Mission Aagaman: ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ! ಖಾಸಗಿ ಉಪಗ್ರಹ ವಿಕ್ರಮ್ -1 ಉಡಾವಣೆ ವಿಳಂಬ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಂ-1 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಇಂದು ಬೆಳಗ್ಗೆ 11.30ಕ್ಕೆ ಉಡಾವಣೆಯಾಗಬೇಕಿತ್ತು, ಆದರೆ ತಾಂತ್ರಿಕ ದೋಷದಿಂದ ಮಿಷನ್ ಆಗಮನ್ (Mission Aagaman) ಹೆಸರಿನ ಈ ಉಪಗ್ರಹ ಉಡಾವಣಾ ಕಾರ್ಯಕ್ರಮ ವಿಳಂಬಗೊಂಡಿದೆ. 

News18
News18

ಶ್ರೀಹರಿಕೋಟಾ: ಖಾಸಗಿಯಾಗಿ ತಯಾರಿಸಿದ ಭಾರತದ ಮೊದಲ ಬಾಹ್ಯಾಕಾಶ ನೌಕೆ, ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಂ-1 (Skyroot Aerospace) ಉಡಾವಣೆ ವಿಳಂಬವಾಗಿದೆ.

ಭಾರತದ ಮೊದಲ ಬಾಹ್ಯಾಕಾಶ ನೌಕೆ, ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಂ-1 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಇಂದು ಬೆಳಗ್ಗೆ 11.30ಕ್ಕೆ ಉಡಾವಣೆಯಾಗಬೇಕಿತ್ತು, ಆದರೆ ತಾಂತ್ರಿಕ ದೋಷದಿಂದ ಮಿಷನ್ ಆಗಮನ್ (Mission Aagaman) ಹೆಸರಿನ ಈ ಉಪಗ್ರಹ ಉಡಾವಣಾ ಕಾರ್ಯಕ್ರಮ ವಿಳಂಬಗೊಂಡಿದೆ.

ಇದನ್ನೂ ಓದಿ: Vikram-1 Launch: ಐತಿಹಾಸಿಕ ಮೈಲಿಗಲ್ಲಿಗೆ ಕ್ಷಣಗಣನೆ, ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್ -1’ ಇಂದು ಉಡಾವಣೆ

ಹೈದರಾಬಾದ್‌ನ ಖಾಸಗಿ ಸ್ಪೇಸ್ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಇಂದು ತನ್ನ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ವಿಕ್ರಮ್-1 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಬೇಕಿತ್ತು. ಆ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಬೇಕಿತ್ತು. ಸದ್ಯ ವಿಜ್ಞಾನಿಗಳು ತಾಂತ್ರಿಕ ದೋಷವನ್ನು ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ನಂತರ ಪುನಃ ಇ ಉಪಗ್ರಹ ಉಡಾವಣೆ ಆಗಲಿದೆ.

‘ಮಿಷನ್ ಆಗಮನ್’ ಹೆಸರಿನಲ್ಲಿ ಈ ರಾಕೆಟ್ ಉಡಾವಣೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ (SDSC-SHAR) ನ ಮೊದಲ ಲಾಂಚ್ ಪ್ಯಾಡ್‌ನಿಂದ ಇಂದು ಬೆಳಗ್ಗೆ 11:30 ಗಂಟೆಗೆ ಉಡಾವಣೆಯಾಗಬೇಕಿತ್ತು. ಆದರೆ ಕೊನೇಕ್ಷಣದಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಕಂಡುಬಂದ ಕಾರಣ, ನಿಗದಿತ ಸಮಯಕ್ಕೆ ರಾಕೆಟ್ ಲಾಂಚ್ ಸ್ಥಗಿತಗೊಂಡು ಮುಂದೂಡಲ್ಪಟ್ಟಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed