Last Updated:
ಮೇಘ ಶೆಟ್ಟಿ ಸೂಪರ್ ಆಗಿ ಕಾಣಿಸುತ್ತಿದ್ದಾರೆ. ಸಿಂಪಲ್ ಡ್ರೆಸ್ ಅಲ್ಲೂ ಅಷ್ಟೆ ಚೆಂದಗೆ ಹೊಳೆಯುತ್ತಿದ್ದಾರೆ. ಇವರ ಈ ಒಂದು ವಿಡಿಯೋದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡದ ನಟಿ ಮೇಘಾ ಶೆಟ್ಟಿ (Megha Shetty) ಈಗೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಇದರಲ್ಲಿ ಇವರು ಧರಿಸಿರೋ ಬಟ್ಟೆ ತುಂಬಾನೆ ಸಿಂಪಲ್ ಆಗಿವೆ. ಬ್ರೌನ್ ಬಣ್ಣದ ಮ್ಯಾಕ್ಸಿ ಸ್ಕರ್ಟ್ (Brown Maxi Skirt) ಹಾಕಿದ್ದಾರೆ. ಬಿಳಿ ಕಲರ್ ಕ್ರಾಪ್ ಟಾಪ್ (Crop Top) ಧರಿಸಿದ್ದಾರೆ. ಓಪನ್ ಹೇರ್ ಬಿಟ್ಟಿದ್ದಾರೆ. ಒಂಚೂರು ಮೇಕ್‌ಅಪ್ ಮಾಡಿದಂತೆ ಇದೆ. ಎಷ್ಟು ಬೇಕೋ ಅಷ್ಟು ಎಕ್ಸಸರೀಸ್ ಇವೆ. ಅದು ಬಿಟ್ಟರೆ, ಇಲ್ಲಿ ಸೌಂದರ್ಯ ಸಮರವೇ ನೋಡಿ. ಆ ರೀತಿಯ ಈ ಫೋಟೋ ಶೂಟ್‌ನ ಒಂದು ವಿಡಿಯೋವನ್ನು ಕೂಡ ಮೇಘಾ ಶೆಟ್ಟಿ (Megha Shetty) ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿಷಯ ಹೇಳೋಕೆ ಇದೆ. ಅದರ ವಿವರ ಇಲ್ಲಿದೆ ಓದಿ.
ಇದಕ್ಕೆ ಕಾಮೆಂಟಾ, ಕಾಂಪ್ಲಿಮೆಂಟಾ
(ಚಿತ್ರ ಕೃಪೆ: ಮೇಘಾ ಶೆಟ್ಟಿ ಇನ್‌ಸ್ಟಾಗ್ರಾಮ್)
ಈ ಸೀರಿಯಲ್ ನಿಂದಲೇ ಮೇಘಾ ಶೆಟ್ಟಿ ಮನೆ ಮಾತಾಗಿದ್ದಾರೆ. ಸಿನಿಮಾಗಳನ್ನು ಮಾಡಿದ್ದಾರೆ. ಧನ್ವೀರ್ ಜೊತೆಗೆ ಕೈವ ಚಿತ್ರ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಚಿತ್ರದಲ್ಲೂ ನಟಿಸಿದ್ದಾರೆ. ವಿನಯ್ ರಾಜ್‌ಕುಮಾರ್ ಜೊತೆಗೆ ಗ್ರಾಮಾಯಣ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರ ಇನ್ನು ರಿಲೀಸ್ ಆಗಬೇಕಿದೆ. ಆದರೆ, ಸೀರಿಯಲ್ ಅಲ್ಲಿ ಸಿಕ್ಕ ನೇಮ್ ಆ್ಯಂಡ್ ಫೇಮ್ ಸಿನಿಮಾರಂಗದಲ್ಲಿ ಇನ್ನು ಸಿಕ್ಕಿಲ್ಲ ನೋಡಿ.
ಮೇಘಾ ಶೆಟ್ಟಿ ಸದ್ಯದ ಫೋಟೋ ಶೂಟ್ ಅಲ್ಲಿ ಸಿಂಪಲ್ ಡ್ರೆಸ್ ತೊಟ್ಟಿದ್ದಾರೆ. ಬಿಳಿ ಬಣ್ಣದ ಕ್ರಾಪ್ ಟಾಪ್ ಇದೆ. ಬ್ರೌನ್ ಕಲರ್ ಮ್ಯಾಕ್ಸಿ ಸ್ಕರ್ಟ್ ಹಾಕಿದ್ದಾರೆ.
ಆದರೆ, ಇಲ್ಲಿ ಹೇರ್ ಟೈ ಮಾಡಿಲ್ಲ. ಬದಲಾಗಿ ಓಪನ್ ಬಿಟ್ಟಿದ್ದಾರೆ. ಇದು ಒಟ್ಟು ಲುಕ್‌ಗೆ ಹೊಸ ಕಳೆ ತಂದುಕೊಟ್ಟಿದೆ. ಈ ಫೋಟೋ ಶೂಟ್ ಅನ್ನ ಇನ್ನಷ್ಟು ಸುಂದರಗೊಳಿಸಿರೋದು ಬೇರೆ ಏನೋ ಅಲ್ಲ. ಅದು ಮೇಘಾ ಶೆಟ್ಟಿ ಅವರ ಸ್ಮೈಲ್ ಅಂತಲೂ ಬಣ್ಣಿಸಬಹುದು.
ಮೇಘಾ ಶೆಟ್ಟಿ ಚಾರ್ಮಿಂಗ್ ಫೇಸ್ ಹೊಂದಿದ್ದಾರೆ. ಅಷ್ಟೆ ಚೆನ್ನಾಗಿಯೇ ಕಾಣಿಸುತ್ತಾರೆ. ಆದರೆ, ಇಲ್ಲಿ ಎಕ್ಸಸರೀಸ್ ಅಂತ ಬಂದ್ರೆ ಹೆಚ್ಚಿಗೆ ಏನೂ ಕಾಣಿಸೋದಿಲ್ಲ. ಕಿವಿಯಲ್ಲಿ ಚೆಂದದ ಓಲೆ ಹಾಕಿದ್ದಾರೆ ಅನಿಸುತ್ತದೆ.
ಇದರ ಹೊರತಾಗಿ ಇಲ್ಲಿ ಇವರ ಸ್ಮೈಲ್ ಹೆಚ್ಚು ಹೊಳೆಯುತ್ತದೆ. ಒಳ್ಳೆ ಫೋಟೋಗ್ರಾಫಿ ಮತ್ತು ಅಷ್ಟೆ ಚೆನ್ನಾಗಿ ವಿಡಿಯೋ ಕೂಡ ಮಾಡಿದ್ದಾರೆ. ಇದನ್ನ ಸ್ವತಃ ಮೇಘಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ.
ಮೇಘಾ ಸೌಂದರ್ಯದ ಗುಟ್ಟು
(ಚಿತ್ರ ಕೃಪೆ: ಮೇಘಾ ಶೆಟ್ಟಿ ಇನ್‌ಸ್ಟಾಗ್ರಾಮ್)
ಮೇಘಾ ಶೆಟ್ಟಿ ಅವರ ಈ ಫೋಟೋ ಶೂಟ್ ವಿಡಿಯೋವನ್ನು ಅನೇಕರು ನೋಡಿದ್ದಾರೆ. ಕಾಮೆಂಟ್ ಬಾಕ್ಸ್ ಅಲ್ಲಿ ಕಾಂಪ್ಲಿಮೆಂಟ್ ಕೂಡ ಹಾಕಿದ್ದಾರೆ. ಆ ಕಾಂಪ್ಲಿಮೆಂಟ್‌ಗಳು ಈ ರೀತಿ ಇವೆ.
-Wow nice, beautiful ಅನು ಬಂಗಾರ
-Love you mam
ಆದರೆ, ಇದೇ ಕಾಮೆಂಟ್ ಬಾಕ್ಸ್ ಅಲ್ಲಿ ಒಂದು ವಿಶೇಷ ಕಾಂಪ್ಲಿಮೆಂಟ್ ಇದೆ. ಇದನ್ನ ಕನ್ನಡ ಇಂಡಸ್ಟ್ರಿಯ ನಾಯಕಿ ನಟಿ ಹಾಕಿದ್ದಾರೆ.
ನಟಿ ಸೋನಲ್ ಮೊಂಥೆರೋ ಇಲ್ಲಿ ಕಾಂಪ್ಲಿಂಮೆಂಟ್ ಹಾಕಿದ್ದಾರೆ. ಒಂದಲ್ಲ, ಎರಡು ರೆಡ್ ಹಾರ್ಟ್ ಇಮೋಜಿ ಹಾಕಿದ್ದಾರೆ. ಈ ಮೂಲಕ ಅನು ಸೂಪರ್ ಅಂತಲೂ ಹೇಳಿದ್ದಾರೆ.
ಈ ರೀತಿ ಸುಮಾರು ಇಮೋಜಿಗಳಿವೆ. ಹಾಗೆ ಇಲ್ಲಿ ಯಾರೂ ಕೆಟ್ಟದಾಗಿ ಕಾಮೆಂಟ್ ಹಾಕಿಲ್ಲ. ಇಲ್ಲಿರೋದೆಲ್ಲ ಒಪ್ಪಿಕೊಳ್ಳುವಂತೇನೆ ಇವೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jun 09, 2026 11:09 PM IST













