Last Updated:
ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಂ-1 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಇಂದು ಬೆಳಗ್ಗೆ 11.30ಕ್ಕೆ ಉಡಾವಣೆಯಾಗಬೇಕಿತ್ತು, ಆದರೆ ತಾಂತ್ರಿಕ ದೋಷದಿಂದ ಮಿಷನ್ ಆಗಮನ್ (Mission Aagaman) ಹೆಸರಿನ ಈ ಉಪಗ್ರಹ ಉಡಾವಣಾ ಕಾರ್ಯಕ್ರಮ ವಿಳಂಬಗೊಂಡಿದೆ.
ಶ್ರೀಹರಿಕೋಟಾ: ಖಾಸಗಿಯಾಗಿ ತಯಾರಿಸಿದ ಭಾರತದ ಮೊದಲ ಬಾಹ್ಯಾಕಾಶ ನೌಕೆ, ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಂ-1 (Skyroot Aerospace) ಉಡಾವಣೆ ವಿಳಂಬವಾಗಿದೆ.
ಭಾರತದ ಮೊದಲ ಬಾಹ್ಯಾಕಾಶ ನೌಕೆ, ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ವಿಕ್ರಂ-1 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಇಂದು ಬೆಳಗ್ಗೆ 11.30ಕ್ಕೆ ಉಡಾವಣೆಯಾಗಬೇಕಿತ್ತು, ಆದರೆ ತಾಂತ್ರಿಕ ದೋಷದಿಂದ ಮಿಷನ್ ಆಗಮನ್ (Mission Aagaman) ಹೆಸರಿನ ಈ ಉಪಗ್ರಹ ಉಡಾವಣಾ ಕಾರ್ಯಕ್ರಮ ವಿಳಂಬಗೊಂಡಿದೆ.
ಹೈದರಾಬಾದ್‌ನ ಖಾಸಗಿ ಸ್ಪೇಸ್ ಸ್ಟಾರ್ಟಪ್ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಇಂದು ತನ್ನ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ವಿಕ್ರಮ್-1 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಬೇಕಿತ್ತು. ಆ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಬೇಕಿತ್ತು. ಸದ್ಯ ವಿಜ್ಞಾನಿಗಳು ತಾಂತ್ರಿಕ ದೋಷವನ್ನು ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ನಂತರ ಪುನಃ ಇ ಉಪಗ್ರಹ ಉಡಾವಣೆ ಆಗಲಿದೆ.
‘ಮಿಷನ್ ಆಗಮನ್’ ಹೆಸರಿನಲ್ಲಿ ಈ ರಾಕೆಟ್ ಉಡಾವಣೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ (SDSC-SHAR) ನ ಮೊದಲ ಲಾಂಚ್ ಪ್ಯಾಡ್‌ನಿಂದ ಇಂದು ಬೆಳಗ್ಗೆ 11:30 ಗಂಟೆಗೆ ಉಡಾವಣೆಯಾಗಬೇಕಿತ್ತು. ಆದರೆ ಕೊನೇಕ್ಷಣದಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಕಂಡುಬಂದ ಕಾರಣ, ನಿಗದಿತ ಸಮಯಕ್ಕೆ ರಾಕೆಟ್ ಲಾಂಚ್ ಸ್ಥಗಿತಗೊಂಡು ಮುಂದೂಡಲ್ಪಟ್ಟಿತು.
New Delhi,Delhi
Jul 18, 2026 12:02 PM IST














