Last Updated:
Viral News: ಶೆಹನಾಯಿ ಮೊಳಗಿಲ್ಲ, ಅರಿಶಿನ ಹಚ್ಚಿಲ್ಲ, ಹಸೆಮಣೆ ಏರಿಲ್ಲ, ವಧು ಬಂದಿಲ್ಲ. ಮದುವೆ ಮೆರವಣಿಗೆ ಹೋಗೋ ದಾರಿ ಮರೆತು ಹುಲ್ಲು ಬೆಳೆದಿದೆ. ಬ್ಯಾಂಡ್ ಬಾಜಾದವರು ಈ ಊರಿನ ಅಡ್ರೆಸ್ ಮರೆತಿದ್ದಾರೆ. ಹಾಗಾಗಿ, ಜನ ಈಗ ಈ ಊರಿಗೆ ಬ್ರಹ್ಮಚಾರಿಗಳ ಗ್ರಾಮ ಅಂತ ಹೆಸರಿಟ್ಟಿದ್ದಾರೆ. 25ರಲ್ಲಿ ಮದುವೆಯಾಗಿ ಅಪ್ಪ ಆಗಬೇಕಿದ್ದ ಯುವಕರು ಇವತ್ತು 60 ದಾಟಿ ಮಕ್ಕಳಿಲ್ಲದ ವೃದ್ಧ ಚಿಕ್ಕಪ್ಪ ಆಗಿ ಉಳಿದಿದ್ದಾರೆ. ಮೊಮ್ಮಕ್ಕಳ ಜೊತೆ ಆಡಬೇಕಿದ್ದ ಕೈಗಳು ಒಂಟಿತನದಿಂದ ನಡುಗುತ್ತಿವೆ. ಆ ಕುರಿತ ವರದಿ ಇಲ್ಲಿದೆ.
Viral News: ಹೆಣ್ಣು ಮಕ್ಕಳ ಸಮಸ್ಯೆ, ಮಹಿಳಾ ಸಬಲೀಕರಣ, ಇವೆಲ್ಲದರ ಬಗ್ಗೆ ದಿನಾ ಚರ್ಚೆ ಆಗುತ್ತೆ, ಸರಿ. ಆದ್ರೆ ಗಂಡಸರ (Men’s) ಗೋಳು ಕೇಳೋರ್ಯಾರು? ಯಾಕಂದ್ರೆ, ಭಾರತದಲ್ಲಿ (India) ಒಂದು ಹಳ್ಳಿ ಇದೆ, ಅಲ್ಲಿ ವಿಕಾಸದ ಗಾಳಿ ಬೀಸಿಲ್ಲ, ಆದ್ರೆ ವಿರಹದ ಬಿರುಗಾಳಿ 50 ವರ್ಷದಿಂದ ಬೀಸುತ್ತಿದೆ. ಹೌದು, ಮದುವೆ (Marriage) ವಯಸ್ಸಿನ ಯುವಕರು ಮಾಲೆ ಹಾಕಿಕೊಳ್ಳೋ ಕನಸು ಕಂಡು, ಕೊನೆಗೆ ಮಾಲೆ ಇಲ್ಲದೆ ಮುದುಕರಾಗಿ ಹೋದ ಕರುಣ ಕಥೆ ಇದು!
ಶೆಹನಾಯಿ ಮೊಳಗಿಲ್ಲ, ಅರಿಶಿನ ಹಚ್ಚಿಲ್ಲ, ಹಸೆಮಣೆ ಏರಿಲ್ಲ, ವಧು ಬಂದಿಲ್ಲ. ಮದುವೆ ಮೆರವಣಿಗೆ ಹೋಗೋ ದಾರಿ ಮರೆತು ಹುಲ್ಲು ಬೆಳೆದಿದೆ. ಬ್ಯಾಂಡ್ ಬಾಜಾದವರು ಈ ಊರಿನ ಅಡ್ರೆಸ್ ಮರೆತಿದ್ದಾರೆ. ಹಾಗಾಗಿ, ಜನ ಈಗ ಈ ಊರಿಗೆ ಬ್ರಹ್ಮಚಾರಿಗಳ ಗ್ರಾಮ ಅಂತ ಹೆಸರಿಟ್ಟಿದ್ದಾರೆ. 25ರಲ್ಲಿ ಮದುವೆಯಾಗಿ ಅಪ್ಪ ಆಗಬೇಕಿದ್ದ ಯುವಕರು ಇವತ್ತು 60 ದಾಟಿ ಮಕ್ಕಳಿಲ್ಲದ ವೃದ್ಧ ಚಿಕ್ಕಪ್ಪ ಆಗಿ ಉಳಿದಿದ್ದಾರೆ. ಮೊಮ್ಮಕ್ಕಳ ಜೊತೆ ಆಡಬೇಕಿದ್ದ ಕೈಗಳು ಒಂಟಿತನದಿಂದ ನಡುಗುತ್ತಿವೆ. ಆ ಕುರಿತ ವರದಿ ಇಲ್ಲಿದೆ.
ಬಿಹಾರ ಅಭಿವೃದ್ಧಿಯ ದೊಡ್ಡ ದೊಡ್ಡ ಮಾತುಗಳ ನಡುವೆ ಕೈಮೂರ್ ಬೆಟ್ಟಗಳ ಮಡಿಲಲ್ಲಿ ಒಂದು ಹಳ್ಳಿ ಕಳೆದ ಐವತ್ತು ವರ್ಷಗಳಿಂದ ಮದುವೆಯ ಶೆಹನಾಯಿ ಸದ್ದನ್ನೇ ಕೇಳಿಲ್ಲ. ಪಾಟ್ನಾದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಬರ್ವಾನ್ ಕಲಾ ಗ್ರಾಮದಲ್ಲಿ ವಧುವಿನ ಆಗಮನವೇ ಇಲ್ಲ, ಬ್ಯಾಂಡ್ ಬಾಜಾ ಇಲ್ಲ, ಮದುವೆ ಮೆರವಣಿಗೆಯೂ ಇಲ್ಲ. ಇದರಿಂದಾಗಿ ಈ ಊರನ್ನು ಜನರು ಈಗ ಬ್ರಹ್ಮಚಾರಿಗಳ ಗ್ರಾಮ ಎಂದೇ ಕರೆಯುತ್ತಾರೆ.!
ಬರ್ವಾನ್ ಕಲಾ ಕೈಮೂರ್ ಜಿಲ್ಲೆಯ ಅತ್ಯಂತ ದುರ್ಗಮ ಪ್ರದೇಶದಲ್ಲಿದೆ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮೊಬೈಲ್ ನೆಟ್ವರ್ಕ್ ಕೂಡ ಸಿಗುವುದಿಲ್ಲ. ಸಂಬಂಧಿಕರು ವಧು ಹುಡುಕಿಕೊಂಡು ಬಂದಾಗ ಬೆಟ್ಟದ ಕಡಿದಾದ ದಾರಿ ನೋಡಿ ಅರ್ಧದಲ್ಲೇ ಹಿಂತಿರುಗುತ್ತಾರೆ. ಅದರಂತೆ, ಯಾರೂ ತಮ್ಮ ಮಗಳನ್ನು ಇಂತಹ ಕತ್ತಲೆಯ ಊರಿಗೆ ಕಳುಹಿಸಲು ಧೈರ್ಯ ಮಾಡುವುದಿಲ್ಲ ಎಂದು ಗ್ರಾಮಸ್ಥರು ನೋವಿನಿಂದ ಹೇಳುತ್ತಾರೆ.

50 ವರ್ಷಗಳ ಹಿಂದೆ ಇಲ್ಲಿ ಮದುವೆಗಳು ಸಾಮಾನ್ಯವಾಗಿದ್ದವು. ಆದರೆ ರಸ್ತೆ, ಶಾಲೆ, ಆಸ್ಪತ್ರೆ ಯಾವುದೂ ಬಾರದಂತೆ ಅಭಿವೃದ್ಧಿ ನಿಂತಾಗ ಮದುವೆಗಳೂ ನಿಂತುಹೋದವು. ಗ್ರಾಮದಲ್ಲಿ ಸುಮಾರು 6 ಸಾವಿರ ಜನಸಂಖ್ಯೆ ಇದ್ದು 400ಕ್ಕೂ ಹೆಚ್ಚು ಮನೆಗಳಿವೆ. ಮಹಿಳೆಯರು ದಿನಕ್ಕೆ ಎರಡು ಮೂರು ಕಿಲೋಮೀಟರ್ ನಡೆದು ತಲೆ ಮೇಲೆ ಹೊತ್ತು ನೀರು ತರುತ್ತಾರೆ. ಸಂಜೆಯಾದರೆ ಮನೆಗಳೆಲ್ಲ ಕತ್ತಲೆಯಲ್ಲಿ ಮುಳುಗುತ್ತವೆ. ಶಾಲೆ ಮತ್ತು ಆಸ್ಪತ್ರೆಗಾಗಿ ದೂರದ ಊರಿಗೆ ಹೋಗಬೇಕು. ಹೀಗಾಗಿ ಹೊರಗಿನ ಕುಟುಂಬಗಳು ಸಂಬಂಧ ಬೆಳೆಸಲು ಹಿಂಜರಿಯುತ್ತವೆ.
ಗ್ರಾಮದ ಹಿರಿಯರ ಪ್ರಕಾರ ಇಲ್ಲಿ ಸುಮಾರು 130ಕ್ಕೂ ಹೆಚ್ಚು ಪುರುಷರು ಮದುವೆಯಾಗದೆ ಉಳಿದಿದ್ದಾರೆ. ಅವರಲ್ಲಿ ಬಹುತೇಕರು ಈಗ 40 ರಿಂದ 55 ವರ್ಷ ದಾಟಿದ್ದಾರೆ. ಯೌವನದಲ್ಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಹೋಗಿ ಬಂದರೂ ವಧು ಸಿಗಲಿಲ್ಲ. ಕೆಲವರು ಬಿಹಾರದ ಹೊರಗೆ ಮದುವೆಯಾದರೂ ಹೆಂಡತಿಯನ್ನು ಊರಿಗೆ ಕರೆತರುವ ಧೈರ್ಯ ಮಾಡಲಿಲ್ಲ. ನಾವು ಮದುವೆಯಾಗಲು ಬಯಸುತ್ತೇವೆ ಆದರೆ ಪ್ರಸ್ತಾಪವೇ ಬರುವುದಿಲ್ಲ ಎಂದು ಅವರು ಹೇಳುತ್ತಾರೆ. ಈಗ ಮಕ್ಕಳಿಲ್ಲ, ಕುಟುಂಬದ ಆಸರೆಯಿಲ್ಲದೆ ವೃದ್ಧಾಪ್ಯ ಕಳೆಯುವ ಸ್ಥಿತಿ ಬಂದಿದೆ.
ಏತನ್ಮಧ್ಯೆ, ಕೆಲವು ವರ್ಷಗಳ ಹಿಂದೆ ಗ್ರಾಮಸ್ಥರೇ ಶ್ರಮದಾನ ಮಾಡಿ ಬೆಟ್ಟದಲ್ಲಿ ಸಣ್ಣ ಕಚ್ಚಾ ರಸ್ತೆ ಮಾಡಿದರು. ಆಗ 50 ವರ್ಷಗಳ ನಂತರ ಮೊದಲ ಬಾರಿಗೆ ಒಂದು ವಧು ಗ್ರಾಮಕ್ಕೆ ಬಂದಳು. ಆಗ ಊರಿಡೀ ಹಬ್ಬದ ವಾತಾವರಣವಿತ್ತು, ಶೆಹನಾಯಿ ಮೊಳಗಿತು. ಆದರೆ ಆ ರಸ್ತೆ ಮಳೆಗಾಲದಲ್ಲಿ ಕೊಚ್ಚಿ ಹೋದ ಮೇಲೆ ಮತ್ತೆ ಮದುವೆಗಳು ನಿಂತುಹೋದವು. ಆ ಒಂದು ಮದುವೆ ಹೊರತುಪಡಿಸಿ ಕಳೆದ ಅರ್ಧ ಶತಮಾನದಲ್ಲಿ ಬೇರೆ ಯಾವುದೇ ವಧು ಈ ಊರಿನ ಮೆಟ್ಟಿಲು ಹತ್ತಿಲ್ಲ ಎನ್ನಲಾಗಿದೆ.!













