Last Updated:
ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುತ್ತಿರುವ ಜೋಗ್ ಜಲಪಾತ ವೀಕ್ಷಿಸಲು KSRTC 8 ನಗರಗಳಿಂದ ವಿಶೇಷ ವಾರಾಂತ್ಯ ಟೂರ್ ಪ್ಯಾಕೇಜ್ ಆರಂಭಿಸಿದೆ. ₹450ರಿಂದ ₹3,300ರವರೆಗಿನ ಪ್ಯಾಕೇಜ್‌ಗಳ ದರ, ಸಮಯ ಮತ್ತು ಮಾರ್ಗದ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ಈ ಆಗಸ್ಟ್ ತಿಂಗಳಿನಲ್ಲಿ ಭೋರ್ಗರೆಯುವ ಜೋಗ್ ಜಲಪಾತ ಕಣ್ತುಂಬಿಕೊಳ್ಳಲು ಪ್ಲಾನ್ ಮಾಡುತ್ತಿರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ. ಮಳೆಗಾಲದಲ್ಲಿ ಸುರಕ್ಷಿತವಾಗಿ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ರಾಜ್ಯದ 8 ಪ್ರಮುಖ ನಗರಗಳಿಂದ ‘ವಾರಾಂತ್ಯದ ವಿಶೇಷ ಪ್ಯಾಕೇಜ್ ಟೂರ್’ (Weekend and Holiday Tour Package) ಅನ್ನು ನಿಗಮ ಆರಂಭಿಸಿದೆ.














