿತ್ರವನ್ನ ಚೆನ್ನಾಗಿ ಮಾಡಿದ್ದಾರೆ. ಮೆಜೆಸ್ಟಿಕ್‌ನ (Mejestic) ಕರಾಳ ಸತ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಪ್ರೀತಿ ಪ್ರೇಮ ಅಂತ ಇಷ್ಟಪಡೋರಿಗೂ ಇಲ್ಲೊಂದು ಮುದ್ದಾದ ಕತೆ ಇದೆ. ಇಷ್ಟೆಲ್ಲ ಇರೋ ಈ ಚಿತ್ರ ಎರಡನೇ ವಾರವೂ ಚೆನ್ನಾಗಿ ಓಡ್ತಿದೆ..

100 ಥಿಯೇಟರ್ ಅಲ್ಲಿ ರನ್ನಿಂಗ್

ಸಿಟಿ ಲೈಟ್ಸ್ ಚಿತ್ರ ಎರಡನೇ ವಾರವೂ ಓಡ್ತಿದೆ. ಉತ್ತಮ ವಿಷಯದ ಈ ಚಿತ್ರದ ಪ್ರಚಾರವು ಚೆನ್ನಾಗಿ ಆಗಿದೆ. ದುನಿಯಾ ವಿಜಯ್, ನಾಯಕ ನಟ ವಿನಯ್ ರಾಜ್‌ಕುಮಾರ್, ಮೊನಿಷಾ ವಿಜಯ್ ಕುಮಾರ್ ಹೀಗೆ ಇವರೆಲ್ಲ ಚಿತ್ರವನ್ನ ಪ್ರಮೋಟ್ ಮಾಡ್ತಾನೇ ಇದ್ದಾರೆ.
Duniya Vijay Monisha Vinay Rajkumar City Lights Movie Second Week Updates

70 ಮಲ್ಟಿಪ್ಲೆಕ್ಸ್ ಅಲ್ಲಿ ಪ್ರದರ್ಶನ

(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ಥಿಯೇಟರ್‌ಗೆ ಹೋಗಿ ಸುಮ್ನೆ ಜನರತ್ತ ಕೈ ಮಾಡಿ ಇವರು ಬರ್ತಿಲ್ಲ. ಜನರ ರೆಸ್ಪಾನ್ಸ್ ತಿಳಿಯುತ್ತಿದ್ದಾರೆ. ದುನಿಯಾ ವಿಜಯ್ ಸೀಟ್ ಮೇಲೆ ಕುಳಿತ ಹೆಣ್ಣುಮಕ್ಕಳ ಅಭಿಪ್ರಾಯ ಕೇಳುತ್ತಿದ್ದಾರೆ. “ಹೆಣ್ಣುಮಕ್ಕಳು ಈ ಚಿತ್ರ ನೋಡಬಹುದಾ?” ಅಂತಲೂ ಕೇಳುತ್ತಿದ್ದಾರೆ.

70 ಮಲ್ಟಿಪ್ಲೆಕ್ಸ್ ಪ್ರದರ್ಶನ

ಸಿಟಿ ಲೈಟ್ಸ್ ಚಿತ್ರ ಮಲ್ಟಿಪ್ಲೆಕ್ಸ್ ಅಲ್ಲಿ ಓಡ್ತಿದೆ. ಜನ ಇಲ್ಲಿಗೆ ಬಂದು ಚಿತ್ರ ನೋಡ್ತಿದ್ದಾರೆ. ಸಿಟಿ ಲೈಟ್ಸ್ ಚಿತ್ರ ಮೊದಲ ದಿನ 150 ಪ್ಲಸ್ ಥಿಯೇಟರ್ ಅಲ್ಲಿ ರಿಲೀಸ್ ಆಗಿತ್ತು.

ಸೆಪ್ಟೆಂಬರ್-18 ರಿಲೀಸ್

ಈ ಚಿತ್ರ ಕಳೆದ ವಾರ ಸೆಪ್ಟೆಂಬರ್-18 ರಂದು ಶುಕ್ರವಾರ ರಿಲೀಸ್ ಆಗಿತ್ತು. ರಾಜ್ಯದೆಲ್ಲೆಡೆ ಈ ಚಿತ್ರಕ್ಕೆ ಮೊದಲ ದಿನವೇ ಒಳ್ಳೆ ಅಭಿಪ್ರಾಯ ಬಂದಿದೆ.

ಚಿತ್ರ ನೋಡಿದ ಹೆಣ್ಣುಮಕ್ಕಳು ಇದನ್ನ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ಒಳ್ಳೆ ಸಂದೇಶ ಇದೆ ಅಂತಲೂ ಹೇಳಿದ್ದಾರೆ. ಹೆಣ್ಣುಮಕ್ಕಳನ್ನ ಇದು ಜಾಗೃತಗೊಳಿಸುತ್ತದೆ ಅನ್ನುವ ಅಭಿಪ್ರಾಯ ಕೂಡ ಬಂದಿವೆ.

Duniya Vijay Monisha Vinay Rajkumar City Lights Movie Second Week Updates

ಸೆಪ್ಟೆಂಬರ್-18 ರಿಲೀಸ್

(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ಪ್ರೀಮಿಯರ್ ಶೋ

ಸೆಪ್ಟೆಂಬರ್-24 ರಂದು ಈ ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ವಿಶೇಷ ಹೆಣ್ಣುಮಕ್ಕಳಿಗಾಗಿಯೇ ದುನಿಯಾ ವಿಜಯ್ ಈ ಚಿತ್ರದ ಶೋ ಇಟ್ಟಿದ್ದರು. ಈ ಸಿನಿಮಾದಲ್ಲಿ ಸಾಕಷ್ಟು ವಾಸ್ತವಗಳನ್ನ ದುನಿಯಾ ವಿಜಯ್ ತೋರಿಸಿದ್ದಾರೆ.

ಸಿಟಿ ಲೈಟ್ಸ್ ಸಿನಿಮಾ ವಿವರ

ಈ ಚಿತ್ರವನ್ನ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

ಶಿವಸೇನಾ ಕ್ಯಾಮರಾವರ್ಕ್ ಮಾಡಿದ್ದಾರೆ. ಚಿತ್ರದಲ್ಲಿ ಹೊಸ ಕಲಾವಿದರಿಗೆ ದುನಿಯಾ ವಿಜಯ್ ಅವಕಾಶ ಮಾಡಿಕೊಟ್ಟಿದ್ದಾರೆ. ಪುನೀತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಇವರ ಅಭಿನಯ ಚೆನ್ನಾಗಿದೆ. ಮೆಚ್ಚುಗೆನೂ ಪಡೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports