MI and RR Trade: 2027ರ ಐಪಿಎಲ್​​ಗೂ ಮುನ್ನ ಮತ್ತೊಂದು ಬಿಗ್ ಟ್ರೇಡ್ ಡೀಲ್! ರಾಜಸ್ಥಾನ್ ಯುವ ಆಟಗಾರ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆ? | ಕ್ರೀಡಾ ಸುದ್ದಿ | ACTPnews

ಮುಂಬೈ-ಆರ್​ಆರ್​​ ನಡುವೆ ಬಿಗ್ ಡೀಲ್


Last Updated:

ರಿಷಭ್ ಪಂತ್ ಹಾಗೂ ಕುಲ್ದೀಪ್ ಯಾದವ್​​ರನ್ನ ಲಖನೌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿವೆ ಎಂದು ವರದಿಗಳಿವೆ. ಇದರ ಮಧ್ಯೆ ಕ್ರಿಕೆಟ್ ವಲಯಗಳಲ್ಲಿ ಮತ್ತೊಂದು ಕುತೂಹಲಕಾರಿ ಸುದ್ದಿ ಹರಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಟ್ರೇಡಿಂಗ್ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳು ಹೆಚ್ಚಾಗಿವೆ.

ಮುಂಬೈ-ಆರ್​ಆರ್​​ ನಡುವೆ ಬಿಗ್ ಡೀಲ್
ಮುಂಬೈ-ಆರ್​ಆರ್​​ ನಡುವೆ ಬಿಗ್ ಡೀಲ್

ಐಪಿಎಲ್ 2026ರ (IPL 2026) ಋತುವಿನ ಅಂತ್ಯದಿಂದಲೂ ಮುಂಬೈ ಇಂಡಿಯನ್ಸ್ (Mumbai Indians) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರ ಭವಿಷ್ಯದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಹಾರ್ದಿಕ್ ಮುಂಬೈ ಇಂಡಿಯನ್ಸ್ ತೊರೆದು ಬೇರೆ ಫ್ರಾಂಚೈಸಿ ಸೇರುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಸಿಎಸ್​ಕೆ, ಕೆಕೆಆರ್ ಹಾಗೂ ಲಖನೌ ಸೇರಿದಂತೆ ಹಲವಾರು ತಂಡಗಳು ಅವರನ್ನು ಟ್ರೇಡ್​  ಡೀಲ್ ಮೂಲಕ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂಬ ವದಂತಿಗಳೂ ಇವೆ. ಆದರೆ, ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯಾಗಲಿ ಅಥವಾ ಹಾರ್ದಿಕ್ ಪಾಂಡ್ಯವಾಗಲಿ ಈ ವಿಷಯಕ್ಕೆ ಇದುವರೆಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.

ಈಗಾಗಲೇ ರಿಷಭ್ ಪಂತ್ ಹಾಗೂ ಕುಲ್ದೀಪ್ ಯಾದವ್​​ರನ್ನ ಲಖನೌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿವೆ ಎಂದು ವರದಿಗಳಿವೆ. ಇದರ ಮಧ್ಯೆ ಕ್ರಿಕೆಟ್ ವಲಯಗಳಲ್ಲಿ ಮತ್ತೊಂದು ಕುತೂಹಲಕಾರಿ ಸುದ್ದಿ ಹರಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಟ್ರೇಡ್ ಡೀಲ್ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳು ಹೆಚ್ಚಾಗಿವೆ.

ತವರಿನ ಫ್ರಾಂಚೈಸಿ ಸೇರ್ತಾರಾ ಯಶಸ್ವಿ?

ವರದಿಗಳನ್ನ ನಂಬುವುದಾದರೆ, ಮುಂಬೈ ಆಡಳಿತ ಮಂಡಳಿಯು ಹಾರ್ದಿಕ್ ಪಾಂಡ್ಯ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಬಿಟ್ಟುಕೊಡಲು ಮತ್ತು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಮುಂಬೈ ತಂಡಕ್ಕೆ ಕರೆತರಲು ನೋಡುತ್ತಿರುವಂತೆ ತೋರುತ್ತಿದೆ. ಕಳೆದ ಎರಡು ವರ್ಷಗಳಿಂದ ಯಶಸ್ವಿ ಜೈಸ್ವಾಲ್ ಭಾರತೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ನಾಯಕತ್ವ ಎದುರು ನೋಡುತ್ತಿದ್ದ ಜೈಸ್ವಾಲ್

ಇದೇ ಕಾರಣದಿಂದ ಐಪಿಎಲ್​​ನಲ್ಲಿ ರಾಜಸ್ಥಾನ ರಾಯಲ್ಸ್‌ನಲ್ಲಿ ಸಂಜು ಸ್ಯಾಮ್ಸನ್ ನಂತರ ಯಶಸ್ವಿ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ಹಲವರು ಭಾವಿಸಿದ್ದರು. ಆದರೆ, ಆ ಅವಕಾಶ ರಿಯಾನ್ ಪರಾಗ್‌ಗೆ ಹೋಯಿತು. ಅಲ್ಲದೆ ವೈಭವ್ ಸೂರ್ಯವಂಶಿ ಉದಯ ತಂಡದಲ್ಲಿ ಯಶಸ್ವಿ ಅವರ ಪ್ರಭಾವ ಸ್ವಲ್ಪ ಕಡಿಮೆಯಾಗಿದೆ ಎಂಬ ಅಭಿಪ್ರಾಯಗಳಿವೆ. ಈ ಸಂದರ್ಭದಲ್ಲಿ, ಅವರು ರಾಜಸ್ಥಾನ ತಂಡದಲ್ಲಿ ಮುಂದುವರಿದರೆ, ಅವರ ವರ್ಚಸ್ಸು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ವಿಶ್ಲೇಷಕರು ನಂಬಿದ್ದಾರೆ.

ಅದಕ್ಕಾಗಿಯೇ ಯಶಸ್ವಿ ಮುಂಬೈ ಇಂಡಿಯನ್ಸ್ ಸೇರಲು ಆಸಕ್ತಿ ಹೊಂದಿದ್ದಾರೆಂದು ವರದಿಯಾಗಿದೆ. ಆದಾಗ್ಯೂ, ಮುಂಬೈ ಇಂಡಿಯನ್ಸ್‌ನಲ್ಲೂ ನಾಯಕತ್ವದ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ. ತಂಡದಲ್ಲಿರುವ ಟೀಮ್ ಇಂಡಿಯಾ ಆಟಗಾರ ತಿಲಕ್ ವರ್ಮಾ ಅವರ ಹೆಸರನ್ನು ಭವಿಷ್ಯದ ನಾಯಕ ಎಂದು ಹೇಳಲಾಗುತ್ತಿದ್ದರೂ, ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರಿದರೆ, ಅವರಿಗೆ ನಾಯಕತ್ವದ ಜವಾಬ್ದಾರಿಗಳನ್ನು ನೀಡಬಹುದು ಎಂದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ಭಾರತದ ಯುವ ಬ್ಯಾಟ್ಸ್‌ಮನ್‌ಗಳ ಮೇಲೆ ಮುಂಬೈ ಕಣ್ಣು

ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಏಕೈಕ ಸ್ಥಿರ ಭಾರತೀಯ ಬ್ಯಾಟ್ಸ್‌ಮನ್ ತಿಲಕ್ ವರ್ಮಾ. ಮತ್ತೊಂದೆಡೆ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನವು ಉತ್ತಮವಾಗಿಲ್ಲದ ಕಾರಣ, ಮುಂಬೈ ಆಡಳಿತ ಮಂಡಳಿಯು ಭವಿಷ್ಯದ ಮೇಲೆ ಕಣ್ಣಿಟ್ಟು ಟೀಮ್ ಇಂಡಿಯಾ ಪರ ಆಡುವ ಯುವ ಬ್ಯಾಟ್ಸ್‌ಮನ್‌ಗಳನ್ನು ಕರೆತರುವ ಬಗ್ಗೆ ಯೋಚಿಸುತ್ತಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ. ಮುಂದಿನ ಋತುವಿನಲ್ಲಿ ರೋಹಿತ್ ಶರ್ಮಾ ಐಪಿಎಲ್‌ನಿಂದ ಹೊರಗುಳಿದರೆ, ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಸುವ ನಿರೀಕ್ಷೆಯಿದೆ.

ಅಧಿಕೃತ ಘೋಷಣೆ ಹೊರಬಿದ್ದಿಲ್ಲ

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಆಡಿದರೆ ಬ್ಯಾಟಿಂಗ್ ಲೈನ್​ಅಪ್​​ನಲ್ಲಿ ಮತ್ತೊಬ್ಬ ಯುವ ಭಾರತೀಯ ಬ್ಯಾಟ್ಸ್‌ಮನ್ ಸೇರ್ಪಡೆಯಾಗುವುದರಿಂದ ತಂಡ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಮುಂಬೈ ಆಶಿಸುತ್ತಿದೆ. ಆದರೆ, ಹಾರ್ದಿಕ್ ಪಾಂಡ್ಯ-ಯಶಸ್ವಿ ಜೈಸ್ವಾಲ್ ವ್ಯಾಪಾರ ಕುದುರುತ್ತದೆಯೇ, ರಾಯಲ್ಸ್ ಜೈಸ್ವಾಲ್​​ರನ್ನ ಬಿಟ್ಟುಕೊಡುತ್ತದೆಯೇ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಈ ಒಪ್ಪಂದದ ಕುರಿತು ಪ್ರಸ್ತುತ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಆದ್ದರಿಂದ, ಈ ಸುದ್ದಿಯ ಬಗ್ಗೆ ಸ್ಪಷ್ಟತೆ ಸಿಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed