ಆ ಸಿನಿಮಾ ಪ್ರೇಮಲು. 2024 ರ ಮಲಯಾಳಂ ಹಿಟ್ ಚಿತ್ರ ಪ್ರೇಮಲು ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್ ಪ್ರೇಮಲು 2 ಇನ್ನು ಮುಂದೆ ಬಿಡುಗಡೆಯಾಗೋದು ಡೌಟ್ ಎನ್ನಲಾಗುತ್ತಿದೆ. ನಿರೀಕ್ಷೆಗಳಿಗೆ ತಕ್ಕಂತೆ ಸ್ಕ್ರಿಪ್ಟ್ ರೂಪಿಸಲು ಸಾಧ್ಯವಾಗದ ನಂತರ ತಯಾರಕರು ಯೋಜನೆಯನ್ನು ಅನಿರ್ದಿಷ್ಟವಾಗಿ ಮುಂದೂಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸೀಕ್ವೆಲ್ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹವನ್ನು ಹುಟ್ಟುಹಾಕಿತ್ತು. ವಿಶೇಷವಾಗಿ ಪ್ರಮುಖ ನಟರಾದ ನಸ್ಲೆನ್ ಮತ್ತು ಮಮಿತಾ ಬೈಜು ಅವರನ್ನು ಮನೆಮಾತನ್ನಾಗಿ ಮಾಡಿದ ಸಿನಿಮಾದ ಭಾರಿ ಯಶಸ್ಸಿನ ನಂತರ ಇದರ ಬಗ್ಗೆ ಒಂದು ಕ್ರೇಜ್ ಹುಟ್ಟಿತ್ತು.
ಆದರೆ ಹಲವು ಪ್ರಯತ್ನಗಳ ನಂತರವೂ ಸಿನಿಮಾ ಕ್ರಿಯೇಟಿವ್ ಟೂಮ್ ಸಿನಿಮಾದ ಸೀಕ್ವೆಲ್ಗಾಗಿ ಚಂದದ ಕಥೆ ಪಡೆದಿಲ್ಲ. ಅವರ ದೃಷ್ಟಿಕೋನಕ್ಕೆ ಸರಿಹೊಂದುವ ಸ್ಕ್ರಿಪ್ಟ್ ಅನ್ನು ರೂಪಿಸಲು ಸಾಧ್ಯವಾಗಲಿಲ್ಲ. ಇದೀಗ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಗಿರೀಶ್ ಎಡಿ ನಿರ್ದೇಶನದ ಪ್ರೇಮಲು 2024 ರ ಅತಿದೊಡ್ಡ ಮಲಯಾಳಂ ಹಿಟ್‌ಗಳಲ್ಲಿ ಒಂದಾಗಿದೆ. ಈ ಪ್ರಣಯ ಹಾಸ್ಯ ಚಿತ್ರವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕಳೆದುಹೋದ ಸಚಿನ್ ಎಂಬ ಯುವಕನ ಕಥೆಯನ್ನು ತೋರಿಸಿದೆ. ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ವೀಸಾ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಅದು ವಿಫಲಗೊಳ್ಳುತ್ತದೆ.
ಅವರು ಹೈದರಾಬಾದ್‌ಗೆ ತೆರಳಿ ತನ್ನ ಆಪ್ತ ಸ್ನೇಹಿತನೊಂದಿಗೆ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಾ ಸಮಯ ಕಳೆಯುತ್ತಾರೆ. ಅವರು ಐಟಿ ಉದ್ಯೋಗಿ ರೀನು ಅವರನ್ನು ಭೇಟಿಯಾಗುತ್ತಾರೆ. ಅವಳನ್ನು ಪ್ರೀತಿಸುತ್ತಾರೆ. ಅವನ ಜೀವನ ಅನಿರೀಕ್ಷಿತ ತಿರುವು ಪಡೆಯುತ್ತದೆ.
ಲವ್-ಬ್ರೇಕಪ್ ಮತ್ತು ಸ್ವಯಂ ಅನ್ವೇಷಣೆಯ ಮಧ್ಯೆ ಜೀವನದಲ್ಲಿ ಸೋತಿದ್ದಾಗ ಸಚಿನ್ ತನ್ನ ಪ್ರೀತಿಯನ್ನು ಗೆಲ್ಲುವ ಪ್ರಯತ್ನಗಳನ್ನು ಹಾಸ್ಯಮಯ ರೀತಿಯಲ್ಲಿ ಈ ಚಿತ್ರವು ತೋರಿಸಿದೆ.
ಈ ಚಿತ್ರದಲ್ಲಿ ಸಂಗೀತ ಪ್ರತಾಪ್, ಅಖಿಲಾ ಭಾರ್ಗವನ್, ಶ್ಯಾಮ್ ಮೋಹನ್, ಮೀನಾಕ್ಷಿ ರವೀಂದ್ರನ್, ಮ್ಯಾಥ್ಯೂ ಥಾಮಸ್ ಮತ್ತು ಅಲ್ತಾಫ್ ಸಲೀಂ, ನಸ್ಲೆನ್ ಮತ್ತು ಮಮಿತಾ ಬೈಜು ಅವರಂತಹ ಪ್ರತಿಭಾನ್ವಿತ ಚಿತ್ರತಂಡವೂ ಇತ್ತು. ಈ ಚಿತ್ರವನ್ನು ಗಿರೀಶ್ ಎಡಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ ಮತ್ತು ಫಹದ್ ಫಾಸಿಲ್, ದಿಲೀಶ್ ಪೋಥನ್ ಮತ್ತು ಶ್ಯಾಮ್ ಪುಷ್ಕರನ್ ಅವರು ತಮ್ಮ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಿದ್ದಾರೆ.
ಏತನ್ಮಧ್ಯೆ, ಇಬ್ಬರು ಪ್ರಮುಖ ನಟರು ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ನಸ್ಲೆನ್ ಅಭಿನವ್ ಸುಂದರ್ ನಾಯಕ್ ನಿರ್ದೇಶನದ ಮಾಲಿವುಡ್ ಟೈಮ್ಸ್ ಅನ್ನು ರಿಲೀಸ್ಗೆ ಸಿದ್ಧರಾಗಿದ್ದಾರೆ. ಇದು ಜೂನ್ 5, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಅವರು ಟಿಕಿ ಟಕಾ, ತಾತ್ಕಾಲಿಕವಾಗಿ ಹೆಸರಿಸಲಾದ ಸೂರ್ಯ 47 ಮತ್ತು ಬ್ಯಾಚುಲರ್ ಪಾರ್ಟಿ ಡಿ’ಯುಕ್ಸ್ ಸೇರಿದಂತೆ ಹಲವಾರು ಮುಂಬರುವ ಸಿನಿಮಾಗಳಲ್ಲಿಯೂ ನಿರತರಾಗಿದ್ದಾರೆ.
ಇತ್ತೀಚೆಗೆ ಕಾರಾ ಚಿತ್ರದಲ್ಲಿ ಧನುಷ್ ಜೊತೆ ಕಾಣಿಸಿಕೊಂಡ ಮಮಿತಾ ಬೈಜು ಕೂಡ ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ಅವರು ಮುಂದೆ ವಿಷ್ಣು ವಿಶಾಲ್ ಜೊತೆ ‘ಇರಂಡು ವಾನಂ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಅವರ ‘ಜನ ನಾಯಗನ್’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.












