ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎರಡು ಬದಲಾವಣೆ ಮಾಡಿಕೊಂಡಿದೆ. ಮಾರ್ಕೊ ಯಾನ್ಸನ್ ಹಾಗೂ ವೈಶಾಕ್ ವಿಜಯ್ ಕುಮಾರ್ ತಂಡಕ್ಕೆ ಮರಳಿದ್ದಾರೆ. ಹರ್ಪ್ರೀತ್ ಬ್ರಾರ್ ಹಾಗೂ ಲಾಕಿ ಫರ್ಗ್ಯೂಸನ್ ತಂಡದಿಂದ ಹೊರಗುಳಿದಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ತಂಡ ನಾಲ್ಕು ಬದಲಾವಣೆ ಮಾಡಿಕೊಂಡಿದೆ. ಮಿಚೆಲ್ ಮಾರ್ಷ್, ಶಹ್ಬಾಜ್ ಅಹ್ಮದ್, ಮಯಾಂಕ್ ಯಾದವ್ ಹಾಗೂ ಆಕಾಶ್ ಸಿಂಗ್ ಹೊರಗುಳಿದಿದ್ದರೆ, ಅರ್ಷಿನ್ ಕುಲಕರ್ಣಿ, ಮುಕುಲ್ ಚೌಧರಿ, ಅರ್ಜುನ್ ತೆಂಡೂಲ್ಕರ್ ಹಾಗೂ ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದಿದ್ದಾರೆ. ಅರ್ಜುನ್ಗೆ ಇದು ಈ ಆವೃತ್ತಿಯಲ್ಲಿ ಹಾಗೂ ಲಖನೌ ಪರ ಮೊದಲ ಪಂದ್ಯವಾಗಿದೆ.
ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ಒಟ್ಟು 7 ಪಂದ್ಯಗಳು ನಡೆದಿದ್ದು, ಈ ಪೈಕಿ ಪಂಜಾಬ್ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಲಖನೌ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಎರಡು ಬಾರಿ ಲಖನೌ ತಂಡವನ್ನು ಸೋಲಿಸಿದ್ದರೆ, ಲಖನೌ ಕೇವಲ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ.
ಲಖನೌ ಸೂಪರ್ ಜೈಂಟ್ಸ್: ಅರ್ಷಿನ್ ಕುಲಕರ್ಣಿ, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್, ಆಯುಷ್ ಬದೋನಿ, ಮುಕುಲ್ ಚೌಧರಿ, ಅರ್ಜುನ್ ತೆಂಡೂಲ್ಕರ್, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಮೊಹ್ಶಿನ್ ಖಾನ್
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ಅಜ್ಮತ್ವುಲ್ಲಾ ಒಮರ್ಝೈ, ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಮಾರ್ಕೊ ಯಾನ್ಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ವಿಜಯ್ ಕುಮಾರ್ ವೈಶಾಕ್
ಲಖನೌ ಸೂಪರ್ ಜೈಂಟ್ಸ್: ಹಿಮ್ಮತ್ ಸಿಂಗ್, ದಿಗ್ವೇಶ್ ಸಿಂಗ್ ರಥಿ, ಮೈಮರನ್ ಸಿದ್ಧಾರ್ಥ್, ಆಕಾಶ್ ಸಿಂಗ್, ಶಹಬಾಜ್ ಅಹ್ಮದ್
ಪಂಜಾಬ್ ಕಿಂಗ್ಸ್: ವಿಷ್ಣು ವಿನೋದ್, ಮಾರ್ಕಸ್ ಸ್ಟೊಯಿನಿಸ್, ಹರ್ಪ್ರೀತ್ ಬ್ರಾರ್, ಕ್ಸೇವಿಯರ್ ಬಾರ್ಟ್ಲೆಟ್, ಪ್ರವೀಣ್ ದುಬೆ












