Last Updated:
ಮೇ 10 ಭಾನುವಾರ ಬೆಳಿಗ್ಗೆ 7 ರಿಂದ 9 ರವರೆಗೆ ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ನಲ್ಲಿ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕಬ್ಬನ್ ಪಾರ್ಕ್ ನಡುವೆ ಸಂಚಾರ ಸ್ಥಗಿತ, BMRCL ಎಚ್ಚರಿಕೆ.
ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣಿಸಲು ನಾವು ಹೆಚ್ಚಾಗಿ ಮೆಟ್ರೋವನ್ನೇ (Metro) ಅವಲಂಬಿಸುತ್ತೇವೆ. ಅದರಲ್ಲೂ ಭಾನುವಾರ (Sunday) ರಜೆ ಇರುವುದರಿಂದ ಶಾಪಿಂಗ್ ಅಥವಾ ಹೊರಗೆ ಹೋಗಲು ಪ್ಲಾನ್ ಮಾಡಿಕೊಂಡಿರುತ್ತೇವೆ. ಆದರೆ, ಬರುವ ಭಾನುವಾರ (ಮೇ 10, 2026) ನೀವು ಮೆಟ್ರೋ ಹತ್ತುವ ಮೊದಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲೇಬೇಕು. ಯಾಕಂದ್ರೆ ಅವತ್ತು ಈ ಮಾರ್ಗದಲ್ಲಿ ಮೆಟ್ರೋ ಓಡಾಡಲ್ಲ.
ಈ ಸಂಚಾರ ವ್ಯತ್ಯಯವು ಕೇವಲ ಪರ್ಪಲ್ ಲೈನ್ಗೆ ಮಾತ್ರ ಅನ್ವಯಿಸಲಿದೆ. ನಿರ್ವಹಣಾ ಕೆಲಸ ನಡೆಯುವ ನಿರ್ದಿಷ್ಟ ನಿಲ್ದಾಣಗಳ ನಡುವೆ ರೈಲುಗಳು ಸಂಚರಿಸುವುದಿಲ್ಲ. ಆದರೆ, ಉಳಿದ ಮಾರ್ಗಗಳಲ್ಲಿ ಅಂದರೆ ಹಸಿರು ಮಾರ್ಗದಲ್ಲಿ ಸಂಚಾರ ಎಂದಿನಂತೆ ಇರಲಿದೆ. ಕಾಮಗಾರಿ ಮುಗಿದ ನಂತರ ಅಂದರೆ ಸೋಮವಾರ ಬೆಳಿಗ್ಗೆಯಿಂದ ಎಂದಿನಂತೆ ಪೂರ್ಣ ಪ್ರಮಾಣದ ಸಂಚಾರ ಆರಂಭವಾಗಲಿದೆ.
ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಅಂದು ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಭಾನುವಾರ ತುರ್ತು ಕೆಲಸಗಳಿದ್ದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಮೆಟ್ರೋ ಬದಲಿಗೆ ಬಿಎಂಟಿಸಿ ಬಸ್ ಅಥವಾ ಕ್ಯಾಬ್ಗಳನ್ನು ಅವಲಂಬಿಸುವುದು ಒಳ್ಳೆಯದು.
Bangalore,Karnataka













