Last Updated:
ದೇವಾಲಯಗಳಲ್ಲಿ ದೇವರ ಫೋಟೋ ತೆಗೆಯಬಾರದು, ದೇಗುಲದ ಒಳಗೆ ಮೊಬೈಲ್ ಬಳಸಬಾರದು ಅಂತ ಬೋರ್ಡ್ಗಳು ಹಾಕಿರುತ್ತಾರೆ. ಆದರೆ ಭಕ್ತರು ಕೇಳೋದೇ ಇಲ್ಲ. ಮೊಬೈಲ್ ತೆಗೆದುಕೊಂಡು ದೇವರಿಗೂ ಕಿರಿಕಿರಿ ಮಾಡ್ತಾರೆ! ಆದರೆ ಇನ್ಮುಂದೆ ತಮಿಳುನಾಡು ದೇವಸ್ಥಾನಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ.
ಚೆನ್ನೈ: ದೇವಾಲಯಗಳಲ್ಲಿ (temples) ದೇವರ ಫೋಟೋ (God’s Photo) ತೆಗೆಯಬಾರದು, ದೇಗುಲದ ಒಳಗೆ ಮೊಬೈಲ್ ಬಳಸಬಾರದು ಅಂತ ಬೋರ್ಡ್ಗಳು ಹಾಕಿರುತ್ತಾರೆ. ಆದರೆ ಭಕ್ತರು ಕೇಳೋದೇ ಇಲ್ಲ. ಮೊಬೈಲ್ ತೆಗೆದುಕೊಂಡು ದೇವರಿಗೂ ಕಿರಿಕಿರಿ ಮಾಡ್ತಾರೆ! ಆದರೆ ಇನ್ಮುಂದೆ ತಮಿಳುನಾಡು ದೇವಸ್ಥಾನಗಳಲ್ಲಿ (Tamil Nadu’s Temple) ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ (HR&CE) ಸಚಿವ ಎಸ್. ರಮೇಶ್ (S Ramesh) ತಮಿಳುನಾಡು ರಾಜ್ಯಾದ್ಯಂತ ಪ್ರಮುಖ ದೇವಾಲಯಗಳ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸೆಪ್ಟೆಂಬರ್ 1 ರಿಂದ ನಿಷೇಧಿಸಲಾಗುವುದು (Mobile Phone Ban) ಎಂದು ಹೇಳಿದ್ದಾರೆ.














