Namma Metro: ಮೆಟ್ರೋ ಪ್ರಯಾಣಿಕರೇ ಇತ್ತ ಗಮನಿಸಿ, ಭಾನುವಾರ ಪರ್ಪಲ್ ಲೈನ್ ಮಾರ್ಗದಲ್ಲಿ ಬದಲಾವಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಮೆಟ್ರೋ


Last Updated:

ಮೇ 10 ಭಾನುವಾರ ಬೆಳಿಗ್ಗೆ 7 ರಿಂದ 9 ರವರೆಗೆ ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ನಲ್ಲಿ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕಬ್ಬನ್ ಪಾರ್ಕ್ ನಡುವೆ ಸಂಚಾರ ಸ್ಥಗಿತ, BMRCL ಎಚ್ಚರಿಕೆ.

ಬೆಂಗಳೂರು ಮೆಟ್ರೋ
ಬೆಂಗಳೂರು ಮೆಟ್ರೋ

ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣಿಸಲು ನಾವು ಹೆಚ್ಚಾಗಿ ಮೆಟ್ರೋವನ್ನೇ (Metro) ಅವಲಂಬಿಸುತ್ತೇವೆ. ಅದರಲ್ಲೂ ಭಾನುವಾರ (Sunday) ರಜೆ ಇರುವುದರಿಂದ ಶಾಪಿಂಗ್ ಅಥವಾ ಹೊರಗೆ ಹೋಗಲು ಪ್ಲಾನ್ ಮಾಡಿಕೊಂಡಿರುತ್ತೇವೆ. ಆದರೆ, ಬರುವ ಭಾನುವಾರ (ಮೇ 10, 2026) ನೀವು ಮೆಟ್ರೋ ಹತ್ತುವ ಮೊದಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲೇಬೇಕು. ಯಾಕಂದ್ರೆ ಅವತ್ತು ಈ ಮಾರ್ಗದಲ್ಲಿ ಮೆಟ್ರೋ ಓಡಾಡಲ್ಲ.

ಏನಿದು ಮೆಟ್ರೋ ಶಾಕ್?

ಬೆಂಗಳೂರು ಮೆಟ್ರೋ ರೈಲು ನಿಗಮ ನೀಡಿರುವ ಮಾಹಿತಿ ಪ್ರಕಾರ, ನೇರಳೆ ಮಾರ್ಗ ಅಥವಾ ಪರ್ಪಲ್ ಲೈನ್ ನಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೆಲವು ಪ್ರಮುಖ ನಿಲ್ದಾಣಗಳ ನಡುವೆ ರೈಲುಗಳ ಓಡಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾಮಗಾರಿ ಅತ್ಯಗತ್ಯವಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‍ಸಿಎಲ್ ಮನವಿ ಮಾಡಿದೆ.
ನಿರ್ವಹಣಾ ಕೆಲಸ

ಈ ಸಂಚಾರ ವ್ಯತ್ಯಯವು ಕೇವಲ ಪರ್ಪಲ್ ಲೈನ್‍ಗೆ ಮಾತ್ರ ಅನ್ವಯಿಸಲಿದೆ. ನಿರ್ವಹಣಾ ಕೆಲಸ ನಡೆಯುವ ನಿರ್ದಿಷ್ಟ ನಿಲ್ದಾಣಗಳ ನಡುವೆ ರೈಲುಗಳು ಸಂಚರಿಸುವುದಿಲ್ಲ. ಆದರೆ, ಉಳಿದ ಮಾರ್ಗಗಳಲ್ಲಿ ಅಂದರೆ ಹಸಿರು ಮಾರ್ಗದಲ್ಲಿ ಸಂಚಾರ ಎಂದಿನಂತೆ ಇರಲಿದೆ. ಕಾಮಗಾರಿ ಮುಗಿದ ನಂತರ ಅಂದರೆ ಸೋಮವಾರ ಬೆಳಿಗ್ಗೆಯಿಂದ ಎಂದಿನಂತೆ ಪೂರ್ಣ ಪ್ರಮಾಣದ ಸಂಚಾರ ಆರಂಭವಾಗಲಿದೆ.

ಯಾವ ನಿಲ್ದಾಣಗಳ ನಡುವೆ ವ್ಯತ್ಯಯ?

ಮೆಜೆಸ್ಟಿಕ್‍ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಅಂದು ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಪ್ರಯಾಣಿಕರೇ ಎಚ್ಚರ

ಭಾನುವಾರ ತುರ್ತು ಕೆಲಸಗಳಿದ್ದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಮೆಟ್ರೋ ಬದಲಿಗೆ ಬಿಎಂಟಿಸಿ ಬಸ್ ಅಥವಾ ಕ್ಯಾಬ್‍ಗಳನ್ನು ಅವಲಂಬಿಸುವುದು ಒಳ್ಳೆಯದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed