Ayogya-2 Movie: ಅಯೋಗ್ಯ-2 ರಿಲೀಸ್ ಆಗಿ 50 ದಿನ, ಥ್ಯಾಂಕ್ಸ್ ಹೇಳಿದ ಡೈರೆಕ್ಟರ್! | | ACTPnews

Sathish Ninasam Rachita Ram Ayogya-2 Movie 50 days celebration latest Updates


ಮುಂದೇನೂ ಒಳ್ಳೆ ಚಿತ್ರ….

ಅಯೋಗ್ಯ-2 ಚಿತ್ರವನ್ನ ಗೆಲ್ಲಿಸಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಯಾರೆಲ್ಲ ಸಪೋರ್ಟ್ ಮಾಡಿದ್ದಾರೋ ಅವರಿಗೆ ಧನ್ಯವಾದ ಹೇಳುತ್ತೇನೆ.
27 ಥಿಯೇಟರ್ ಅಲ್ಲಿ

(ಚಿತ್ರ ಕೃಪೆ: ಡೈರೆಕ್ಟರ್ ಮಹೇಶ್ ಕುಮಾರ್)

ನಮ್ಮ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿರೋದಕ್ಕೆ ಚಿತ್ರ ಇಷ್ಟು ದಿನ ಓಡಿದೆ. ಈ ಒಂದು ಖುಷಿ ಸದಾ ಇರುತ್ತದೆ. ಈ ಚಿತ್ರ ಗೆಲ್ಲಿಸಿದ ನಿಮಗೆ ಧನ್ಯಾವಾದಗಳು ಹೇಳುತ್ತೇನೆ. ಮುಂದೇನೂ ಒಳ್ಳೆ ಚಿತ್ರ ಕೊಡ್ತೀನಿ ಅಂತಲೇ ಡೈರೆಕ್ಟರ್ ಮಹೇಶ್ ಕುಮಾರ್ ಹೇಳಿದ್ದಾರೆ.

27 ಥಿಯೇಟರ್ ಅಲ್ಲಿ

ಅಯೋಗ್ಯ-2 ಚಿತ್ರ ಇನ್ನೂ ಥಿಯೇಟರ್ ಅಲ್ಲಿದೆ. 27 ಥಿಯೇಟರ್ ನಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಎಲ್ಲ ಥಿಯೇಟರ್ ಅಲ್ಲಿ ಇದು ಈಗ 50 ದಿನ ಪೂರೈಸಿದೆ.

ಅಯೋಗ್ಯ-2 ಅರ್ಪಣೆ

ಅಯೋಗ್ಯ-2 ಚಿತ್ರದ ಈ ಒಂದು ಸಕ್ಸಸ್ ಅನ್ನ ಮಹೇಶ್ ಕುಮಾರ್ ಅರ್ಪಣೆ ಮಾಡಿದ್ದಾರೆ. ಈ ಒಂದು ಅರ್ಪಣೆಯನ್ನ ಚಿತ್ರದ ಗೆಲುವಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಅರ್ಪಣೆ ಮಾಡಿದ್ದಾರೆ.

ಅಂದ್ಹಾಗೆ ಈ ಚಿತ್ರ ಅಗಸ್ಟ್-7 ರಂದು ರಿಲೀಸ್ ಆಗಿತ್ತು. ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿಯೆ ಈ ಚಿತ್ರ ತೆರೆ ಕಂಡಿತ್ತು. ಇದೀಗ ಈ ಚಿತ್ರ 50 ದಿನ ಪೂರೈಸಿದೆ.

ದೊಡ್ಡ ಚಿತ್ರಗಳು ಬಂದವು. ಆದರೆ, ಅಯೋಗ್ಯ-2 ನಿರಂತರವಾಗಿಯೇ ಓಡ್ತಾನೇ ಇತ್ತು ಅಂತಲೂ ಹೇಳಬಹುದು.

Sathish Ninasam Rachita Ram Ayogya-2 Movie 50 days celebration latest Updates

ಅಯೋಗ್ಯ-2 ಅರ್ಪಣೆ

(ಚಿತ್ರ ಕೃಪೆ: ಡೈರೆಕ್ಟರ್ ಮಹೇಶ್ ಕುಮಾರ್)

ಸತೀಶ್-ರಚಿತಾ ಮೋಡಿ

ಅಯೋಗ್ಯ-2 ಚಿತ್ರದಲ್ಲಿ ಸತೀಶ್ ಹಾಗೂ ರಚಿತಾ ರಾಮ್ ಮೋಡಿ ಮಾಡಿದ್ದಾರೆ. ಅಯೋಗ್ಯ ಒನ್ ಚಿತ್ರ ಆದ್ಮೇಲೆ ಈ ಚಿತ್ರದಲ್ಲಿ ಜೋಡಿ ಆಗಿದ್ದಾರೆ.

ಈ ಚಿತ್ರದ ಹಾಡುಗಳು ಜನರ ಗಮನ ಸೆಳೆದಿವೆ. ಅರ್ಜುನ್ ಜನ್ಯ ಅವರ ಮ್ಯೂಸಿಕ್ ಇಲ್ಲೂ ಕಮಾಲ್ ಮಾಡುವ ಕೆಲಸ ಮಾಡಿದೆ. ಈ ಚಿತ್ರದಲ್ಲಿ ದಡಿಯಾ ಗಿರಿ ಹಾಗೂ ಶಿವರಾಜ್ ಕೆ.ಆರ್.ಪೇಟೆ ಅದ್ಭತವಾಗಿ ನಟಿಸಿದ್ದಾರೆ. ಜನ ಇವರ ಪಾತ್ರವನ್ನು ತುಂಬಾನೆ ಎಂಜಾಯ್ ಮಾಡಿದ್ದಾರೆ.

ರವಿಚಂದ್ರನ್ ಸ್ಪೆಷಲ್ ಎಂಟ್ರಿ

ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ನಾಯಕ ನಟ ಸತೀಸ್ ನೀನಾಸಂ ಅವರ ತಂದೆಯ ಪಾತ್ರ ಮಾಡಿದ್ದಾರೆ. ರವಿಶಂಕರ್ ಶರ್ಮಾ ಇಲ್ಲೂ ಇದ್ದಾರೆ. ಸಾಧು ಕೋಕಿಲ ಮತ್ತು ದೇವರಾಜ್ ಇಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದ ಮೂರನೇ ಭಾಗ ಕೂಡ ಬರುತ್ತದೆ. ಈ ಒಂದು ವಿಷಯವನ್ನ ಡೈರೆಕ್ಟರ್ ಮಹೇಶ್ ಕುಮಾರ್ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೂ ಹಂಚಿಕೊಂಡಿದ್ದಾರೆ.

ಈ ವರ್ಷವೇ ಈ ಚಿತ್ರ ಶುರು ಆಗುತ್ತದೆ. ಮುಂದಿನ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಅಯೋಗ್ಯ-3 ಚಿತ್ರ ರಿಲೀಸ್ ಆಗುತ್ತದೆ ಅಂತಲೂ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports