Yogaraj Bhat: ‘ನಗಾರಿ’ ಪದವನ್ನು ಕೈಬಿಟ್ಟ ಟಾಕ್ಸಿಕ್ ತಂಡ; ‘ತಬಾಹಿ’ಗೆ ಶಿಫ್ಟ್ ಆಗಿದ್ದೇಕೆ? | | ACTPnews

ಟಾಕ್ಸಿಕ್ 'ತಬಾಹಿ' ಪದದ ಬದಲು 'ನಗಾರಿ' ಅಂತ ಭಟ್ರು ಯಾಕ್ ಬರೆದಿದ್ದರು?


Last Updated:

ಟಾಕ್ಸಿಕ್ ಚಿತ್ರದಲ್ಲಿ ಯೋಗರಾಜ್ ಭಟ್ರು ಒಂದಲ್ಲ, ಎರಡಲ್ಲ, ಮೂರು ಹಾಡು ಬರೆದಿದ್ದಾರೆ. ಮೂರಕ್ಕೆ ಮೂರು ಬೇರೆ ರೀತಿಯ ಹಾಡುಗಳೇ ಆಗಿವೆ. ಇದಕ್ಕೂ ಹೆಚ್ಚಾಗಿ ಮುಂಬೈಯಲ್ಲಿ ಯಶ್ ಸೃಷ್ಟಿ ಮಾಡಿರೋ ಮಿನಿ ಕರ್ನಾಟಕವನ್ನ ನೋಡಿಯೇ ಸಿಕ್ಕಾಪಟ್ಟೆ ಖುಷಿ ಆಗಿ ಬಿಟ್ಟಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಟಾಕ್ಸಿಕ್ 'ತಬಾಹಿ' ಪದದ ಬದಲು 'ನಗಾರಿ' ಅಂತ ಭಟ್ರು ಯಾಕ್ ಬರೆದಿದ್ದರು?
ಟಾಕ್ಸಿಕ್ ‘ತಬಾಹಿ’ ಪದದ ಬದಲು ‘ನಗಾರಿ’ ಅಂತ ಭಟ್ರು ಯಾಕ್ ಬರೆದಿದ್ದರು?

ತಬಾಹಿ (Tabaahi) ಪದದ ಬದಲು ಯೋಗರಾಜ್ ಭಟ್ರು ‘ನಗಾರಿ’ (Nagaari) ಅನ್ನುವ ಪದವನ್ನೆ ಬಳಕೆ ಮಾಡಿದ್ದಾರೆ. ನಗಾರಿ ನಗಾರಿ ಅಂತಲೂ ಹಾಡು ಬರೆದೇ ಬಿಟ್ಟಿದ್ದರು. ಆದರೆ, ತಬಾಹಿ ಹಾಡಿಗೆ (Tabaahi Song) ಈ ಪದವೇ ಸೂಕ್ತ ಅಂತ ಮೊದಲೇ ತಂಡ ನಿರ್ಧಾರ ಮಾಡಿತ್ತು. ಹಾಗಾಗಿಯೇ ಭಟ್ರು ತಬಾಹಿ ಅಂತಲೇ ಪದ ಬಳಕೆ ಮಾಡಿದರು. ಮ್ಯೂಸಿಕ್ ಡೈರೆಕ್ಟರ್ ವಿಶಾಲ್ ಮಿಶ್ರಾ (Vishal Mishra) ಅವರ ಕೆಲಸವನ್ನು ಮೆಚ್ಚಿಕೊಂಡ ಯೋಗರಾಜ್ ಭಟ್ರು, ತಬಾಹಿ ಹಾಡಿನ ಇಂಟ್ರಸ್ಟಿಂಗ್ ವಿಷಯನ್ನು ಹೇಳಿಕೊಂಡಿದ್ದಾರೆ. ಕನ್ನಡದ ಯಶ್ ಮುಂಬೈ ಅಲ್ಲಿ ಒಂದು ಮಿನಿ ಕರ್ನಾಟಕವನ್ನೆ ಹುಟ್ಟುಹಾಕಿದ್ದಾರೆ ಅಂತಲೂ ಬಣ್ಣಿಸಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ತಬಾಹಿ ಸೀಕ್ರೆಟ್

ಯೋಗರಾಜ್ ಭಟ್ರು ಈ ಒಂದು ಹಾಡನ್ನ ಬರೆಯೋಕೆ ಮುಂಬೈಗೇನೆ ಹೋಗಿದ್ದರು. ಹೋಗುವಾಗಲೇ ಹಾಡಿನ ಸ್ಟ್ರಕ್ಚರ್ ಅನ್ನ ಮನಸ್ಸಲ್ಲಿಯೇ ರೆಡಿ ಮಾಡಿಕೊಂಡಿದ್ದರು.
toxic movie tabaahi song unknown facts reveal by yogaraj bhat

ತಬಾಹಿ ಸೀಕ್ರೆಟ್

(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)

ಒಂದು ಹಾಡು ಬರೆಯೋಕೆ ಎಷ್ಟು ಟೈಮ್ ಬೇಕೋ ಅದಕ್ಕಿಂತಲೂ ಕಡಿಮೆ ಸಮಯದಲ್ಲಿಯೇ ಬರೆದು ಮುಗಿಸಿದರು. ಆದರೆ, ಒಂದಷ್ಟು ಬದಲಾವಣೆಗಳೂ ಇದ್ದೇ ಇರುತ್ತವೆ. ಆ ಪ್ರಕಾರ ಬದಲಾವಣೆ ಕೂಡ ಆಗಿದೆ.

ತಬಾಹಿ ಬದಲು ನಗಾರಿ

ತಬಾಹಿ ಅನ್ನುವ ಪದವನ್ನ ಚಿತ್ರ ತಂಡ ಮೊದಲೇ ಫಿಕ್ಸ್ ಮಾಡಿಕೊಂಡಿತ್ತು. ಈ ಪದ ಎಲ್ಲರೂ ಸರ್ಚ್ ಮಾಡಿದರೂ ಸಿಗಬೇಕು ಅಂತಲೇ ಯೋಚನೆ ಮಾಡಿಯೇ ಇಟ್ಟಿದ್ದರು.

ಆದರೂ ಯೋಗರಾಜ್ ಭಟ್ರು ತಮ್ಮದೇ ಒಂದು ವರ್ಶನ್ ಬರೆದಿದ್ದರು. ತಬಾಹಿ ಪದದ ಬದಲು ನಗಾರಿ ಅನ್ನುವ ಪದವನ್ನೆ ಹಾಕಿದ್ದರು. ಆದರೆ, ಮೊದಲೇ ನಿರ್ಧರಿಸಿದ್ದ ತಬಾಹಿ ಅನ್ನುವ ಪದವನ್ನ ಹಾಕಿಯೇ ಈ ಒಂದು ತಬಾಹಿ ಹಾಡು ಬರೆದರು.

ವಿಶಾಲ್ ಮಿಶ್ರಾ ಬಗ್ಗೆ ಹೇಳೋದೇನು

ಗಾಯಕ-ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರ ಸಂಗೀತದ ತಾಕತ್ತಿನ ಬಗ್ಗೆ ಯೋಗರಾಜ್ ಭಟ್ರು ಮೆಚ್ಚುಗೆ ಮಾತುಗಳನ್ನೆ ಆಡಿದ್ದಾರೆ. ಸ್ವರಗಳ ಮೇಲೆ ಕುಳಿತು ಹಾಡಬಲ್ಲ ಶಕ್ತಿ ವಿಶಾಲ್ ಮಿಶ್ರಾ ಅವರಿಗೆ ಇದೆ ಅಂತಲೇ ಯೋಗರಾಜ್ ಭಟ್ರು ಹೇಳಿಕೊಂಡಿದ್ದಾರೆ.

toxic movie tabaahi song unknown facts reveal by yogaraj bhat

ತಬಾಹಿ ಬದಲು ನಗಾರಿ

(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)

ಯೋಗರಾಜ್ ಭಟ್ರಿಗೆ ಇವರ ಹೈ ಪಿಚ್ ಸಿಂಗಿಂಗ್ ತುಂಬಾನೆ ಇಷ್ಟ ಆಗಿದೆ. ತಬಾಹಿ ಅಂತ ಹಾಡುವ ಶಕ್ತಿಯನ್ನ ಇವರು ಬಹುವಾಗಿಯೇ ಕೊಂಡಾಡಿದ್ದಾರೆ. ಇವರ ಮಾತುಗಳಲ್ಲಿ ವಿಶಾಲ್ ಮಿಶ್ರಾ ಪ್ರತಿಭೆನೂ ಎದ್ದು ಕಾಣಿಸುತ್ತದೆ.

ಮಿನಿ ಕರ್ನಾಟಕವೇ ಸೃಷ್ಟಿ

ಹಾಗೆ ಯಶ್ ಮುಂಬೈಯಲ್ಲಿ ಒಂದು ಮಿನಿ ಕರ್ನಾಟಕವನ್ನೆ ಸೃಷ್ಟಿ ಮಾಡಿದ್ದಾರೆ ನೋಡಿ. ಯಶ್ ಆಫೀಸ್ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು ಇಲ್ಲಿ ಕೆಲಸ ಮಾಡುತ್ತಿದ್ದಾ. ಬೆಂಗಳೂರಿನಿಂದ ಯಾರಾದರು ಬರ್ತಿದ್ದರೆ ಊಟ ತರಿಸಿಕೊಳ್ಳುವುದು ಇದೆ.

ಮುದ್ದೆ ಊಟ ಬಂದಿತ್ತು

ನಾನು ಮುಂಬೈಗೆ ಹೋದಾಗ ಮುದ್ದೆ ಊಟ ಬಂದಿತ್ತು. ರಾಧಿಕಾ ಪಂಡಿತ್ ಇದನ್ನ ಮಾಡಿ ಕಳಿಸಿದ್ದರು. ನಾನು ಇದನ್ನ ತಿಂದಿದ್ದೇನೆ ಅಂತಲೂ ಭಟ್ರು ಹೇಳಿಕೊಂಡಿದ್ದಾರೆ.

ಭಟ್ರಿಗೆ ಮುಂಬೈಯಲ್ಲಿ ಯಶ್ ಮಾಡಿರೋ ಈ ಎಲ್ಲ ಸೆಟ್‌ ಅಪ್ ನೋಡಿಯೇ ಖುಷಿನೂ ಆಗಿದೆ. ಹಾಗೆ ತಬಾಹಿ ಅಷ್ಟೆ ಅಲ್ಲ. ಭಟ್ರು ಇನ್ನೂ ಎರಡು ಹಾಡನ್ನು ಈ ಟಾಕ್ಸಿಕ್ ಚಿತ್ರಕ್ಕೆ ಬರೆದಿದ್ದಾರೆ.

ಇವುಗಳಲ್ಲಿ ಒಂದು ಶೋಕ ಗೀತೆ ಆಗಿದೆ. ಇದರಲ್ಲಿ ವೇದಾಂತವೂ ಇದೆ. ಮತ್ತೊಂದು ಫೀಮೇಲ್ ಸೋಲೋ ಆಗಿದೆ. ಇದು ಪ್ರೇಮ ಗೀತೆ ಆಗಿದೆ. ಈ ಎಲ್ಲ ವಿಷಯಗಳನ್ನ ಯೋಗರಾಜ್ ಭಟ್ರು ಟಿವಿ-9 ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports