Last Updated:
ವೈರಲ್ ಆಗಿರುವ ವಿಡಿಯೋದಲ್ಲಿ, ಸಿಂಹವು ಕುರಿಗಾಹಿಯನ್ನು ತನ್ನ ಕಾಲಿನಲ್ಲಿ ನೆಲಕ್ಕೆ ಬಿಗಿದುಕೊಂಡು ಕೂತಿದೆ, ಅಲ್ಲೇ ದೂರದಲ್ಲಿ ಇದ್ದ ಜನರು ಪ್ರಾಣಿಯನ್ನು ಓಡಿಸಲು ಕಿರುಚಾಡುತ್ತಾ ಹತಾಶ ಪ್ರಯತ್ನ ಮಾಡಿದರೂ ಅದು ಆತನನ್ನು ಬಿಡಲು ಮನಸ್ಸೇ ಮಾಡಿಲ್ಲ.
Girl Lion Attacks Man: ಅದೃಷ್ಟ ಅನ್ನೋದು ಕೈಕೊಟ್ರೆ ಹೂವು ಕೂಡ ಹಾವಾಗಿ ಕಾಡುತ್ತೆ ಅಂತಾರಲ್ಲ.. ಒಂದು ರೀತಿ ಅದು ನಿಜಾನೇ.. ಆದ್ರೆ ಅದೃಷ್ಟ ನಮ್ಮ ಜೊತೆಗಿದ್ದರೆ ಸಾವು ಕೂಡ ಓಡಿ ಹೋಗುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ.. ಜಸ್ಟ್ ಇಮ್ಯಾಜಿನ್.. ಒಂದು ಸಿಂಹದ ಬಾಯಿಗೆ ಸಿಕ್ಕಿದ ವ್ಯಕ್ತಿಯೊಬ್ಬ ಒಂದು ಚೂರು ಗಾಯ ಆಗದೆ ವಾಪಸ್ ಬದುಕಿ ಬರ್ತಾನೆ ಅಂದ್ರೆ ನಂಬೋಕೆ ಸಾಧ್ಯನಾ? ಖಂಡಿತಾ ಇಲ್ಲ ಅಂತಾ 99% ಹೇಳಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಅದೃಷ್ಟವಶಾತ್ ಸಾವನ್ನೇ ಗೆದ್ದು ಬಂದಿದ್ದಾನೆ.
ಹೌದು… ಅರ್ಧ ಗಂಟೆಗಳ ಕಾಲ ಸಿಂಹದ ಕಪಿಮುಷ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಆಶ್ಚರ್ಯಕರ ರೀತಿಯಲ್ಲಿ ಸಿಂಹದ ಬಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಭಯಾನಕ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ವೈರಲ್ ಆದ ನಂತರ ಆತನ ಅದೃಷ್ಟ ಮತ್ತು ಸಮಯಪ್ರಜ್ಞೆಯ ಬಗ್ಗೆ ಜನ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
LION ATTACKS ON ANIMAL CARE TAKER 🚨
A lioness attacked a Maldhari family near Palitana in Gujarat’s Bhavnagar district.
– Lion trapped the guy for 30 minutes😨
– Look at the guy how he consoles Lion by Touching his head 😭
– After being rescued and rushed to a hospital for… pic.twitter.com/gWYDg9AYkX
— Jeet (@JeetN25) July 6, 2026
ವೈರಲ್ ಆಗಿರುವ ವಿಡಿಯೋದಲ್ಲಿ, ಸಿಂಹವು ಕುರಿಗಾಹಿಯನ್ನು ತನ್ನ ಕಾಲಿನಲ್ಲಿ ನೆಲಕ್ಕೆ ಬಿಗಿದುಕೊಂಡು ಕೂತಿದೆ, ಅಲ್ಲೇ ದೂರದಲ್ಲಿ ಇದ್ದ ಜನರು ಪ್ರಾಣಿಯನ್ನು ಓಡಿಸಲು ಕಿರುಚಾಡುತ್ತಾ ಹತಾಶ ಪ್ರಯತ್ನ ಮಾಡಿದರೂ ಅದು ಆತನನ್ನು ಬಿಡಲು ಮನಸ್ಸೇ ಮಾಡಿಲ್ಲ. ಗ್ರಾಮಸ್ಥರು ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವರು ಸಿಂಹದ ಮೇಲೆ ಕಲ್ಲುಗಳನ್ನು ಎಸೆದು ಆತನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಆತ ಸಮಯಪ್ರಜ್ಞೆ ಮೆರೆದು ಸುಮ್ಮನೆ ಕುಳಿತು ನಿಧಾನಕ್ಕೆ ಸಿಂಹದ ದೇಹವನ್ನು ನೇವರಿಸಿದ್ದಾನೆ. ಹೀಗೆ ಸುಮಾರು ಅರ್ಧ ಗಂಟೆಯತನಕ ಮಾಡಿದ ನಂತರ ಸಿಂಹ ಶಾಂತಗೊಂಡು ಆತನನ್ನು ಅಲ್ಲೇ ಬಿಟ್ಟು ತೆರಳಿದೆ.
ಈತನ್ಮಧ್ಯೆ, ಸಿಂಹವು ಕುರಿಗಾಹಿಯ ಕಾಲಿಗೆ ಬಿಗಿದು ಕಚ್ಚಿದೆ ಎಂದು ವರದಿಯಾಗಿದ್ದು, ಇದರಿಂದ ಆತನಿಗೆ ಗಂಭೀರ ಗಾಯವಾಗಿದೆ, ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ, ಅರಣ್ಯ ಇಲಾಖೆ ಗ್ರಾಮಕ್ಕೆ ತಲುಪಿ ತನಿಖೆ ಆರಂಭಿಸಿತು. ದಾಳಿಗೆ ಕಾರಣವಾದ ಸಿಂಹವನ್ನು ಪತ್ತೆಹಚ್ಚಲು ಮತ್ತು ಸೆರೆಹಿಡಿಯಲು ಅಧಿಕಾರಿಗಳು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.
Jul 08, 2026 12:49 PM IST













