Last Updated:
ಕೊನೆಯ ಓವರ್‌ವರೆಗೂ ಸಾಗಿದ ಈ ಅತ್ಯಂತ ರೋಚಕ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ಕೈಯಲ್ಲಿದ್ದ ಗೆಲುವನ್ನ ಖಸಿದುಕೊಂಡರು.
ತ್ರಿಕೋನ ಸರಣಿಯ (Tri Series) ಮೊದಲ ಪಂದ್ಯದಲ್ಲಿ ಶ್ರೀಲಂಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡವು 8 ರನ್‌ಗಳ ರೋಚಕ ಜಯ ದಾಖಲಿಸಿದೆ. ಇಲ್ಲಿನ ರಂಗಿರಿ ಡಂಬುಲ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ (Team India) 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 277 ರನ್ಗಳಿಸಿತ್ತು. ಉಪನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಶತಕ ಸಿಡಿಸಿ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಆದರೆ ಕೊನೆಯ ಓವರ್‌ವರೆಗೂ ಸಾಗಿದ ಈ ಅತ್ಯಂತ ರೋಚಕ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ಕೈಯಲ್ಲಿದ್ದ ಗೆಲುವನ್ನ ಕಸಿದುಕೊಂಡರು. ಶ್ರೀಲಂಕಾ ತಂಡ 49 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಯ 269ಕ್ಕೆ ಆಲೌಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ತಿಲಕ್ ವರ್ಮಾ ನೇತೃತ್ವದ ಭಾರತ ‘ಎ’ ತಂಡವು ಆರಂಭಿಕ ಆಘಾತ ಎದುರಿಸಿತು. ವೈಭವ್ ಸೂರ್ಯವಂಶಿ (14 ರನ್) ಮತ್ತು ಪ್ರಭ್‌ಸಿಮ್ರನ್ ಸಿಂಗ್ (2 ರನ್) ಅಲ್ಪ ಮೊತ್ತಕ್ಕೆ ಔಟಾದರು. 3ನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿದ್ದ ಪ್ರಿಯಾಂಶ್ ಆರ್ಯ ಗಾಯಕ್ವಾಡ್ ಜೊತೆಗೆ ಸಂವಹನ ಕೊರತೆಯಿಂದಾಗಿ ರನ್‌ಔಟ್ ಆದರು. ಅವರು 32 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 32 ರನ್ಗಳಿಸಿದರು.
ಭಾರತ ತಂಡ ಕೇವಲ 69 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಸ್ಟಾರ್ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಆಸರೆಯಾಗಿ ನಿಂತರು. ಜವಾಬ್ದಾರಿಯುತ ಆಟವಾಡಿದ ಗಾಯಕ್ವಾಡ್ ತಮ್ಮ ಲಿಸ್ಟ್-ಎ ವೃತ್ತಿಜೀವನದ 21ನೇ ಶತಕ (101 ರನ್) ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದ ಕಡೆಗೆ ಮುನ್ನಡೆಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ತಿಲಕ್ ವರ್ಮಾ ನಿಧಾನಗತಿಯ ಅರ್ಧಶತಕದ ಕಾಣಿಕೆ ನೀಡಿದರು. ಈ ಜೋಡಿಯು 4ನೇ ವಿಕೆಟ್‌ಗೆ 150 ರನ್‌ಗಳ ಅಮೂಲ್ಯ ಜೊತೆಯಾಟ ಪ್ರದರ್ಶಿಸಿತು. ಗಾಯಕ್ವಾಡ್ 114 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ಗಳ ಸಹಿತ 101 ರನ್ಗಳಿಸಿ ಔಟ್ ಆದರು. ಗಾಯಕ್ವಾಡ್ ಔಟ್ ಆದ ಕೇವಲ 6 ರನ್‌ಗಳ ಅಂತರದಲ್ಲಿ ತಿಲಕ್ ವರ್ಮಾ ಕೂಡ ನಿರ್ಗಮಿಸಿದರು. ತಿಲಕ್ 97 ಎಸೆತಗಳನ್ನಾಡಿ ಕೇವಲ 2 ಬೌಂಡರಿ, 1 ಸಿಕ್ಸರ್ ಸಹಿತ 60 ರನ್ಗಳಿಸಿ ನಿರ್ಗಮಿಸಿದರು.
ಕೊನೆಯಲ್ಲಿ ಸೂರ್ಯನ್ಶ್ ಶೆಡ್ಗೆ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಶೆಡ್ಗೆ 14 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 26 ರನ್ಗಳಿಸಿದರು. ಆಯುಷ್ ಬದೋನಿ 18 ಎಸೆತಗಳಲ್ಲಿ 24 ರನ್ಗಳಿಸಿದರು.
ಶ್ರೀಲಂಕಾ ಪರ ಮೊಹಮ್ಮದ್ ಶಿರಾಜ್ 67ಕ್ಕೆ2, ಚಮಿಕಾ ಕರುಣರತ್ನೆ, ಗರುಕ ಸಂಕೇತ್, ವನುಜಾ ಸಹನ್ ತಲಾ 1 ವಿಕೆಟ್ ಪಡೆದರು.
ನಂತರ 278 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ‘ಎ’ ತಂಡ ಮೊದಲ ವಿಕೆಟ್ ಜೊತೆಯಾಟದಲ್ಲಿ 93 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿತು. ಆರಂಭಿಕರಾದ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ 45 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 47, ಅವಿಸ್ಕಾ ಫರ್ನಾಂಡೊ 59 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 45 ರನ್ಗಳಿಸಿದ್ದರು. ಈ ಇಬ್ಬರನ್ನ ಅರೆಕಾಲಿಕ ಸ್ಪಿನ್ನರ್ ಆಯುಷ್ ಬದೋನಿ ಪೆವಿಲಿಯನ್ ಸೇರಿಸಿ ಭಾರತಕ್ಕೆ ಬ್ರೇಕ್ ನೀಡಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಬಂದ ನುವನಿದು ಫರ್ನಾಂಡೊ ಕೇವಲ 8 ರನ್ಗಳಿಸಿ ವಿಪ್ರಜ್ ನಿಗಮ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಒಂದಾದ ಸದೀರ ಸಮರವಿಕ್ರಮ ಹಾಗೂ ನಾಯಕ ಸಹನ್ ಅರಾಚ್ಚಿಗೆ 78 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಶ್ರೀಲಂಕಾ 187ಕ್ಕೆ3 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿತ್ತು. ಆದರೆ 51 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 46 ರನ್ಗಳಿಸಿದ್ದ ಸಮರವಿಕ್ರಮ ವಿಕೆಟ್ ಪಡೆಯುವ ಮೂಲಕ ಅನುಕುಲ್ ರಾಯ್ ಭಾರತ ಮತ್ತೆ ಪಂದ್ಯಕ್ಕೆ ಮರಳುವಂತೆ ಮಾಡಿದರು. ರಾಯ್ ಮತ್ತೆ ತಮ್ಮ ಮುಂದಿನ ಓವರ್ನಲ್ಲಿ ರವಿಂದು ಫರ್ನಾಂಡೋ ವಿಕೆಟ್ ಪಡೆದು ಪಂದ್ಯವನ್ನ ಮತ್ತಷ್ಟು ರೋಚಕ ಹಂತಕ್ಕೆ ಕೊಂಡೊಯ್ದರು.
ದಿಢೀರ್ ಕುಸಿತದಿಂದ ಆಘಾತಕ್ಕೆ ಒಳಗಾಗಿದ್ದ ಶ್ರೀಲಂಕಾ ತಂಡಕ್ಕೆ ನಾಯಕ ಅರಾಚ್ಚಿಗೆ ಹಾಗೂ ಕರುಣರತ್ನೆ ಮತ್ತೆ ಜೀವ ತುಂಬಿದರು. ಈ ಇಬ್ಬರು 6ನೇ ವಿಕೆಟ್‌ಗೆ 42 ರನ್ ಸೇರಿಸಿದರು. ಕರುಣರತ್ನೆ 21 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ ವಿಪ್ರಜ್ಗೆ 2ನೇ ಬಲಿಯಾದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದು ಕಡೆ ಏಕಾಂಗಿಯಾಗಿ ಹೋರಾಟ ನಡೆಸಿದ ನಾಯಕ ಅರಾಚ್ಚಿಗೇ 72 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ಸಹಿತ 74 ರನ್ಗಳಿಸಿ ಅನ್ಶುಲ್ ಕಾಂಬೋಜ್ಗೆ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ ತಂಡಕ್ಕೆ ಕೊನೆಯ 18 ಎಸೆತಗಳಲ್ಲಿ ಗೆಲ್ಲಲು ಕೇವಲ 17 ರನ್ ಅಗತ್ಯವಿತ್ತು. ಕೈಯಲ್ಲಿ ಇನ್ನೂ 4 ವಿಕೆಟ್ಗಳಿದ್ದವು. ಆದರೆ ಕಾಂಬೋಜ್ 18ನೇ ಓವರ್ನಲ್ಲಿ ಅರಾಚ್ಚಿಗೆ ವಿಕೆಟ್ ಬೀಳುತ್ತಿದ್ದಂತೆ ಶ್ರೀಲಂಕಾ ತಂಡ ನಾಟಕೀಯ ಕುಸಿತ ಕಂಡಿತು.
48ನೇ ಓವರ್ನಲ್ಲಿ ಶ್ರೀಲಂಕಾ 7 ರನ್ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಹಾಗಾಗಿ ಕೊನೆಯ 12 ಎಸೆತಗಳಲ್ಲಿ ಶ್ರೀಲಂಕಾಗೆ 10 ರನ್ ಅಗತ್ಯವಿತ್ತು. ಅರ್ಷದ್ ಖಾನ್ 49ನೇ ಓವರ್ನಲ್ಲಿ ಕೇವಲ 1 ರನ್ ನೀಡಿ ಉಳಿದ 3 ವಿಕೆಟ್ (ಒಂದು ರನ್‌ಔಟ್ ಒಳಗೊಂಡಂತೆ) ಉಡಾಯಿಸಿದರು. ಈ ಮೂಲಕ ಭಾರತಕ್ಕೆ 8 ರನ್‌ಗಳ ರೋಚಕ ಜಯ ತಂದುಕೊಟ್ಟರು. ಶ್ರೀಲಂಕಾ ತಂಡ 262-6 ರಿಂದ 269 ರನ್ಗಳಾಗುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
INDA vs SLA: 7 ರನ್‌ಗಳಿಗೆ 4 ವಿಕೆಟ್! ಶ್ರೀಲಂಕಾ ಕೈಯಲ್ಲಿದ್ದ ಗೆಲುವು ಕಸಿದುಕೊಂಡ ಅರ್ಷದ್ ಖಾನ್-ಕಾಂಬೋಜ್! ಭಾರತ ಎ ತಂಡಕ್ಕೆ ರೋಚಕ ಜಯ













