KKR vs MI: ಕೆಕೆಆರ್ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿದ ಕನ್ನಡಿಗ! ಮುಂಬೈಗೆ ಮತ್ತೊಂದು ಹೀನಾಯ ಸೋಲು | ಕ್ರೀಡಾ ಸುದ್ದಿ | ACTPnews

ಮನೀಶ್ ಪಾಂಡೆ


Last Updated:

ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್‌ಗಳಿಂದ ಜಯಗಳಿಸಿತು. ಈ ಗೆಲುವು ಕೆಕೆಆರ್ ತಂಡವನ್ನು ಪ್ಲೇಆಫ್ ರೇಸ್‌ನಲ್ಲಿ ಉಳಿಸಿಕೊಂಡಿದೆ.

ಮನೀಶ್ ಪಾಂಡೆ
ಮನೀಶ್ ಪಾಂಡೆ

ಐಪಿಎಲ್ 2026 ರ 65ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಿತು. ಕೆಕೆಆರ್ ಮುಂಬೈ ತಂಡವನ್ನು ತಮ್ಮ ತವರು ಮೈದಾನದಲ್ಲಿ 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್‌ನಲ್ಲಿ ಉಳಿದಿದೆ. ಕೆಕೆಆರ್ ಗೆಲುವಿನಲ್ಲಿ ಕನ್ನಡಿಗ ಮನೀಷ್ ಪಾಂಡೆ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್‌ಗಳಿಗೆ 147 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆಕೆಆರ್ 19ನೇ ಓವರ್‌ನಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು. 

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯವು ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಮುಂಬೈ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ.

ಆರಂಭದಲ್ಲೇ ಹಳಿ ತಪ್ಪಿದ ಕೆಕೆಆರ್

ಮುಂಬೈ ವೇಗಿ ದೀಪಕ್ ಚಾಹರ್ ಬೌಲಿಂಗ್‌ನಲ್ಲಿ ಫಿನ್ ಅಲೆನ್ ಕೇವಲ 8 ರನ್‌ಗಳಿಗೆ ಕ್ಯಾಚ್ ಔಟಾದರು. ಅಜಿಂಕ್ಯ ರಹಾನೆ ಕಾರ್ಬಿನ್ ಬಾಷ್ ಬೌಲಿಂಗ್‌ನಲ್ಲಿ 21 ರನ್ ಗಳಿಸಿ ಔಟಾದರು. ನಂತರ ಕ್ಯಾಮರೂನ್ ಗ್ರೀನ್‌ ಕೂಡ ಕೇವಲ 4 ರನ್ ಗಳಿಸಿ ಔಟಾದರು.​ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಇಲ್ಲಿಂದ ಮನೀಶ್ ಪಾಂಡೆ (45) ಮತ್ತು ರೋವ್‌ಮನ್ ಪೊವೆಲ್ (40) ಉತ್ತಮ ಜೊತೆಯಾಟವಾಡಿದರು.

ಮಿಂಚಿದ ಕನ್ನಡಿಗ

ಫಿನ್ ಅಲೆನ್ ಔಟಾದ ಬಳಿಕ ಕನ್ನಡಿಗ ಮನೀಶ್ ಪಾಂಡೆ ಕ್ರೀಸ್​ಗೆ ಬಂದರು. ತಾಳ್ಮೆಯುತ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರರ್ದಶಿಸಿದರು. ಮುಂಬೈ ಬೌಲಿಂಗ್​ಯನ್ನು ಎದುರಿಸಿದ ಪಾಂಡೆ ಅರ್ಧಶತಕದ ಹೊಸ್ತಿಲಲ್ಲಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಪಾಂಡೆ ತಮ್ಮ ಮಿಂಚಿನ ಇನ್ನಿಂಗ್ಸ್​​ ಆಡಿದ 33 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 45 ರನ್ ಕಲೆ ಹಾಕಿದರು. ಮತ್ತೊಂದೆಡೆ ಪೊವೆಲ್ ಕೂಡ 40 ರನ್ ಗಳಿಸಿದರು.

ಮನೀಶ್ ಪಾಂಡೆ ಮತ್ತು ರೋವ್‌ಮನ್ ಪೊವೆಲ್ ಜೋಡಿ 64 ರನ್ ಗಳಿಸಿ ಕೆಕೆಆರ್ ಗೆಲುವಿಗೆ ಸುಲಭ ದಾರಿ ಮಾಡಿಕೊಟ್ಟರು. ಈ ಜೋಡಿಯ ವಿಕೆಟ್ ಪತನದ ನಂತರ ತೇಜಸ್ವಿ ಸಿಂಗ್ (11) ಕೊನೆಯ ಓವರ್‌ನಲ್ಲಿ ಔಟಾದರು. ಅನುಕುಲ್ ರಾಯ್ (4) ಮತ್ತು ರಿಂಕು ಸಿಂಗ್ (9) ಅಜೇಯರಾಗಿ ಉಳಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed