Last Updated:
ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ಗಳಿಂದ ಜಯಗಳಿಸಿತು. ಈ ಗೆಲುವು ಕೆಕೆಆರ್ ತಂಡವನ್ನು ಪ್ಲೇಆಫ್ ರೇಸ್ನಲ್ಲಿ ಉಳಿಸಿಕೊಂಡಿದೆ.
ಐಪಿಎಲ್ 2026 ರ 65ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು. ಕೆಕೆಆರ್ ಮುಂಬೈ ತಂಡವನ್ನು ತಮ್ಮ ತವರು ಮೈದಾನದಲ್ಲಿ 4 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್ನಲ್ಲಿ ಉಳಿದಿದೆ. ಕೆಕೆಆರ್ ಗೆಲುವಿನಲ್ಲಿ ಕನ್ನಡಿಗ ಮನೀಷ್ ಪಾಂಡೆ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್ಗಳಿಗೆ 147 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆಕೆಆರ್ 19ನೇ ಓವರ್ನಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯವು ಕೆಕೆಆರ್ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಮುಂಬೈ ನೀಡಿದ 148 ರನ್ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ.
ಮುಂಬೈ ವೇಗಿ ದೀಪಕ್ ಚಾಹರ್ ಬೌಲಿಂಗ್ನಲ್ಲಿ ಫಿನ್ ಅಲೆನ್ ಕೇವಲ 8 ರನ್ಗಳಿಗೆ ಕ್ಯಾಚ್ ಔಟಾದರು. ಅಜಿಂಕ್ಯ ರಹಾನೆ ಕಾರ್ಬಿನ್ ಬಾಷ್ ಬೌಲಿಂಗ್ನಲ್ಲಿ 21 ರನ್ ಗಳಿಸಿ ಔಟಾದರು. ನಂತರ ಕ್ಯಾಮರೂನ್ ಗ್ರೀನ್ ಕೂಡ ಕೇವಲ 4 ರನ್ ಗಳಿಸಿ ಔಟಾದರು. ಕೆಕೆಆರ್ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಇಲ್ಲಿಂದ ಮನೀಶ್ ಪಾಂಡೆ (45) ಮತ್ತು ರೋವ್ಮನ್ ಪೊವೆಲ್ (40) ಉತ್ತಮ ಜೊತೆಯಾಟವಾಡಿದರು.
ಫಿನ್ ಅಲೆನ್ ಔಟಾದ ಬಳಿಕ ಕನ್ನಡಿಗ ಮನೀಶ್ ಪಾಂಡೆ ಕ್ರೀಸ್ಗೆ ಬಂದರು. ತಾಳ್ಮೆಯುತ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರರ್ದಶಿಸಿದರು. ಮುಂಬೈ ಬೌಲಿಂಗ್ಯನ್ನು ಎದುರಿಸಿದ ಪಾಂಡೆ ಅರ್ಧಶತಕದ ಹೊಸ್ತಿಲಲ್ಲಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಪಾಂಡೆ ತಮ್ಮ ಮಿಂಚಿನ ಇನ್ನಿಂಗ್ಸ್ ಆಡಿದ 33 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 45 ರನ್ ಕಲೆ ಹಾಕಿದರು. ಮತ್ತೊಂದೆಡೆ ಪೊವೆಲ್ ಕೂಡ 40 ರನ್ ಗಳಿಸಿದರು.
ಮನೀಶ್ ಪಾಂಡೆ ಮತ್ತು ರೋವ್ಮನ್ ಪೊವೆಲ್ ಜೋಡಿ 64 ರನ್ ಗಳಿಸಿ ಕೆಕೆಆರ್ ಗೆಲುವಿಗೆ ಸುಲಭ ದಾರಿ ಮಾಡಿಕೊಟ್ಟರು. ಈ ಜೋಡಿಯ ವಿಕೆಟ್ ಪತನದ ನಂತರ ತೇಜಸ್ವಿ ಸಿಂಗ್ (11) ಕೊನೆಯ ಓವರ್ನಲ್ಲಿ ಔಟಾದರು. ಅನುಕುಲ್ ರಾಯ್ (4) ಮತ್ತು ರಿಂಕು ಸಿಂಗ್ (9) ಅಜೇಯರಾಗಿ ಉಳಿದರು.
May 21, 2026 12:34 AM IST













