Last Updated:
ಲಕ್ಷ್ಮಿಪುತ್ರ ಚಿತ್ರದ ಇನ್ಮೇಲೆ ಹಾಡು ಹುಟ್ಟಿದ್ದು ಹೇಗೆ? ಎ.ಪಿ. ಅರ್ಜುನ್ ಹೇಳಿದ್ದೇನು? ಸಿನಿಮಾ ಕಂಪ್ಲೀಟ್ ಆಯಿತಾ? ಆ ಎಲ್ಲ ವಿವರ ಇಲ್ಲಿದೆ ಓದಿ.
ಚಿಕ್ಕಣ್ಣ ಅಭಿನಯದ ಲಕ್ಷ್ಮಿಪುತ್ರ ಚಿತ್ರದ (Lakshmi Puthra Movie) ಶೂಟಿಂಗ್ ಕೆಲಸ ಪೂರ್ಣಗೊಂಡಿದೆ. 65 ದಿನ ಈ ಚಿತ್ರದ ಶೂಟಿಂಗ್ (Movie Shooting) ಆಗಿದೆ. ಇನ್ನು ಒಂದು ಹಾಡಿನ ಚಿತ್ರೀಕರಣ ಮಾತ್ರ ಉಳಿದಿದೆ. ಅದಾದ್ಮೇಲೆ ಚಿತ್ರದ ಇತರ ಮಾಹಿತಿ ಕೊಡ್ತಾನೇ ಇರ್ತೀನಿ ಅಂತ ಸಿನಿಮಾದ ನಿರ್ಮಾಪಕ ಡೈರೆಕ್ಟರ್ ಎ.ಪಿ.ಅರ್ಜುನ್ (A P Arjun) ಹೇಳಿಕೊಂಡಿದ್ದಾರೆ. ಚಿತ್ರದ ಇನ್ಮೇಲೆ ಹಾಡಿನ ರಿಲೀಸ್ ಇವೆಂಟ್ ಅಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಈ ಹಾಡು ಹುಟ್ಟಿಕೊಂಡಿರೋದು ಹೇಗೆ ಅನ್ನೊದನ್ನು ಹೇಳಿಕೊಂಡಿದ್ದಾರೆ. ಈ ಹಾಡಿನ ಗಾಯಕ ದರ್ಶನ್ ಮೆಳವಂಕಿ (Darshan Melavanki) ಧ್ವನಿ ವಿಶೇಷತೆ ಬಗ್ಗೆ ಹೇಳಿಕೊಂಡಿದ್ದಾರೆ. ಪೃಥ್ವಿ ಭಟ್ (Prithwi Bhat) ಧ್ವನಿ ಬಗ್ಗೆ ಕೊಂಡಾಡಿದ್ದಾರೆ. ಈ ಎಲ್ಲದರ ಡಿಟೈಲ್ಸ್ ಇಲ್ಲಿದೆ ಓದಿ.
ಅರ್ಜುನ್ ಜನ್ಯ ಮತ್ತು ನಾನು ತುಂಬಾನೆ ಹಳೆ ಸ್ನೇಹಿತರು. ಹೆಚ್ಚು ಕಡಿಮೆ 20 ವರ್ಷದ ಸ್ನೇಹ ನಮ್ಮದು. ಆದರೆ, ಒಟ್ಟಿಗೆ ಸಿನಿಮಾ ಮಾಡೋಕೆ ಆಗಿರಲಿಲ್ಲ. ಹಾಗೆ ಒಮ್ಮೆ ಮಾತುಕತೆನೂ ಆಗಿತ್ತು.
ಇನ್ಮೇಲೆ ಹುಟ್ಟಿದ್ದು ಹೇಗೆ
ಆದರೆ, ಅದು ಆಗಿರಲಿಲ್ಲ. ಹೀಗೆ ಲಕ್ಷ್ಮಿಪುತ್ರ ಅಂತ ಚಿತ್ರ ಮಾಡ್ತಾ ಇದ್ದೇನೆ. ಈ ಚಿತ್ರವನ್ನ ನಾನೇ ಪ್ರೊಡ್ಯೂಸ್ ಮಾಡ್ತಾ ಇದ್ದೇನೆ. ಮ್ಯೂಸಿಕ್ ಮಾಡಿಕೊಡ್ಬೇಕು ಅಂತ ಹೇಳಿದೆ. ನನ್ನ ಏನೂ ಕೇಳ್ಬೇಡ, ನನ್ನ ಹೆಸರು ಹಾಕಿಕೋ ಮಾಡಿಕೊಳ್ತೀನಿ ಅಂತಲೇ ಹೇಳಿದರು.
ನಮ್ಮ ಹಾಡು ಎಲ್ಲರ ಬಾಯಲ್ಲೂ ಬರ್ಬೇಕು. ಆ ತರದ ಪದಗಳು ಬರಬೇಕು ಅಂತ ಮಾತನಾಡ್ತಾ ಇದ್ದೇವು. ಹಾಗೆ ಒಂದೆರಡು ಲೈನ್ ಬರೆದುಕೊಟ್ಟೆ, ನಗನಗ್ತಾ ಮನುಷ್ಯ ಅಂತ ಬರೆದುಕೊಟ್ಟೆ ಅಷ್ಟೆ.
ಆದರೆ, ಆ ಹಾಳೆಯನ್ನ ನೋಡಿದ ಕೂಡಲೇ ಅರ್ಜುನ್ ಹಾಡಿಯೇ ಬಿಟ್ಟರು. ಆ ರೀತಿನೇ ಈ ಟ್ಯೂನ್ ರೆಡಿ ಆಯಿತು. ಇದಕ್ಕಾಗಿಯೇ ನಾವು ಕಂಪೋಸ್ ಮಾಡೋಕೆ ಕುಳಿತೇ ಇಲ್ಲ ಅಂತ ಡೈರೆಕ್ಟರ್ ಎ.ಪಿ. ಅರ್ಜುನ್ ಹೇಳಿಕೊಂಡಿದ್ದಾರೆ.
ನಮ್ಮ ಲಕ್ಷ್ಮಿಪುತ್ರ ಚಿತ್ರದ ಶೂಟಿಂಗ್ ಪೂರ್ಣ ಆಗಿದೆ. 65 ದಿನ ಈ ಚಿತ್ರದ ಶೂಟಿಂಗ್ ಮಾಡಿದ್ದೇವೆ. ಇನ್ನೇನು ಇಲ್ಲ, ಒಂದು ಹಾಡಿನ ಚಿತ್ರೀಕರಣ ಇದೆ. ಅದು ಆದರೆ ಆಯಿತು.
ಶೂಟಿಂಗ್ ಕೆಲಸ ಪೂರ್ಣ
ಇನ್ಮೇಲೆ ಒಂದೊಂದು ವಿಷಯ ಹೇಳ್ತಾನೇ ಹೋಗ್ತೀನಿ ಅಂತಲೇ ಎ.ಪಿ.ಅರ್ಜುನ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಇನ್ಮೇಲೆ ಹಾಡು ರಿಲೀಸ್ ಆಗಿದೆ. ಚಿತ್ರದ ಈ ಹಾಡನ್ನ ದರ್ಶನ್ ಮೆಳವಂಕಿ ಹಾಡಿದ್ದಾರೆ. ಪೃಥ್ವಿ ಭಟ್ ಧ್ವನಿ ಆಗಿದ್ದಾರೆ.
ಚಿತ್ರದ ಇನ್ಮೇಲೆ ಹಾಡಿಗೆ ಚಿತ್ರದ ಕಲಾವಿದರು ಡ್ಯಾನ್ಸ್ ಮಾಡಿದ್ದಾರೆ. ನಾಯಕಿ ನಟಿ ವಂದಿತಾ, ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ.ಆರ್.ಪೇಟೆ ಹೀಗೆ ಎಲ್ಲರೂ ವೇದಿಕೆ ಮೇಲೇನೆ ನೃತ್ಯ ಮಾಡಿದ್ದಾರೆ.
ಈ ಒಂದು ಇವೆಂಟ್ ಅಲ್ಲಿ ನಟಿ ತಾರಾ, ನಿರ್ಮಾಪಕಿ ಶೈಲಜಾ ನಾಗ್, ನಟಿ ಮೇಘನಾ ಗಾಂವ್ಕರ್ ಹೀಗೆ ಹಲವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಚಿಕ್ಕಣ್ಣನ ಜನ್ಮ ದಿನಕ್ಕೆ ವಿಶ್ ಮಾಡಿದರು. ಹಾಗೆ ಇನ್ಮೇಲೆ ಹಾಡನ್ನು ಮೆಚ್ಚಿಕೊಂಡರು ಅಂತ ಹೇಳಬಹುದು.
Bangalore [Bangalore],Bangalore,Karnataka













