Namma Metro: ಮೆಟ್ರೋ ಇಳಿದರೆ ಸಾಕು, ಈಗ ನೇರ ಮನೆ-ಆಫೀಸ್‌ಗೆ ಬಸ್! ಬೆಂಗಳೂರಿನಲ್ಲಿ 6 ಹೊಸ ಫೀಡರ್ ಸೇವೆ ಆರಂಭ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

BMTC & ನಮ್ಮ ಮೆಟ್ರೋ


Last Updated:

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ಮತ್ತೊಂದು ಸಿಹಿಸುದ್ದಿ ನೀಡಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಆರು ಹೊಸ ಫೀಡರ್ ಬಸ್‌ಗಳು ಸಂಚಾರ ಆರಂಭಿಸಿದ್ದು, ಐಟಿ ಉದ್ಯೋಗಿಗಳ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸಮಸ್ಯೆಗೆ ಪರಿಹಾರ ಸಿಗಲಿದೆ.

BMTC & ನಮ್ಮ ಮೆಟ್ರೋ
BMTC & ನಮ್ಮ ಮೆಟ್ರೋ

ಬೆಂಗಳೂರು: ಪ್ರತಿದಿನ ಮೆಟ್ರೋದಲ್ಲಿ (Metro) ಆರಾಮಾಗಿ ಪ್ರಯಾಣ ಮಾಡಿ, ನಿಲ್ದಾಣದಲ್ಲಿ ಇಳಿದ ಬಳಿಕ ಆಫೀಸ್ ಅಥವಾ ಮನೆ ಸೇರಲು ಆಟೋ, ಕ್ಯಾಬ್‌ಗಳಿಗೆ (Cab) ನೂರಾರು ರೂಪಾಯಿ ಸುರಿಯುವುದು ಬೆಂಗಳೂರಿಗರ ದಿನನಿತ್ಯದ ಗೋಳಾಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ಮಾರತಹಳ್ಳಿ ಕಡೆ ಕೆಲಸ ಮಾಡುವ ಐಟಿ ಉದ್ಯೋಗಿಗಳ (IT Workers) ಪಾಡಂತೂ ದೇವರಿಗೇ ಪ್ರೀತಿ. ಆದರೆ, ಇನ್ಮುಂದೆ ಈ ಪರದಾಟಕ್ಕೆ ಸಂಪೂರ್ಣ ಬ್ರೇಕ್ (Break) ಬೀಳಲಿದೆ.

ಹಳದಿ ಹಾಗೂ ನೇರಳೆ ಮಾರ್ಗಕ್ಕೆ ಸುಗಮ ಸಂಚಾರ!

ಪ್ರಯಾಣಿಕರ ಈ ‘ಮೊದಲ ಮತ್ತು ಕೊನೆಯ ಮೈಲಿ’ ಸಂಪರ್ಕದ ಕಷ್ಟವನ್ನು ಅರಿತ ಬಿಎಂಆರ್‌ಸಿಎಲ್ ಹಾಗೂ ಬಿಎಂಟಿಸಿ ಜಂಟಿಯಾಗಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಹಳದಿ ಮಾರ್ಗದಿಂದ ನೇರಳೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಬರೋಬ್ಬರಿ ಆರು ಹೊಸ ವಿಶೇಷ ಮೆಟ್ರೋ ಫೀಡರ್ ಬಸ್‌ಗಳನ್ನು ಅಧಿಕೃತವಾಗಿ ರಸ್ತೆಗಿಳಿಸಿವೆ.

ಎಲ್ಲಿಂದ ಎಲ್ಲಿಗೆ?

ಈ ಹೊಸ ಬಸ್‌ಗಳು ಎಲ್ಲಿಂದ ಎಲ್ಲಿಗೆ ಹೋಗುತ್ತವೆ ಎನ್ನುವ ಕುತೂಹಲ ನಿಮಗಿದ್ದರೆ, ಇಲ್ಲಿದೆ ಸಂಪೂರ್ಣ ಮಾಹಿತಿ. ಪ್ರಮುಖ ಐಟಿ ಕಾರಿಡಾರ್‌ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭಿಸಿರುವ ಈ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ಹೊರಟು ಬೆನ್ನಿಗಾನಹಳ್ಳಿ ಅಂದರೆ ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಸಂಚರಿಸಲಿವೆ. ಈ ಮಾರ್ಗದಲ್ಲಿ ಒಟ್ಟು ಹನ್ನೆರಡು ಪ್ರಮುಖ ನಿಲುಗಡೆಗಳಿರಲಿವೆ. ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸ ರಸ್ತೆ, ಹರಳೂರು, ಸರ್ಜಾಪುರ ರಸ್ತೆ ಜಂಕ್ಷನ್, ಕಾಡುಬೀಸನಹಳ್ಳಿ, ಮಾರತಹಳ್ಳಿ ಸೇತುವೆ ಜಂಕ್ಷನ್, ದೊಡ್ಡನೆಕ್ಕುಂಡಿ ರೈಲ್ವೆ ಸೇತುವೆ, ಮಹದೇವಪುರ ಜಂಕ್ಷನ್, ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಮೂಲಕ ಹಾದು ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣವನ್ನು ಈ ಬಸ್‌ಗಳು ತಲುಪಲಿವೆ. ಸುತ್ತಮುತ್ತಲಿನ ವಸತಿ ಪ್ರದೇಶಗಳು ಹಾಗೂ ಐಟಿ ಪಾರ್ಕ್‌ಗಳನ್ನು ಬೆಸೆಯುವ ಅತ್ಯುತ್ತಮ ಮಾರ್ಗ ಇದಾಗಿದೆ.

ವೇಳಾಪಟ್ಟಿ ಇಲ್ಲಿದೆ

ಕಚೇರಿಗೆ ಹೋಗುವ ಧಾವಂತದಲ್ಲಿ ಬಸ್ ಮಿಸ್ ಆಗುತ್ತದೆ ಎಂಬ ಆತಂಕವೂ ಇನ್ನು ಮುಂದೆ ಬೇಡ. ಬಿಎಂಟಿಸಿ ಬಿಡುಗಡೆ ಮಾಡಿರುವ ನಿಖರ ವೇಳಾಪಟ್ಟಿಯ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ಬೆಳಗ್ಗೆ 5:30, 6:00, 6:30, 7:00, 7:40, 8:20, 9:00 ಹಾಗೂ 10:20ಕ್ಕೆ ಬಸ್‌ಗಳು ಹೊರಡಲಿವೆ. ಮಧ್ಯಾಹ್ನದ ಪಾಳಿಯಲ್ಲಿ 1:15, 2:00, 2:40, 3:10 ಹಾಗೂ 3:50ಕ್ಕೆ ಬಸ್ ಸೌಲಭ್ಯವಿದ್ದರೆ, ಸಂಜೆ ಹಾಗೂ ರಾತ್ರಿ ಕಚೇರಿ ಬಿಡುವವರಿಗಾಗಿ 4:30, 5:10, 5:50, 6:30, 7:10, 7:50, 8:30 ಹಾಗೂ ಅಂತಿಮವಾಗಿ 9:10 ಗಂಟೆಗೆ ನಿಗದಿತವಾಗಿ ಫೀಡರ್ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

ಈ ಸಮಯ ಟಿಕ್‌ ಮಾಡಿಕೊಳ್ಳಿ

ಅದೇ ರೀತಿ, ಟಿನ್ ಫ್ಯಾಕ್ಟರಿ ಅಂದರೆ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದಿಂದಲೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿರಂತರ ಬಸ್ ಸೇವೆ ಲಭ್ಯವಿದೆ. ಬೆಳಿಗ್ಗೆ 5:30, 6:00, 6:30, 7:00, 7:40, 8:20, 9:00, 9:40, 10:20, 11:00, 11:40 ಹಾಗೂ ಮಧ್ಯಾಹ್ನ 12:10ಕ್ಕೆ ಬಸ್‌ಗಳು ಹೊರಡಲಿವೆ. ತದನಂತರ ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ವೇಳೆಯಲ್ಲಿ 3:50, 4:30, 5:10, 5:50, 6:30, 7:10, 7:50, 8:30 ಹಾಗೂ ಅಂತಿಮವಾಗಿ 9:10 ಗಂಟೆಗೆ ಈ ಬಸ್‌ಗಳು ಮರಳಿ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಪ್ರಯಾಣ ಬೆಳೆಸಲಿವೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗುವುದರಿಂದ ಪ್ರಯಾಣಿಕರ ಅಮೂಲ್ಯ ಸಮಯ ಗಣನೀಯವಾಗಿ ಉಳಿತಾಯವಾಗಲಿದೆ.

ಯಾರಿಗೆಲ್ಲಾ ಉಪಯೋಗ?

ಇದನ್ನೂ ಓದಿ: Big Warning: ಪ್ರವಾಸ ಮುಂದೂಡಿ, ರಾಜ್ಯದಲ್ಲಿ ಭೂ ಕುಸಿತದ ಎಚ್ಚರಿಕೆ ಕೊಟ್ಟ IMD; 3 ಜಿಲ್ಲೆಗೆ ಭಾರೀ ಮಳೆ! ರೆಡ್‌ ಅಲರ್ಟ್ ಘೋಷಣೆ

ಈ ಹೊಸ ವ್ಯವಸ್ಥೆಯಿಂದಾಗಿ ಸಾವಿರಾರು ಐಟಿ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಆರ್ಥಿಕವಾಗಿಯೂ ಬಹಳಷ್ಟು ಉಪಯೋಗಗಳಿವೆ. ಮೆಟ್ರೋ ನಿಲ್ದಾಣದಲ್ಲಿ ಇಳಿದು ದುಬಾರಿ ಕ್ಯಾಬ್‌ಗಳಿಗಾಗಿ ಕಾಯುವ ಬದಲು, ನೇರವಾಗಿ ಈ ಆರ್ಥಿಕ ಹೊರೆಯಿಲ್ಲದ ಫೀಡರ್ ಬಸ್ ಹತ್ತಿ ಕಚೇರಿ ಅಥವಾ ಮನೆ ತಲುಪಬಹುದು. ಇದರಿಂದ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಿ ಸಿಲ್ಕ್ ಬೋರ್ಡ್, ಮಾರತಹಳ್ಳಿಯಂತಹ ಹೊರವರ್ತುಲ ರಸ್ತೆಯ ಪ್ರಮುಖ ಏರಿಯಾಗಳಲ್ಲಿ ಖಾಸಗಿ ವಾಹನಗಳ ದಟ್ಟಣೆ ಹಾಗೂ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ ಅಧಿಕೃತ ಬಿಎಂಟಿಸಿ ಬಸ್‌ಗಳಾಗಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ರಾತ್ರಿ ವೇಳೆಯಲ್ಲೂ ಅತ್ಯಂತ ಸುರಕ್ಷಿತ ಪ್ರಯಾಣ ಒದಗಿಸಿದಂತಾಗುತ್ತದೆ. ಹೀಗಾಗಿ, ನಿಮ್ಮ ದಿನನಿತ್ಯದ ಪ್ರಯಾಣವನ್ನು ಇನ್ನಷ್ಟು ಸುಲಭ, ಸುರಕ್ಷಿತ ಹಾಗೂ ತಡೆರಹಿತವಾಗಿಸಲು ಈ ವಿಶೇಷ ಫೀಡರ್ ಬಸ್ ಸೇವೆಗಳನ್ನು ತಪ್ಪದೇ ಸದುಪಯೋಗಪಡಿಸಿಕೊಳ್ಳಿ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಕಳಕಳಿಯ ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed