Last Updated:
Darshan Case: ರೇಣುಕಾಸ್ವಾಮಿ ಕೇಸ್ನ ಮಾಫಿ ಸಾಕ್ಷಿ ವಿಚಾರವಾಗಿ 20ಕ್ಕೆ ಪ್ರದೋಷ್ ಹೇಳಿಕೆ ದಾಖಲಿಕೆಗೆ ಡೇಟ್ ಫಿಕ್ಸ್ ಆಗಿದೆ. ಒಂದು ವೇಳೆ ಕೋರ್ಟ್ ಮಾಫಿ ಸಾಕ್ಷಿ ಒಪ್ಪದಿದ್ದರೆ ಏನಾಗುತ್ತದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಇಂದು ಮತ್ತೆ ಮಾಫಿ ಸಾಕ್ಷಿ ಹೇಳಿಕೆಗೆ ಸಮಯ ನಿಗದಿಯಾಗಿತ್ತು. ಆದರೆ ಎ-14 ಪ್ರದೂಷ್ ಮಾಫಿ ಸಾಕ್ಷಿಯಾಗಲು (Approver) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ಮತ್ತೆ ವಾದ ಮಂಡಿಸಿದ್ದರು. ಹೀಗಿರುವಾಗ ಅಪ್ರೂವರ್ ಸ್ಟೇಟ್ಮೆಂಟ್ ಪ್ರಕ್ರಿಯೆಯನ್ನ ಆಗಸ್ಟ್ 20ಕ್ಕೆ ಕೋರ್ಟ್ ಮುಂದೂಡಿದೆ.














