Music Director: ಬಣ್ಣ ಹಚ್ಚಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಮ್ಯೂಸಿಕ್ ಡೈರೆಕ್ಟರ್; ಯಾರು ಗೊತ್ತಾ? | | ACTPnews

ಬಣ್ಣ ಹಚ್ಚಿದ ಮ್ಯೂಸಿಕ್ ಡೈರೆಕ್ಟರ್!


Last Updated:

ಟಾಲಿವುಡ್‌ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ನಾಯಕರಾಗಿದ್ದಾರೆ. ಯಲ್ಲಮ್ಮ ಅನ್ನುವ ಈ ಚಿತ್ರದ ದೇವಿ ಶ್ರೀ ಪ್ರಸಾದ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದರ ಅಧಿಕೃತ ವಿಷಯ ಇಲ್ಲಿದೆ ಓದಿ.

ಬಣ್ಣ ಹಚ್ಚಿದ ಮ್ಯೂಸಿಕ್ ಡೈರೆಕ್ಟರ್!
ಬಣ್ಣ ಹಚ್ಚಿದ ಮ್ಯೂಸಿಕ್ ಡೈರೆಕ್ಟರ್!

ಟಾಲಿವುಡ್ (Tollywood) ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ (Devi Sri Prasad) ಬಣ್ಣ ಹೆಚ್ಚುತ್ತಿದ್ದಾರೆ. ಸುಮ್ನೆ ಒಂದು ಪಾತ್ರ ಅನ್ಕೋಬೇಡಿ. ಇಡೀ ಚಿತ್ರದಲ್ಲಿ (Movie) ಇವರು ಇರ್ತಾರೆ. ಹಾಗಂತ ಪ್ರಮುಖ ರೋಲ್ ಅಂತಲೂ ತಿಳಿಯಬೇಡಿ. ಈ ಚಿತ್ರಕ್ಕೆ ಇವರೇ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಇವರ ಪಾತ್ರಕ್ಕೆ ರೆಟ್ರೋ ಟಚ್ (Retro Touch) ಇದೆ. ಈ ಲುಕ್‌ನ ಫಸ್ಟ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.

‘ಯಲ್ಲಮ್ಮ’ ಸಿನಿಮಾ ಹೆಸರು

ದೇವಿ ಶ್ರೀ ಪ್ರಸಾದ್ ಒಪ್ಪಿರೋ ಸಿನಿಮಾ ಹೆಸರು ‘ಯಲ್ಲಮ್ಮ’ ಅಂತಲೇ ಇದೆ. ಈ ಚಿತ್ರದಲ್ಲಿ ದೇವಿ ಶ್ರೀ ಪ್ರಸಾದ್ ನಾಯಕ ಆಗಿದ್ದಾರೆ. ಈ ನಾಯಕನ ಹೆಸರು ಕೂಡ ಮಜವಾಗಿದೆ.
Bigg Boss-13 Sudeepa Promo Release Latest Updates

ಈ ಚಿತ್ರದ ಡೈರೆಕ್ಟರ್ ಯಾರು

(ಚಿತ್ರ ಕೃಪೆ: ದೇವಿ ಶ್ರೀ ಪ್ರಸಾದ್ ಇನ್‌ಸ್ಟಾಗ್ರಾಮ್)

ಪರ್ಶಿ ಅನ್ನುವ ಪಾತ್ರವನ್ನೆ ದೇವಿ ಪ್ರಸಾದ್ ಇಲ್ಲಿ ಮಾಡಿದ್ದಾರೆ. ಈ ಪಾತ್ರದ ಲುಕ್ ರಿವೀಲ್ ಆಗಿದೆ. ಇದನ್ನ ನೋಡಿದಾಗ ಇಡೀ ಚಿತ್ರ ರೆಟ್ರೋ ಕತೆ ಹೊಂದಿದೆ ಅನಿಸುತ್ತದೆ.

ಫಸ್ಟ್ ಲುಕ್ ಅಲ್ಲಿ ಏನಿದೆ

ಈ ಒಂದು ಲುಕ್ ಅಲ್ಲಿ ದೇವಿ ಪ್ರಸಾದ್ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದಾರೆ. ಕ್ಲೀನ್ ಶೇವ್ ಲುಕ್ ಅಲ್ಲಿದ್ದಾರೆ. ಕೈಯಲ್ಲಿ ಕಿರೀಟ ಇದೆ.

ದೇವಿ ಪ್ರಸಾದ್ ಜನ್ಮ ದಿನ

ದೇವಿ ಪ್ರಸಾದ್ ಅವರು ಆಗಸ್ಟ್-2 ರಂದು ಜನ್ಮ ದಿನ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿಯೇ ಯಲ್ಲಮ್ಮ ಚಿತ್ರದ ಪೋಸ್ಟರ್ ಹೊರ ಬಂದಿದೆ.

ಈ ದಿನವೇ ಚಿತ್ರದ ಮೋಷನ್ ಪೋಸ್ಟರ್ ಕೂಡ ಹೊರ ಬಂದಿದೆ. ಇದು ಎಲ್ಲರ ಮಗನ ಸೆಳೆಯುತ್ತಿದೆ. ಈ ಚಿತ್ರದ ಡೈರೆಕ್ಟರ್ ಯಾರು? ಚಿತ್ರದ ಇತರ ವಿಚಾರಗಳೇನು ಅನ್ನೋದು ಮುಂದೆ ಇದೆ ಓದಿ.

Bigg Boss-13 Sudeepa Promo Release Latest Updates

ದೇವಿ ಪ್ರಸಾದ್ ಜನ್ಮ ದಿನ

(ಚಿತ್ರ ಕೃಪೆ: ದೇವಿ ಶ್ರೀ ಪ್ರಸಾದ್ ಇನ್‌ಸ್ಟಾಗ್ರಾಮ್)

ಈ ಚಿತ್ರದ ಡೈರೆಕ್ಟರ್ ಯಾರು

ಈ ಚಿತ್ರವನ್ನ ವೇಣು ಯೆಲ್ದಾಂಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಬಳಗಂ ಸಿನಿಮಾ ಮಾಡಿದ್ದರು. ಈ ಚಿತ್ರ ಇವರಿಗೆ ಅತಿ ದೊಡ್ಡ ಖ್ಯಾತಿಯನ್ನ ತಂದುಕೊಟ್ಟಿದೆ.

ಈ ಚಿತ್ರದ ಒಂದು ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದಕ್ಕೆ ಬಳಕೆ ಮಾಡಿರೋ ಹಿನ್ನೆಲೆ ಸಂಗೀತ ತುಂಬಾನೆ ಚೆನ್ನಾಗಿದೆ. ಅಷ್ಟೆ ವಿಶೇಷವಾಗಿಯೇ ಇದು ಕೇಳುತ್ತದೆ.

ಯಲ್ಲಮ್ಮ ಗ್ಲಿಂಪ್ಸ್

ಕಳೆದ 6 ತಿಂಗಳ ಹಿಂದೆ ಈ ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್ ಆಗಿದೆ. ಇದು ತುಂಬಾನೆ ಚೆನ್ನಾಗಿದೆ. ಯಲ್ಲಮ್ಮನ ಪರಿಚಯ ಇಲ್ಲಿ ವಿಶೇಷವಾಗಿದೆ. ಬೇವಿನ ಎಲೆ ಮೂಲಕವೇ ಇಲ್ಲಿ ತೋರಿಸಿರೋದು ಸ್ಪೆಷಲ್ ಆಗಿದೆ.

ಈ ಚಿತ್ರಕ್ಕೆ ದೇವಿ ಪ್ರಸಾದ್ ನಾಯಕರಷ್ಟೆ ಅಲ್ಲ, ಮ್ಯೂಸಿಕ್ ಕೂಡ ಇವರೇ ಮಾಡಿದ್ದಾರೆ. ಇವರ ಈ ಚಿತ್ರದ ಗ್ಲಿಂಪ್ಸ್ ಪ್ರಾಮಿಸಿಂಗ್ ಆಗಿದೆ. ಈ ಚಿತ್ರ ತೆಲುಗು, ತಮಿಳು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed