Falta Assembly Election Result: ಬಿಜೆಪಿ ವಿನ್ ಆದ್ರೂ ಫಾಲ್ಟಾ ರಿಸಲ್ಟ್ಸ್ ನೆಕ್ಸ್ಟ್ ಲೆವೆಲ್ ಟ್ವಿಸ್ಟ್; ಈಗ ಎಲ್ಲೂ ನೋಡಿದ್ರೂ ಆ ಪಕ್ಷದ್ದೇ ಹವಾ!  | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Falta Assembly Election Result: ಫಾಲ್ಟಾ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಬಾಂಗ್ಶು ಪಾಂಡಾ ಭಾರೀ ಬಹುಮತದಿಂದ ಗೆದ್ದು, ಸಿಪಿಎಂ ಎರಡನೇ ಸ್ಥಾನ, ಟಿಎಂಸಿ ನಾಲ್ಕನೇ ಸ್ಥಾನಕ್ಕೆ ಕುಸಿದು ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದೆ

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಗೆದ್ದಿದ್ದು ಕಮಲ, ಆದ್ರೆ ಕ್ರೆಡಿಟ್ (Credit) ಮಾತ್ರ ಆ ಪಕ್ಷಕ್ಕೆ. ಹೌದು, ಫಾಲ್ಟಾ ರಿಸಲ್ಟ್ಸ್ (Falta Assembly Election) ಇಡೀ ಗೇಮ್ ಅನ್ನೇ ಉಲ್ಟಾ ಪಲ್ಟಾ ಮಾಡಿದೆ. ಬಿಜೆಪಿ ಅಫೀಷಿಯಲ್ ಆಗಿ ಸೀಟ್ ಗೆದ್ದು ಬೀಗುತ್ತಿದ್ರೆ, ಅಂಡರ್‌ಕರೆಂಟ್‌ನಲ್ಲಿ ಮಾತ್ರ ಆ ಪಕ್ಷದ ಸೈಲೆಂಟ್ ಎಂಟ್ರಿ (Silent Entry) ನೆಕ್ಸ್ಟ್ ಲೆವೆಲ್ (Next Level) ಹವಾ ಕ್ರಿಯೇಟ್ ಮಾಡಿದೆ. ಅದು ಯಾವ ಪಕ್ಷ?  (which Party) ಅಷ್ಟಕ್ಕೂ ಅದು ಕ್ರಿಯೇಟ್​ ಮಾಡಿದ ಟ್ರೆಂಡ್​ ಏನು ಎನ್ನುವುದನ್ನು ನೋಡೋಣ ಬನ್ನಿ.

ಇದು ಬದಲಾವಣೆ ದಾರಿನಾ?

ಪಶ್ಚಿಮ ಬಂಗಾಳದ ಫಲ್ತಾ ವಿಧಾನಸಭಾ ಕ್ಷೇತ್ರದ 2026ರ ಚುನಾವಣಾ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವು ವರ್ಷಗಳಿಂದ ತೃಣಮೂಲ ಕಾಂಗ್ರೆಸ್‌ (TMC) ಪ್ರಭಾವದಲ್ಲಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಪಕ್ಷದ ದುರ್ಬಲತೆ ಸ್ಪಷ್ಟವಾಗಿ ಗೋಚರಿಸಿದ್ದು, ಸಿಪಿಎಂ (CPM) ಮತ್ತೆ ತನ್ನ ನೆಲೆಯನ್ನು ಬಲಪಡಿಸಿಕೊಳ್ಳುವ ಸೂಚನೆ ನೀಡಿದೆ. ಜೊತೆಗೆ ಬಿಜೆಪಿ ಭಾರೀ ಗೆಲುವು ಸಾಧಿಸಿದ್ದು, ಬಂಗಾಳ ರಾಜಕೀಯದ ಹೊಸ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.

ಬಿಜೆಪಿ ಅಭ್ಯರ್ಥಿ ಪ್ರಚಂಡ ಜಯ!

ಫಲ್ತಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ದೆಬಾಂಗ್ಶು ಪಾಂಡಾ ಭಾರೀ ಅಂತರದಿಂದ ಜಯ ಸಾಧಿಸಿದ್ದಾರೆ. ಅವರು ಸುಮಾರು 1.49 ಲಕ್ಷ ಮತಗಳನ್ನು ಪಡೆದು ಗೆದ್ದಿದ್ದಾರೆ. ಸಿಪಿಎಂ ಅಭ್ಯರ್ಥಿ ಶಂಭುನಾಥ್ ಕುರ್ಮಿ ಸುಮಾರು 40 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆಶ್ಚರ್ಯಕರ ಸಂಗತಿ ಏನೆಂದರೆ, ಹಲವು ವರ್ಷಗಳಿಂದ ಬಲಿಷ್ಠವಾಗಿದ್ದ ಟಿಎಂಸಿ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇದು ಪಕ್ಷದ ಒಳಗಿನ ಅಸಮಾಧಾನ ಮತ್ತು ಸಂಘಟನಾ ದುರ್ಬಲತೆಯನ್ನು ತೋರಿಸುತ್ತದೆ.

ಬದಲಾವಣೆಯತ್ತ ಮುಖ ಮಾಡಿದ್ನಾ ಮತದಾರ!

ಈ ಕ್ಷೇತ್ರದಲ್ಲಿ ಮರುಮತದಾನ ನಡೆದಿದ್ದು, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಭದ್ರತೆಯ ನಡುವೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಒಟ್ಟು 86% ಕ್ಕಿಂತ ಹೆಚ್ಚು ಮತದಾನ ದಾಖಲಾಗಿದ್ದು, ಜನರು ಬದಲಾವಣೆಯತ್ತ ಮುಖ ಮಾಡಿದ್ದಾರೆ ಎನ್ನುವ ಸಂದೇಶ ಸ್ಪಷ್ಟವಾಗಿದೆ. ಹಿಂದಿನ ಹಂತದಲ್ಲಿ ನಡೆದ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಮರುಚುನಾವಣೆ ಘೋಷಿಸಲಾಗಿತ್ತು. ಇದರ ಪರಿಣಾಮ ಟಿಎಂಸಿಗೆ ಹಿನ್ನಡೆಯಾಯಿತು.

ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಟಿಎಂಸಿ ಅಭ್ಯರ್ಥಿ!

ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಮತದಾನಕ್ಕೂ ಕೆಲವೇ ದಿನಗಳ ಮೊದಲು ಸ್ಪರ್ಧೆಯಿಂದ ಹಿಂದೆ ಸರಿದದ್ದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿತು. ಈ ನಿರ್ಧಾರ ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸಿತು. ಹಲವು ಕಾರ್ಯಕರ್ತರು ನಿಷ್ಕ್ರಿಯರಾಗಿದ್ದು, ಮತದಾರರ ವಿಶ್ವಾಸಕ್ಕೂ ಧಕ್ಕೆ ಉಂಟಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿತಾ ಎಡ ಪಕ್ಷಗಳ ಶಕ್ತಿ!

ಇದರ ಮಧ್ಯೆ ಸಿಪಿಎಂ ಎರಡನೇ ಸ್ಥಾನಕ್ಕೆ ಏರಿರುವುದು ಎಡಪಕ್ಷಗಳ ಪುನರುತ್ಥಾನದ ಸಂಕೇತವಾಗಿದೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದ ಸಿಪಿಎಂ ಈಗ ಮತ್ತೆ ಜನರ ವಿಶ್ವಾಸ ಗಳಿಸಲು ಆರಂಭಿಸಿದೆ ಎಂಬ ಚರ್ಚೆ ನಡೆಯುತ್ತಿದೆ. ಟಿಎಂಸಿ ವಿರುದ್ಧದ ಅಸಮಾಧಾನವನ್ನು ಸಿಪಿಎಂ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ರಾಜಕೀಯ ತಜ್ಞರು ಹೇಳುವುದೇನು?

ಫಲ್ತಾ ಫಲಿತಾಂಶ ಕೇವಲ ಒಂದು ಕ್ಷೇತ್ರದ ಫಲವಲ್ಲ, ಇದು ಪಶ್ಚಿಮ ಬಂಗಾಳದ ಬದಲಾಗುತ್ತಿರುವ ರಾಜಕೀಯ ಸಮೀಕರಣದ ಪ್ರತಿಬಿಂಬವಾಗಿದೆ. ಟಿಎಂಸಿ ತನ್ನ ಸಂಘಟನೆ ಬಲಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. ಸಿಪಿಎಂಗೆ ಇದು ಹೊಸ ಆಶಾಕಿರಣವಾಗಿದ್ದರೆ, ಬಿಜೆಪಿಗೆ ಬಂಗಾಳದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವ ಅವಕಾಶವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed