Krishi Thapanda: ಯಾರ ಮೇಲೂ ಅನುಮಾನ ಇಲ್ಲ ಎಂದು ದೂರು ನೀಡಿದ ವೈಶಾಖ್ ಪತ್ನಿ! ಆದರೂ ಕೃಷಿ ತಾಪಂಡಗೆ ಈ ಒಂದು ಅಂಶವೇ ಹಿನ್ನಡೆ ಆಯ್ತಾ? | Vaishakh death case | | ACTPnews

ವೈಶಾಖ್-ಕೃಷಿ ತಾಪಂಡ


Last Updated:

Krishi Thapanda: 2 ಪುಟಗಳ ದೂರು ಸಲ್ಲಿಸಿದ ವೈಶಾಖ್ ಪತ್ನಿ ಯಾರ ವಿರುದ್ಧವೂ ಅನುಮಾನ ವ್ಯಕ್ತಪಡಿಸಿಲ್ಲ! ಆದರೂ ಕೃಷಿ ತಾಪಂಡಗೆ ಈ ಒಂದು ಅಂಶ ದೊಡ್ಡ ಹಿನ್ನಡೆಯಾಗುತ್ತಾ?

ವೈಶಾಖ್-ಕೃಷಿ ತಾಪಂಡ
ವೈಶಾಖ್-ಕೃಷಿ ತಾಪಂಡ

ಸ್ಯಾಂಡಲ್​ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಫ್ಲ್ಯಾಟ್​ನಲ್ಲಿ ಗೆಳೆಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೆಚ್ಚಿನ ಬೆಳವಣಿಗೆಗಳಾಗಿದ್ದು ಪೊಲೀಸರು (Police) ಆತ್ಮಹತ್ಯೆಯ ಕಾರಣವನ್ನು ಪತ್ತೆ ಹಚ್ಚುವಲ್ಲಿ ತನಿಖೆ ನಡೆಸುತ್ತಿದ್ದಾರೆ. ನಟಿ ಕೃಷಿ ತಾಪಂಡ ಸ್ನೇಹಿತ ವೈಶಾಖ್  (Vaishakh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತ ವೈಶಾಕ್ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದ್ದು ಪೋನ್ ಕರೆಗಳು, ವಾಟ್ಸಪ್ ಚಾಟಿಂಗ್, ಮೆಸೇಜ್ ಗಳ ಪರಿಶೀಲನೆ ನಡೆಯುತ್ತಿದೆ. ಕೊನೆಯ ಬಾರಿಗೆ ಕರೆ ಮಾಡಿದ ಕಾಲ್ ಹಾಗೂ ಮೆಸೇಜ್ ವಿವರಗಳು, ಚಾಟಿಂಗ್ ಪರಿಶೀಲನೆ ನಡೆಸಲಾಗುತ್ತಿದೆ.

ಆತ್ಮಹತ್ಯೆಗು ಮುನ್ನ ನಟಿ ಕೃಷಿ ತಾಪಂಡಗೆ ವೈಶಾಖ್ ಮೆಸೇಜ್ ಹಾಗೂ ಕಾಲ್ ಮಾಡಿದ್ದರು ಎನ್ನಲಾಗಿದ್ದು ನಂತರ ಪತ್ನಿಗೂ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಆದರಿಂದಾಗಿ ಮೊಬೈಲ್ ಫೋನ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರ್ ಆರ್ ನಗರ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ನಟಿ ಕೃಷಿ ತಾಪಂಡ ಸ್ನೇಹಿತ ವೈಶಾಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರ್ ಆರ್ ನಗರ ಪೊಲೀಸರು ಯುಡಿಆರ್ ದಾಖಲಿಸಿದ್ದಾರೆ.

ಸೀರೆಯಿಂದ ಪ್ಯಾನ್ ಗೆ ನೇಣು ಬಿಗಿದುಕೊಂಡು ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಮೇಘಾ ದೂರಿನಲ್ಲಿ ಯಾರ ಮೇಲೂ ಆರೋಪ ಮಾಡಿಲ್ಲ. ಯಾರ ಮೇಲೂ ಅನುಮಾನ ವ್ಯಕ್ತಪಡಿಸದೆ ದೂರು ನೀಡಿರುವ ಪತ್ನಿ ಮೇಘಾ ಅವರು ಎರಡು ಪುಟಗಳ ದೂರಿನಲ್ಲಿ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಹೀಗಿದ್ದರೂ ಯಾರ ಮೇಲೂ ಮೇಘಾ ಅವರು ಅನುಮಾನ ವ್ಯಕ್ತ ಪಡಿಸದೇ ಇದ್ದರೂ ಕೂಡಾ ಕೃಷಿ ತಾಪಂಡ ಅವರು ಮನೆಯ ಕೀಯನ್ನು ವೈಶಾಖ್ ಕೈಗೆ ಕೊಟ್ಟಿರುವ ಅಂಶ ದೊಡ್ಡ ಹಿನ್ನಡೆಯಾಗೋ ಸಾಧ್ಯತೆ ಇದೆ. ಕೃಷಿ ಮನೆಯಲ್ಲಿಯೇ ಕೃಷಿ ಬೆಡ್​ರೂಮ್​​ನಲ್ಲಿಯೇ ವೈಶಾಖ್ ನೇಣು ಹಾಕಿಕೊಂಡಿದ್ದು, ನಟಿಯ ಮನೆಯ ಕೀ ಕೂಡಾ ವೈಶಾಖ್​ಗೆ ನಟಿ ಕೊಟ್ಟಿದ್ದರು. ಈ ಒಂದು ಅಂಶವೇ ಅವರಿಗೆ ಹಿನ್ನಡೆಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

ಕೃಷಿ ತಾಪಂಡಗೆ ನೋಟಿಸ್ ಅಗತ್ಯವಿಲ್ಲ ಎಂದ ಪೊಲೀಸ್

ಸದ್ಯ ಈವರೆಗೆ ಪೊಲೀಸರು ಯಾವುದೇ ನೋಟಿಸ್ ನೀಡಿಲ್ಲ. ಕೃಷಿ ತಾಪಂಡಗೆ ನೋಟಿಸ್ ನೀಡುವ ಅಗತ್ಯತೆ ಇಲ್ಲ ಎಂದು ಪೊಲೀಸ್ ಮೂಲಗಳ ಮಾಹಿತಿ ಲಭ್ಯವಾಗಿದೆ. ವೈಶಾಖ್ ಕೊನೆಯದಾಗಿ ಮಾಡಿದ್ದ ಮೆಸೇಜ್ ಹಾಗೂ ಕಾಲ್ ಸಾರಾಂಶವನ್ನು ನಟಿ ಪೊಲೀಸರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ವೈಶಾಖ್ ಮೃತದೇವನ್ನು ಪರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಕೃಷಿ ತಾಪಂಡಗೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ವೈಶಾಖ್ ಮನೆಮಂದಿ ಅವಕಾಶ ನೀಡಿಲ್ಲ ಎನ್ನಲಾಗಿದೆ.

ವರದಿ: ಮುನಿರಾಜು ಕೆಜಿ. ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed