Last Updated:
Jyotika: ಅಭಿಜೀತ್ ಡಿಪ್ಕೆ ಮತ್ತು ಸೌರವ್ ದಾಸ್ ಅವರೇ, ನಾವು ತಾಯಂದಿರಾಗಿ ನಾವು ನಮ್ಮ ಮಕ್ಕಳನ್ನು ನಿಮ್ಮಂತೆಯೇ ಬೆಳೆಸಲು ಬಯಸುತ್ತೇವೆ ಎಂದ ಜ್ಯೋತಿಕಾ ಖಡಕ್ ಪೋಸ್ಟ್!
ದೆಹಲಿಯಲ್ಲಿ (Delhi) ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿ ಅಪ್ಡೇಟ್ಗಳು (Update) ಬರುತ್ತಲೇ ಇವೆ. ಹಲವಾರು ಸೆಲೆಬ್ರಿಟಿಗಳು (Celebrities) ಈ ಸಂಬಂಧವಾಗಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ (PM Modi) ಅವರು ಈಗಾಗಲೇ 2 ವಿಡಿಯೋ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಪ್ರತಿಭಟನೆಗೆ ಸಲ್ಮಾನ್ ಖಾನ್, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಇಮ್ರಾನ್ ಖಾನ್, ಶಬಾನಾ ಅಜ್ಮಿ ಮತ್ತು ಇನ್ನೂ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಇದೀಗ ತಮಿಳು ನಟಿ, ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಅವರು ಬಹಿರಂಗವಾಗಿ ಸಿಜೆಪಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲ ಸೆಲೆಬ್ರಿಟಿಗಳು ಪೋಸ್ಟ್ ಹಾಕಿದ್ದರೂ ಕೂಡಾ ಜ್ಯೋತಿಕಾ ಅವರು ಬಹಿರಂಗವಾಗಿ ಪೋಸ್ಟ್ ಹಾಕಿದ್ದು ಈಗ ಭಾರೀ ವೈರಲ್ ಆಗಿದೆ.
ಧರ್ಮೇಂದ್ರ ಪ್ರಧಾನ್ ಅವರೇ, ಹುದ್ದೆಯಿಂದ ಕೆಳಗಿಳಿಯಿರಿ. ರಾಜೀನಾಮೆ ನೀಡಿ. ನಾನು ವಿದ್ಯಾರ್ಥಿಗಳು ಮತ್ತು ನಮ್ಮ ದೇಶದ ಭವಿಷ್ಯದ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.
ನಾನು ಹೊಣೆಗಾರಿಕೆಯ ಪರವಾಗಿ ನಿಲ್ಲುತ್ತೇನೆ, ನಾನು ಪ್ರಜಾಪ್ರಭುತ್ವದ ಭಾರತದ ಪರವಾಗಿ ನಿಲ್ಲುತ್ತೇನೆ! ನಾನು ಸುಧಾರಿತ ಶಿಕ್ಷಣ ವ್ಯವಸ್ಥೆಯ ಪರವಾಗಿ ನಿಲ್ಲುತ್ತೇನೆ! ಸೋನಮ್ ವಾಂಗ್‌ಚುಕ್ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಅಭಿಜೀತ್ ಡಿಪ್ಕೆ ಮತ್ತು ಸೌರವ್ ದಾಸ್ ಅವರೇ, ನಾವು ತಾಯಂದಿರಾಗಿ ನಾವು ನಮ್ಮ ಮಕ್ಕಳನ್ನು ನಿಮ್ಮಂತೆಯೇ ಬೆಳೆಸಲು ಬಯಸುತ್ತೇವೆ. ಮುಚ್ಚುಮರೆಯಿಲ್ಲದೆ ನೇರವಾಗಿ ಮಾತನಾಡುವ ‘ಜೆನ್ ಝಡ್’ (Gen Z) ತಲೆಮಾರಿನವರಾದ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ.

ಒಟ್ಟಾಗಿ “ನಾವು” ಭಾರತ ಎಂದು ನೀವು ಸಾಬೀತುಪಡಿಸಿದ್ದೀರಿ. ಒತ್ತಡದ ವಾತಾವರಣವನ್ನು ಬ್ರೇಕ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಮ್ಮನ್ನು ನಿರ್ಭೀತರಾಗಿಸಿದ್ದಕ್ಕಾಗಿ ಧನ್ಯವಾದಗಳು ACJP. ಜೈ ಹಿಂದ್. ಜ್ಯೋತಿಕಾ ಎಂದು ಬರೆದಿದ್ದಾರೆ.
Bangalore,Karnataka
CJP Protest-Jyotika: ವಿದ್ಯಾರ್ಥಿಗಳ ಪ್ರತಿಭಟನೆಗೆ ಖ್ಯಾತ ನಟಿ ಓಪನ್ ಸಪೋರ್ಟ್! ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಸುಮ್ನೆ ಕೂರಕ್ಕಾಗಲ್ಲ ಎಂದ ಜ್ಯೋತಿಕಾ














