“ಮುಖ್ಯಮಂತ್ರಿಗಳ ಭಾಷಣಗಳು ಮತ್ತು ಭೇಟಿಗಳನ್ನು ನಿಯಂತ್ರಿಸುವ” ಡಿಎಂಕೆ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ರಾಜಕೀಯ ದ್ವೇಷವನ್ನು ಇತ್ಯರ್ಥಪಡಿಸಿಕೊಳ್ಳಲು ಉನ್ನತ ನ್ಯಾಯಾಂಗ ವೇದಿಕೆಯನ್ನು ಬಳಸುತ್ತಿರುವ ವಿರೋಧ ಪಕ್ಷವನ್ನು ಟೀಕಿಸಿತು.
“ನೀವು ಹೇಳೋಕೆ ಹೊರಟಿರೋದೇನು? ಮುಖ್ಯಮಂತ್ರಿಯೊಬ್ಬರು ಏನು ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಬೇಕೆಂದು ನೀವು ಕೇಳುತ್ತಿದ್ದೀರಾ? ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
“ವಾಕ್ ಸ್ವಾತಂತ್ರ್ಯದ ಮೇಲೆ ತಡೆಯಾಜ್ಞೆ ಬೇಕಾ? ನೀವೇ ಸ್ವಂತ ಭಾಷಣ ಮಾಡುತ್ತೀರಿ. ಸಿಬಿಐ ತಂಡಕ್ಕೆ ಹಸ್ತಾಂತರಿಸಿರುವ ಒಂದು ಕೇಸ್ ಸಂಬಂಧ ರಾಜಕೀಯ ಪ್ರತಿಸ್ಪರ್ಧಿ ಕೊಟ್ಟಿರೋ ಹೇಳಿಕೆಯ ವಿರುದ್ಧ ಕೋರ್ಟ್ ಹೇಗೆ ಆದೇಶ ನೀಡಲು ಸಾಧ್ಯ?” ಎಂದು ನ್ಯಾಯಾಲಯ ಡಿಎಂಕೆ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರನ್ನು ಪ್ರಶ್ನಿಸಿತು.
ನಂತರ ಡಿಎಂಕೆ ಮನವಿಯನ್ನು ಹಿಂಪಡೆಯುವುದಕ್ಕೆ ಅನುಮತಿಸಬೇಕೆಂದು ವಿನಂತಿಸಿತು. ಇದಕ್ಕೆ ನ್ಯಾಯಾಲಯವು ಒಪ್ಪಿಕೊಂಡಿತು, ಅರ್ಜಿಯನ್ನು ಹಿಂಪಡೆಯುವಂತೆ ಆದೇಶಿಸಿತು.
ಇದಕ್ಕೂ ಮೊದಲು, ಡಿಎಂಕೆ ಪರ ವಕೀಲರು “ಆರೋಪಿಗಳು ಮಾನಿಪುಲೇಟ್ ಮಾಡುತ್ತಿದ್ದಾರೆ” ಎಂದು ಹೇಳಿದ್ದರು. ಸೋಮವಾರ, ನ್ಯಾಯಾಲಯವು ಅರ್ಜಿಯನ್ನು ತುರ್ತು ಆಧಾರದ ಮೇಲೆ ವಿಚಾರಣೆ ಮಾಡಲು ಒಪ್ಪಿಕೊಂಡಿತ್ತು.
ಏಪ್ರಿಲ್-ಮೇ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ನಟ-ರಾಜಕಾರಣಿ ವಿಜಯ್ ಅವರ ಹೊಸ ರಾಜಕೀಯ ಪಕ್ಷವಾದ ತಮಿಳ ವೆಟ್ರಿ ಕಳಗಂ ಮತ್ತು ಅವರ ಇತರ ಸದಸ್ಯರು ಸಾಕ್ಷಿಗಳ ಮೇಲೆ ‘ಪ್ರಭಾವಿ’ ಮಾಡಬಹುದು ಎಂದು ಅರ್ಜಿದಾರರು ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.
ಜುಲೈ 10 ರಂದು ಕರೂರ್ಗೆ ಮುಖ್ಯಮಂತ್ರಿ ವಿಜಯ್ ಅವರ ಪ್ರಸ್ತಾವಿತ ಭೇಟಿಯನ್ನು ಉಲ್ಲೇಖಿಸಿ ಅವರು ಅಲ್ಲಿನ ಜನರನ್ನು ಪ್ರಭಾವಿಸಬಹುದೆಂದು ಆರೋಪಿಸಿದ್ದರು.
ಈ ಸಭೆಯಲ್ಲಿ ಮುಖ್ಯಮಂತ್ರಿಯವರು ಮೃತಪಟ್ಟವರ ಕುಟುಂಬಗಳಿಗೆ ಅಪಾಯಿಂಟ್ಮೆಂಟ್ ಲೆಟರ್ ಮತ್ತು ಆರ್ಥಿಕ ನೆರವು ನೀಡುವುದಕ್ಕೆ ಉದ್ದೇಶಿಸಲಾಗಿದೆ. ಈಗ ನಡೆಯುತ್ತಿರುವ ಫೆಡರಲ್ ತನಿಖೆಯ ಭಾಗವಾಗಿರಬಹುದಾದ ಸಾಕ್ಷಿಗಳ ಮೇಲೆ ಸಿಎಂ ಅವರ ಈ ನಡೆ ‘ಪ್ರಭಾವ’ ಪ್ರಭಾವ ಬೀರಬಹುದು ಎಂದು ಡಿಎಂಕೆ ಹೇಳಿಕೊಂಡಿದೆ.
ಕರೂರ್ ಕಾಲ್ತುಳಿತದ ಬಗ್ಗೆ “ಇತ್ಯರ್ಥ ಮಾಡಿಕೊಳ್ಳಲು ಸಮಸ್ಯೆ ಇದೆ” ಎಂದು ಟಿವಿಕೆ ಮುಖಂಡ ಆಧವ್ ಅರ್ಜುನ ಜುಲೈ 2 ರಂದು ನೀಡಿದ್ದ ಹೇಳಿಕೆಗೆ ವಿರೋಧ ಪಕ್ಷ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಲ್ತುಳಿತದ ಸಮಯದಲ್ಲಿ ಅಧಿಕಾರದಲ್ಲಿದ್ದ ಡಿಎಂಕೆ “ಪೊಲೀಸರ ಮೂಲಕ ಕರೂರಿನ ಜನರನ್ನು ಕೊಂದಿತು” ಎಂದು ಅವರು ಹೇಳಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದ ದುರಂತ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ವಿಜಯ್ ಅವರ ಚುನಾವಣಾ ಪ್ರಚಾರ ಭಾಷಣಕ್ಕಾಗಿ ಅಪಾರ ಜನರು ಕಾಯುತ್ತಿದ್ದಾಗ 41 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು.
ನಮ್ಮ ನಾಯಕರು ತನಿಖೆಗೆ ಸಹಕರಿಸುತ್ತಾರೆ. ಇದು ಸತ್ಯವನ್ನು ಹೊರತರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಟಿವಿಕೆ ಮೂಲವೊಂದು ಎನ್ಡಿಟಿವಿಗೆ ಹೇಳಿತ್ತು ಎಂದು ವರದಿ ಮಾಡಲಾಗಿದೆ.












