Last Updated:
Kichcha Sudeeep: ನಟ ಕಿಚ್ಚ ಸುದೀಪ್ ಅವರು ಇಂದು ಬರ್ತ್ಡೇ ಆಚರಿಸುತ್ತಿದ್ದಾರೆ. ಈ ವೇಳೆ ಅವರ ಆಪ್ತರೊಬ್ಬರು ಮಾಡಿರುವ ವಿಶ್ ನಟ ರಾಜಕೀಯಕ್ಕೆ ಬರಲಿದ್ದಾರಾ ಎನ್ನುವಂತಹ ಸಂದೇಹ ಮೂಡಿಸಿದೆ.
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ಅಭಿನಯ ಚಕ್ರವರ್ತಿ, ಕನ್ನಡ ಚಿತ್ರರಂಗದ ಬಾದ್ಷಾ ಕಿಚ್ಚ ಸುದೀಪ್ (Kichcha Sudeep) ಅವರು ಇಂದು 53ನೇ ವರ್ಷದ ಹುಟ್ಟುಹಬ್ಬ (Birthday) ಆಚರಿಸುತ್ತಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ಒಂದೊಂದಾಗಿ ಅವರ ಸಿನಿಮಾ ಅಪ್ಡೇಟ್ಸ್ (Updates) ಕೂಡಾ ರಿವೀಲ್ ಆಗುತ್ತಿವೆ. ಈ ಸಂದರ್ಭದಲ್ಲಿ ಕಿಚ್ಚನಿಗೆ ಅಭಿಮಾನಿಗಳಿಂದ ಶುಭಾಶಯದ ಸುರಿಮಳೆಯಾಗುತ್ತಿದೆ.














