Big Update: ಎಲ್ಲಾ ಆನ್‌ಲೈನ್‌ ಸೇವೆಗಳೂ ದಿಢೀರ್‌ ಬಂದ್‌, ಇವತ್ತು ನಿಮ್ಮ ಯಾವುದೇ ಕೆಲಸ ಆಗೋಲ್ಲ; ಕಾರಣ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಆನ್ ಲೈನ್‌ ಸೇವೆ ಬಂದ್


Last Updated:

ನೀವು ಜಾತಿ-ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಬೇಕಾ? ಅಥವಾ ಉಚಿತ ಬಸ್ ಪಾಸ್ ಮಾಡಿಸಬೇಕಾ?ರಾಜ್ಯ ಸರ್ಕಾರದ 100ಕ್ಕೂ ಹೆಚ್ಚು ಆನ್‌ಲೈನ್ ಸೇವೆಗಳು ಸಂಪೂರ್ಣ ಬಂದ್ ಆಗಲಿವೆ!

ಆನ್ ಲೈನ್‌ ಸೇವೆ ಬಂದ್
ಆನ್ ಲೈನ್‌ ಸೇವೆ ಬಂದ್

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ (Government Office) ಅಲೆಯುವುದನ್ನು ತಪ್ಪಿಸಲು ನೀವೇನಾದರೂ ಆನ್‌ಲೈನ್ ಮೂಲಕ ನಿಮ್ಮ ಕೆಲಸಗಳನ್ನು (Work) ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗೊಂದು ಶಾಕಿಂಗ್ ಸುದ್ದಿ ಕಾದಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (KSDC) ಮೆಗಾ ಅಪ್‌ಗ್ರೇಡ್ ಹಿನ್ನೆಲೆಯಲ್ಲಿ ಇವತ್ತು ಇಡೀ ದಿನ ರಾಜ್ಯ ಸರ್ಕಾರದ ಎಲ್ಲಾ ಆನ್‌ಲೈನ್ ಸೇವೆಗಳು, ವೆಬ್‌ಸೈಟ್‌ಗಳು (Website) ಹಾಗೂ ಪೋರ್ಟಲ್‌ಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.

ಹೌದು, ನಾಗರಿಕ ಸೇವೆಗಳನ್ನು ಮತ್ತಷ್ಟು ವೇಗವಾಗಿ ಹಾಗೂ ಸುರಕ್ಷಿತವಾಗಿ ಒದಗಿಸುವ ಉದ್ದೇಶದಿಂದ ಜೂನ್ 25ರ ರಾತ್ರಿಯಿಂದಲೇ ದತ್ತಾಂಶ ಕೇಂದ್ರದ ಸರ್ವರ್ ನಿರ್ವಹಣಾ ಕಾರ್ಯ ಶುರುವಾಗಲಿದ್ದು, ಜನಸಾಮಾನ್ಯರ ದೈನಂದಿನ ಆನ್‌ಲೈನ್ ಕೆಲಸಗಳಿಗೆ ಭಾರಿ ಬ್ರೇಕ್ ಬೀಳಲಿದೆ.

ಸ್ಥಗಿತಗೊಳ್ಳುವ ಸಮಯಾವಧಿ

  1. ಯಾವಾಗಿನಿಂದ ಡೌನ್? : ಜೂನ್ 25, 2026 (ಗುರುವಾರ) ರಾತ್ರಿ 9:00 ಗಂಟೆಯಿಂದ.
  2. ಯಾವಾಗ ಓಪನ್? : ಜೂನ್ 26, 2026 (ಶುಕ್ರವಾರ) ರಾತ್ರಿ 9:00 ಗಂಟೆಯ ಬಳಿಕ.
  3. ಒಟ್ಟು ಅವಧಿ: ಬರೋಬ್ಬರಿ 24 ಗಂಟೆಗಳು!
ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಉಚಿತ ಬಸ್ ಪಾಸ್‌ಗೂ ತತ್ವಾರ!

ಶಾಲಾ-ಕಾಲೇಜು ಆರಂಭವಾಗಿರುವ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉಚಿತ ಬಸ್ ಪಾಸ್ ಅರ್ಜಿ ಸಲ್ಲಿಕೆ ಸೇವೆ ನಡೆಯುವ ‘ಸೇವಾ ಸಿಂಧು’ (Seva Sindhu) ಪೋರ್ಟಲ್ ಕೂಡ KSDC ಸರ್ವರ್‌ನಲ್ಲೇ ಇರುವುದರಿಂದ 24 ಗಂಟೆಗಳ ಕಾಲ ಈ ಸೇವೆಯೂ ಲಭ್ಯವಿರುವುದಿಲ್ಲ.

  1. ಏನೇನು ಮಾಡಲು ಸಾಧ್ಯವಿಲ್ಲ?:  ಹೊಸದಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ರಿಫಂಡ್ (Refund) ಅರ್ಜಿ, ಪಾಸ್ ಸ್ಟೇಟಸ್ ಚೆಕ್ ಮಾಡುವುದು ಹಾಗೂ OTP ವೆರಿಫಿಕೇಶನ್ ಸೇರಿದಂತೆ ಯಾವುದೇ ಆನ್‌ಲೈನ್ ಪ್ರಕ್ರಿಯೆಗಳು ನಡೆಯುವುದಿಲ್ಲ.
  2. ಪರ್ಯಾಯ ಮಾರ್ಗವೇನು?:  ವಿದ್ಯಾರ್ಥಿಗಳು ಜೂನ್ 25ರ ರಾತ್ರಿ 9 ಗಂಟೆಯೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದು ಉತ್ತಮ. ಇಲ್ಲವಾದರೆ ಗ್ರಾಮವನ್ (GramaOne), ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು. ಆದರೆ, ಈ ಕೇಂದ್ರಗಳ ಸರ್ವರ್ ಕೂಡ ದತ್ತಾಂಶ ಕೇಂದ್ರಕ್ಕೆ ಲಿಂಕ್ ಆಗಿರುವುದರಿಂದ ಅಲ್ಲೂ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಪಾಸ್ ವಿತರಣಾ ಕೌಂಟರ್‌ಗಳಲ್ಲಿ ಆಫ್‌ಲೈನ್ ಮೂಲಕವೇ ಸಹಾಯ ಪಡೆಯಬೇಕಾದ ಅನಿವಾರ್ಯತೆ ಎದುರಾಗಬಹುದು.
ಯಾವೆಲ್ಲಾ ಪ್ರಮುಖ ಸೇವೆಗಳು ಸಂಪೂರ್ಣ ಬಂದ್? ಇಲ್ಲಿದೆ ಲಿಸ್ಟ್!

ರಾಜ್ಯ ದತ್ತಾಂಶ ಕೇಂದ್ರವು ಒಟ್ಟು 260+ ಸರ್ವರ್‌ಗಳನ್ನು ಒಳಗೊಂಡಿದ್ದು, 100ಕ್ಕೂ ಹೆಚ್ಚು ಸರ್ಕಾರಿ ಅಪ್ಲಿಕೇಶನ್‌ಗಳನ್ನು ಹೋಸ್ಟ್ ಮಾಡುತ್ತದೆ. ಈ  ಅವಧಿಯಲ್ಲಿ
  1. ನಾಡಕಚೇರಿ (Nadakacheri): ಜಾತಿ, ಆದಾಯ, ವಾಸಸ್ಥಳ ಸೇರಿದಂತೆ ಯಾವುದೇ ಪ್ರಮಾಣಪತ್ರ ಸಿಗಲ್ಲ.
  2. ಭೂಮಿ (Bhoomi): ಜಮೀನಿನ ಪಹಣಿ, ಮ್ಯುಟೇಶನ್ ಸೇರಿದಂತೆ ಭೂ-ದಾಖಲೆಗಳ ಸೇವೆಗಳು ಡೌನ್.
  3. ಅರ್ಜಿ ವ್ಯವಸ್ಥೆಗಳು: ಇ-ಆಫೀಸ್, ಸಕಾಲ (Sakaala) ಹಾಗೂ ಇ-ಪ್ರೊಕ್ಯೂರ್‌ಮೆಂಟ್ ಸೇವೆಗಳು ಸ್ಥಗಿತ.
  4. ಇತರೆ ಇಲಾಖೆಗಳು: ಕಂದಾಯ, ಆರೋಗ್ಯ, ಶಿಕ್ಷಣ, ಕೃಷಿ, ಸಾರಿಗೆ ಮತ್ತು ಪೊಲೀಸ್ ಇಲಾಖೆ ವೆಬ್‌ಸೈಟ್‌ಗಳು ಹಾಗೂ HRMS ಪೋರ್ಟಲ್ ಕಾರ್ಯನಿರ್ವಹಿಸುವುದಿಲ್ಲ. (ಗಮನಿಸಿ: ಕೇವಲ ಕೆಲವು ವಿಪತ್ತು ನಿರ್ವಹಣಾ (DR) ಸಿಸ್ಟಮ್‌ಗಳು ಮಾತ್ರ ಈ ವೇಳೆ ಬ್ಯಾಕ್-ಎಂಡ್‌ನಲ್ಲಿ ಆಕ್ಟಿವ್ ಇರಲಿವೆ).

ಇದ್ದಕ್ಕಿದ್ದಂತೆ ಈ ಸರ್ವರ್ ಡೌನ್ ಯಾಕೆ? ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಇದನ್ನೂ ಓದಿ: Karnataka Rains: : ಜುಲೈ 1ರವರೆಗೆ ಈ ಜಿಲ್ಲೆಗಳಲ್ಲಿ ಅಪ್ಪಳಿಸಲಿದೆ 40km ವೇಗದ ಬಿರುಗಾಳಿ ಸಹಿತ ಮಹಾಮಳೆ! ಐಎಂಡಿ ಹೇಳಿದ್ದೇನು?

ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಇದು ರಾಜ್ಯದ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಹೆಜ್ಜೆಯಾಗಿದೆ. KSDCಯು ಟಿಯರ್-III (Tier-III) ಕಂಪ್ಲೈಂಟ್ ಹಾಗೂ ISO ಪ್ರಮಾಣೀಕರಣ ಹೊಂದಿರುವ ಅತ್ಯಾಧುನಿಕ ಕೇಂದ್ರವಾಗಿದೆ. ಭವಿಷ್ಯದಲ್ಲಿ ಸೈಬರ್ ಭದ್ರತೆ, ಡೇಟಾ ನಿರ್ವಹಣಾ ಸಾಮರ್ಥ್ಯ ಹಾಗೂ ಸೇವೆಗಳ ವೇಗವನ್ನು ಹೆಚ್ಚಿಸಲು ತಜ್ಞರ ಸಲಹೆಯ ಮೇರೆಗೆ ಈ ಮೂಲಸೌಕರ್ಯ ಹಾಗೂ ವಿದ್ಯುತ್ ನಿರ್ವಹಣಾ ಕಾರ್ಯ (Infrastructure & Electrical upgrades) ಕೈಗೊಳ್ಳಲಾಗುತ್ತಿದೆ,” ಎಂದು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed