Mount Everest: ಎವರೆಸ್ಟ್‌ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅರುಣ್ ಕುಮಾರ್ ತಿವಾರಿ


Last Updated:

ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್‌ನಲ್ಲಿಯೇ ಬಿಡಲು ನಿರ್ಧರಿಸಿದೆ.

ಅರುಣ್ ಕುಮಾರ್ ತಿವಾರಿ
ಅರುಣ್ ಕುಮಾರ್ ತಿವಾರಿ

ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್‌ (Hyderabad) ನ 53 ವರ್ಷದ ವೃತ್ತಿಪರ ಟೆಕ್ ಅರುಣ್ ಕುಮಾರ್ ತಿವಾರಿ (Arun Kumar Tiwari) ಕಳೆದ ವಾರ ಮೌಂಟ್ ಎವರೆಸ್ಟ್ ಮೇಲೆ ಭಾರತ (India) ದ ಧ್ವಜವನ್ನು ಹಾರಿಸಿದರು. ಇದರೊಂದಿಗೆ, ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಏರುವ ತಮ್ಮ ಬಹುದಿನಗಳ ಕನಸನ್ನು ನನಸಾಗಿಸಿಕೊಂಡಿದ್ದರು. ಮೌಂಟ್ ಎವರೆಸ್ಟ್ ಹತ್ತಿದ ಖುಷಿ ಕ್ಷಣ ಮಾತ್ರ ಉಳಿಯಲಿಲ್ಲ. ಶಿಖರವನ್ನು ಇಳಿಯುವಾಗ ದುರಂತ ನಡೆದಿತ್ತು.

ಶಿಖರವನ್ನು ಇಳಿಯುವಾಗ ದುರಂತ ನಡೆದಿತ್ತು.

ಅರುಣ್ ಕುಮಾರ್ ತಿವಾರಿ ಎವರೆಸ್ಟ್ ಶಿಖರದಿಂದ ಕೇವಲ 60 ಮೀಟರ್ ಕೆಳಗೆ ಹಿಲರಿ ಸ್ಟೆಪ್ ಬಳಿ ಬಿದ್ದು ಸಾವನ್ನಪ್ಪಿದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್‌ನಲ್ಲಿಯೇ ಬಿಡಲು ನಿರ್ಧರಿಸಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಪರ್ವತಗಳ ಮೇಲಿನ ಅರುಣ್‌ ಅವರ ಆಳವಾದ ಪ್ರೀತಿ ಮತ್ತು ಅವರ ಮೃತದೇಹವನ್ನು ಅಷ್ಟು ಎತ್ತರದಿಂದ ಕೆಳಗೆ ತರುವ ಅಸಾಧ್ಯತೆ.

ಕುಟುಂಬಸ್ಥರ ನಿರ್ಧಾರ

ಹೌದು, ಅರುಣ್ ಕುಮಾರ್ ತಿವಾರಿ ಅವರ ಪರ್ವತಗಳ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರ ಕುಟುಂಬವು ಹಿಮಾಲಯದ ಮಡಿಲಲ್ಲಿ ಅವರಿಗೆ ಶಾಶ್ವತವಾಗಿ ಶಾಂತಿ ಸಿಗಲು ನಿರ್ಧರಿಸಿದೆ. ಇದಕ್ಕಾಗಿ ಅರುಣ್ ಮೃತದೇಹವನ್ನು ಎವರೆಸ್ಟ್‌ನಲ್ಲಿಯೇ ಬಿಡಲು ಅವರ ಕುಟಂಬಸ್ಥರು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಮತ್ತೊಂದು ಕಾರಣ, ಡೆತ್ ಝೋನ್‌ನಿಂದ ಮೃತದೇಹವನ್ನು ಹೊರತೆಗೆಯುವುದು ಅಸಾಧ್ಯವಾಗಿದೆ.

ಮೃತದೇಹವನ್ನು ಕೆಳಗೆ ತರುವುದು ಕಷ್ಟ ಏಕೆ?

ಈ ಪರ್ವತಾರೋಹಣವನ್ನು ನಡೆಸುವ ಸಂಸ್ಥೆಯಾದ ಪಯೋನೀರ್ ಅಡ್ವೆಂಚರ್, ಆರಂಭದಲ್ಲಿ ಮೃತದೇಹವನ್ನು 8,000 ಮೀಟರ್‌ಗಳಿಗಿಂತ ಹೆಚ್ಚು ಎತ್ತರದಿಂದ ಕೆಳಗೆ ತರಲು 11 ಮಿಲಿಯನ್ (1.1 ಕೋಟಿ ರೂ) ಎಂದು ಅಂದಾಜಿಸಿತು. ಆದರೆ ನಂತರ ಅದನ್ನು ಸುಮಾರು 90 ಲಕ್ಷ ರೂಪಾಯಿಗಳಿಗೆ ಇಳಿಸಿತು. ಈ ಮೊತ್ತವು ಎವರೆಸ್ಟ್ ಏರುವ ಸಾಮಾನ್ಯ ವೆಚ್ಚಕ್ಕಿಂತ (ಸುಮಾರು 43 ಲಕ್ಷ ರೂ) ಎರಡು ಪಟ್ಟು ಹೆಚ್ಚಾಗಿದೆ.

ಶಿಖರದ ಮೇಲಿರುವ ಸವಾಲುಗಳೇನು?

ಈ ಘಟನೆ ಬಗ್ಗೆ ಪಯೋನೀರ್ ಅಡ್ವೆಂಚರ್‌ನ ಮಾಲೀಕ ನಿವೇಶ್ ಕರ್ಕಿ ಮಾತನಾಡಿದ್ದಾರೆ. 8,000 ಮೀಟರ್‌ಗಿಂತ ಹೆಚ್ಚಿನ ಪ್ರದೇಶವನ್ನು “ಡೆತ್ ಝೋನ್‌” ಎಂದು ಕರೆಯಲಾಗುತ್ತದೆ. ಅಲ್ಲಿ ತೀವ್ರ ಆಮ್ಲಜನಕದ ಕೊರತೆ ಮತ್ತು ಮೈ ಕೊರೆಯುವ ಚಳಿ ಇರುತ್ತದೆ. ಡೆತ್ ಝೋನ್‌ನಿಂದ ಮೃತದೇಹವನ್ನು ಕೆಳಗೆ ತರುವುದು ಹೆಚ್ಚು ಅಪಾಯಕಾರಿ ಕೆಲಸವಾಗಿರುತ್ತದೆ ಎಂದು ಹೇಳಿದರು.

ಹಿಮದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಮೃತದೇಹವನ್ನು ಕೊಡಲಿಯಿಂದ ಕತ್ತರಿಸಲು ಎಂಟರಿಂದ ಹತ್ತು ಅನುಭವಿ ಶೆರ್ಪಾಗಳು ಹಲವಾರು ದಿನಗಳವರೆಗೆ ಅಲ್ಲಿಯೇ ಇರಬೇಕಾಗುತ್ತದೆ. ನಂತರ ಶವವನ್ನು ಹಗ್ಗಗಳಿಂದ ಕಟ್ಟಿ ಅಪಾಯಕಾರಿ ಹಿಮಪಾತ ಪೀಡಿತ ಮಾರ್ಗಗಳ ಮೂಲಕ 6,400 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ II ಗೆ ತರಬೇಕಾಗುತ್ತದೆ. ಇದು ಶೆರ್ಪಾಗಳ ಜೀವಗಳಿಗೆ ನೇರ ಅಪಾಯವನ್ನು ತರಬಹುದು ಎಂದು ನಿವೇಶ್ ಕರ್ಕಿ ತಿಳಿಸಿದರು.

ಸಾವಿಗೂ ಮುನ್ನ ಎಚ್ಚರಿಕೆ!

ಕ್ಯಾಂಪ್ 4 ರಿಂದ ಅಂತಿಮ ಆರೋಹಣವನ್ನು ಪ್ರಾರಂಭಿಸಿದ ಕೂಡಲೇ ಅರುಣ್ ಕುಮಾರ್ ತಿವಾರಿ ತುಂಬಾ ದಣಿದಿದ್ದರು ಎಂದು ನಿವೇಶ್ ಕರ್ಕಿ ಹೇಳಿದರು. ಆದರೆ ಅವರ ವೈಯಕ್ತಿಕ ಶೆರ್ಪಾ ಮಾರ್ಗದರ್ಶಿ ಪದೇ ಪದೇ ಕೆಳಗೆ ಇಳಿಯುವಂತೆ ಸಲಹೆ ನೀಡಿದ್ದರೂ ಅವರು ಅದನ್ನು ಮುಂದುವರಿಸಿದರು. ಶಿಖರವು ಸ್ಪಷ್ಟವಾಗಿ ಗೋಚರಿಸುವಾಗ ಮತ್ತು ತಲುಪಬಹುದಾದ ದೂರದಲ್ಲಿದ್ದಾಗ, ತಿವಾರಿ ತಮ್ಮ ಕನಸನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು ಎಂದು ಕರ್ಕಿ ಮಾಹಿತಿ ನೀಡಿದರು.

ಹಿಲರಿ ಸ್ಟೆಪ್ಸ್ ಬಳಿ ರಕ್ತ ವಾಂತಿ

ಅರುಣ್ ಶಿಖರವನ್ನು ತಲುಪಿದರು. ಆದರೆ ಹಿಲರಿ ಮೆಟ್ಟಿಲು ಬಳಿ ಇಳಿಯುವಾಗ, ಅವರು ರಕ್ತ ವಾಂತಿ ಮಾಡಲು ಪ್ರಾರಂಭಿಸಿದರು. ಈ ಸ್ಥಳವು ಎವರೆಸ್ಟ್‌ನ ಡೆತ್ ಝೋನ್‌ನಲ್ಲಿ ಆಳವಾಗಿದೆ. 8,000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿದೆ. ಅಲ್ಲಿ ಅತ್ಯಂತ ತೆಳುವಾದ ಗಾಳಿಯು ಮಾನವ ದೇಹವನ್ನು ವೇಗವಾಗಿ ದುರ್ಬಲಗೊಳಿಸುತ್ತದೆ. ಶೆರ್ಪಾಗಳು ಅವರಿಗೆ ಪೂರಕ ಆಮ್ಲಜನಕವನ್ನು ನೀಡುವ ಮೂಲಕ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರು ತಕ್ಷಣವೇ ನಿಧನರಾದರು ಎಂದು ಕರ್ಕಿ ಸಾವಿನ ಬಗ್ಗೆ ತಿಳಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed