Kunal Kapoor: ಕನ್ನಡಕ್ಕೆ ಬಂದ ಕುನಾಲ್ ಕಪೂರ್; ಸಿಂಪಲ್ ಸುನಿ ಡೈರೆಕ್ಟರ್; ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews

ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.!


Last Updated:

ರಂಗ್ ದೇ ಬಸಂತಿ ಚಿತ್ರ ಖ್ಯಾತಿಯ ನಟ ಕುನಾಲ್ ಕಪೂರ್ ಕನ್ನಡಕ್ಕೆ ಬಂದಿದ್ದಾರೆ. ಲಂಬೋದರ 2.0 ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಆದರೆ ಈ ಚಿತ್ರದ ಹೀರೋ ಬೇರೆ ಇದ್ದಾರೆ. ಸಿಂಪಲ್ ಸುನಿ ಈ ಸಿನಿಮಾವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.!
ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.!

ಕುನಾಲ್ ಕಪೂರ್ (Kunal Kapoor) ಕನ್ನಡಕ್ಕೆ ಬಂದಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಲಂಬೋದರ 2.0 ಚಿತ್ರದ ಮೂಲಕವೇ ಕುನಾಲ್ ಕಪೂರ್ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಈ ಚಿತ್ರದಲ್ಲಿ ಅನಿಲ್ ಶೆಟ್ಟಿ (Anil Shetty) ನಾಯಕರಾಗಿದ್ದಾರೆ. ಬಾಲಿವುಡ್ ನಟಿ ಸಾಚಿ ಬಿಂದ್ರಾ ಈ ಚಿತ್ರದ ನಾಯಕಿ ಆಗಿದ್ದಾರೆ. Gen Z ಕಾಲದ ಯುವಕರಿಗೂ ಇಷ್ಟ ಆಗುವಂತಹ ಕಾನ್ಸೆಪ್ಟ್‌ನ ಚಿತ್ರವೇ ಇದಾಗಿದೆ. ಬಹುತೇಕ ಚಿತ್ರೀಕರಣ ಪೂರ್ಣ ಆಗಿದೆ. ಕೊನೆಯ ಹಂತದ ಚಿತ್ರೀಕರಣ ನಡೀತಿದೆ. ಈ ಸಮಯದಲ್ಲಿಯೇ ಕುನಾಲ್ ಕಪೂರ್ (Kunal Kapoor) ಎಂಟ್ರಿಯ ಅಧಿಕೃತ ಮಾಹಿತಿ ಹೊರ ಬಂದಿದೆ. ವರ್ಕಿಂಗ್ ಫೋಟೋಗಳು ರಿವೀಲ್ ಆಗಿವೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಕುನಾಲ್ ಕಪೂರ್ ಯಾರು

ಕುನಾಲ್ ಕಪೂರ್ ಯಾರು ಅನ್ನೋದಕ್ಕೆ ಉತ್ತರ ಸಿಂಪಲ್ ಆಗಿದೆ. ರಂಗ್ ದೇ ಬಸಂತಿ ಚಿತ್ರದಲ್ಲಿ ಕುನಾಲ್ ಕಪೂರ್ ಅಭಿನಯಿಸಿದ್ದರು. ಡಾನ್-2 ಸಿನಿಮಾದಲ್ಲೂ ಕುನಾಲ್ ಕಪೂರ್ ಇದ್ದಾರೆ. ಡಿಯರ್ ಜಿಂದಗಿ ಚಿತ್ರದಲ್ಲೂ ಕುನಾಲ್ ಕಪೂರ್ ಒಳ್ಳೆ ಕೆಲಸ ಮಾಡಿದ್ದಾರೆ.

kunal kapoor first kannada Lambodhara 2.0 movie latest updates

ಸಿಂಪಲ್ ಸುನಿ ಡೈರೆಕ್ಟರ್

ವೀರಂ ಸಿನಿಮಾದಲ್ಲೂ ಕುನಾಲ್ ಇದ್ದಾರೆ. ಇಷ್ಟೆಲ್ಲ ಸಿನಿಮಾದಲ್ಲಿ ನಟಿಸಿರೋ ಕುನಾಲ್ ಕಪೂರ್ ಫಸ್ಟ್ ಟೈಮ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಲಂಬೋದರ 2.0 ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ.

ಚಿತ್ರದ ಹೀರೋ ಗೊತ್ತಲ್ಲ

ಈಗಾಗಲೇ ಹೇಳಿದಂತೆ ಲಂಬೋದರ 2.0 ಚಿತ್ರ ಹೀರೋ ಅನಿಲ್ ಶೆಟ್ಟಿ ಅವರೆ ಆಗಿದ್ದಾರೆ. ಇವರಿಗೆ ಜೋಡಿ ಆಗಿ ನಟಿ ಸಾಚಿ ಬಿಂದ್ರಾ ನಟಿಸುತ್ತಿದ್ದಾರೆ.

ಇವರ ಈ ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಕೊನೆಯ ಹಂತದ ಶೂಟಿಂಗ್ ಇದೀಗ ನಡೆಯುತ್ತಿದೆ. ಈ ಹಂತದಲ್ಲಿಯೇ ತಮ್ಮ ಸಿನಿಮಾದಲ್ಲಿ ಬಾಲಿವುಡ್ ನಟ ಕುನಾಲ್ ಕಪೂರ್ ಇದ್ದಾರೆ ಅನ್ನೋದನ್ನ ಸಿಂಪಲ್ ಸುನಿ ಹೇಳಿಕೊಂಡಿದ್ದಾರೆ.
Gen Z ಗಳಿಗೂ ಇಷ್ಟ ಆಗುವ ಸ್ಟೋರಿ

ಸಿಂಪಲ್ ಸುನಿ ಒಳ್ಳೆ ಕತೆಗಳನ್ನೆ ಮಾಡಿಕೊಳ್ಳುತ್ತಾರೆ. ಈ ಹಿಂದಿನ ಇವರ ಸಿನಿಮಾಗಳಲ್ಲಿಯೇ ಅದು ಗೊತ್ತಾಗಿದೆ. ಒಂದು ಸರಳ ಪ್ರೇಮ ಕಥೆ, ಅದಕ್ಕೂ ಮುಂಚೆ ಬಂದ ಚಮಕ್, ಅವತಾರ ಪುರುಷ ಒನ್ ಮತ್ತು ಟು ಸಿನಿಮಾಗಳಲ್ಲೂ ಅದನ್ನ ನೋಡಿದ್ದೇವೆ.

kunal kapoor first kannada Lambodhara 2.0 movie latest updates

ಕನ್ನಡಕ್ಕೆ ಬಂದ ಕುನಾಲ್ ಕಪೂರ್

ಲಂಬೋದರ 2.0 ಚಿತ್ರದಲ್ಲಿ Gen Z ಗಳಿಗೂ ಇಷ್ಟವಾಗುವ ಕತೆಯನ್ನೆ ಇವರು ಹೇಳುತ್ತಿದ್ದಾರೆ. ತಂತ್ರಜ್ಞಾನ, ಥ್ರಿಲ್ಲರ್, ತತ್ವಶಾಸ್ತ್ರ ಹಾಗೂ ಎಮೋಷನಲ್ ಕಂಟೆಂಟ್ ಇರೋ ಚಿತ್ರ ಇದಾಗಿದೆ.

AI ಕಾದಲ್ಲಿ ಬದುಕುವವರ ಕತೆ

ಈ ಚಿತ್ರದಲ್ಲಿ ಪ್ರಸ್ತುತ ವಿಷಯನ್ನೆ ಹೇಳಾಗುತ್ತಿದೆ. ಸಾಮಾಜಿ ಜಾಲತಾಣಗಳ ಸುಳಿಯಲ್ಲಿ ಸಿಲುಕಿರುವ ಯುವಕರ ಗೊಂದಲಮಯ ಜೀವನದ ಚಿತ್ರಣವೂ ಇಲ್ಲಿದೆ.

ಚಿತ್ರದ ಇತರ ಮಾಹಿತಿ

ಲಂಬೋದರ 2.0 ಚಿತ್ರಕ್ಕೆ ಸಂತೋಷ್ ರೈ ಪಾತಾಜಿ ಕ್ಯಾಮರಾವರ್ಕ್ ಮಾಡಿದ್ದಾರೆ. ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ಸಂಗೀತ ಕೊಟ್ಟ ವೀರ್ ಸಮರ್ಥ ಸಂಗೀತ ಕೊಟ್ಟಿದ್ದಾರೆ.

ಈ ಚಿತ್ರವನ್ನ ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ. ಇದು ಕನ್ನಡ ಅಷ್ಟೆ ಅಲ್ಲ ಬಹು ಭಾಷೆಯಲ್ಲಿಯಲ್ಲಿಯೇ ಇದು ರಿಲೀಸ್ ಆಗುತ್ತಿದೆ. ಬಾಲಿವುಡ್ ನಟ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋದು ಗಮನ ಸೆಳೆಯುವ ಸದ್ಯದ ಸುದ್ದಿ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed