ಕಾಂತಾರ ಚಿತ್ರ 4 ವರ್ಷದ ಹಿಂದೆ ಬಂದಿತ್ತು. ಸೆಪ್ಟೆಂಬರ್-30,2022 ರಂದು ಇದು ತೆರೆ ಕಂಡಿತ್ತು. ಈ ಚಿತ್ರ ರಿಲೀಸ್ ಆದ ದಿನವೇ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: 1 ಚಿತ್ರವು ರಿಲೀಸ್ ಆಗಿತ್ತು.
ಕಾಂತಾರ ಚಿತ್ರಕ್ಕೆ ನಾಲ್ಕು ವರ್ಷ
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)
ಆದರೆ, ರಿಷಬ್ ಶೆಟ್ರು ಈ ಚಿತ್ರ ಬಂದಾಗ ಏನು ಭಯ ಪಡಲಿಲ್ಲ. ಬದಲಾಗಿ ಅವರು ತಮ್ಮ ರಾಜನ ಕತೆ ಹೇಳುತ್ತಿದ್ದಾರೆ. ನಾವು ನಮ್ಮ ಕತೆ ಹೇಳುತ್ತಿದ್ದೇವೆ. ಏನೂ ತೊಂದರೆ ಇಲ್ಲ ಅಂತಲೇ ಹೇಳಿದ್ದರು.
ಕಾಂತಾರ ಚಿತ್ರ ಬಂದು 4 ವರ್ಷ ಆಗುತ್ತದೆ. ಈ ಹಿನ್ನೆಲೆಯಲ್ಲಿ ಶೆಟ್ರು ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಬರೆದಿದ್ದಾರೆ.
ಕಾಂತಾರ ಚಿತ್ರಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಜನ ಈ ಚಿತ್ರವನ್ನ ನೋಡಿ ಎಲ್ಲೆಡೆ ತಲುಪಿಸಿದರು ಅಂತಲೂ ರಿಷಬ್ ಶೆಟ್ಟಿ ಹೇಳಿದ್ದಾರೆ.
ಮನದಾಳದ ಮಾತು ಬರೆದ ಡಿವೈನ್ ಸ್ಟಾರ್
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)
Four years since Kantara came to life on the big screen. The rest is history. Awards and appreciation started pouring in from everywhere, but the love you all showered on the film remains unmatched.
It was never just a film I made. It was a world I lived in, a story I carried within me, and a faith that shaped me.
ಮನದಾಳದ ಕಥೆಯನ್ನು ಪರದೆ ಮೇಲೆ ತರಲು ನನ್ನೊಂದಿಗೆ ಹೆಜ್ಜೆ ಹಾಕಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪರಿಶ್ರಮ, ನಂಬಿಕೆ ಮತ್ತು ಪ್ರೀತಿಯೇ ಕಾಂತಾರವನ್ನು ನನಗಿಂತ ದೊಡ್ಡದಾಗಿಸಿತು.
Four years later, the love still feels just as overwhelming.
Forever grateful to everyone who believed in Kantara, celebrated it, and carried it from our soil to the world.
This legend belongs to all of you.
ಈ ಸಾಲುಗಳು ಶೆಟ್ರ ಮನದ ಮಾತುಗಳನ್ನೆ ಹೇಳುತ್ತವೆ. ರಿಷಬ್ ಶೆಟ್ಟಿ ಮತ್ತೊಂದು ಮಹತ್ವದ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಅದು ಜೈ ಹನುಮಾನ್ ಚಿತ್ರ ಅಂತ ಗೊತ್ತೇ ಇದೆ ಅಂತಲೇ ಹೇಳಬಹುದು.













