Kichcha Sudeep: ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್ಡೇಟ್! ಇನ್ನೊಂದು ವಾರದಲ್ಲಿ ಶೂಟಿಂಗ್ ಶುರು | | ACTPnews

ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್‌ಡೇಟ್!


Last Updated:

ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಮತ್ತೆ ಶುರು ಆಗುತ್ತಿದೆ. ಸ್ವತಃ ಸುದೀಪ್ ಈ ಮಾಹಿತಿ ಕೊಟ್ಟಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್‌ಡೇಟ್!
ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್‌ಡೇಟ್!

ಕಿಚ್ಚ ಸುದೀಪ್ (Kichcha Sudeepa) ಅವರ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baasha Movie) ಶೂಟಿಂಗ್ (Shooting) ಶುರು ಆಗುತ್ತಿದೆ. ಜೂನ್-26 ರಿಂದ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಈ ಚಿತ್ರದ ವಿಷಯವನ್ನ ಸ್ವತಃ ಸುದೀಪ್ (Sudeepa) ಹೇಳಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನ ಬರೆದುಕೊಂಡಿದ್ದಾರೆ. ಬಿಲ್ಲ ರಂಗ ಬಾಷಾ ಅಲ್ಲದೆ ಒಪ್ಪಿರೋ ನಾಲ್ಕು ಚಿತ್ರಗಳ ವಿಷಯವನ್ನು ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಜೂನ್-26 ರಿಂದ ಶೂಟಿಂಗ್

ಬಿಲ್ ರಂಗ ಬಾಷಾ ಚಿತ್ರ ಬಹು ಕೋಟಿ ವೆಚ್ಚದ ಚಿತ್ರೇ ಆಗಿದೆ. ಒಂದು ಹಂತದ ಶೂಟಿಂಗ್ ಆಗಿದೆ. ಆದರೆ, ಈ ಚಿತ್ರ ನಿಂತೇ ಹೋಯಿತು ಅನ್ನೋ ಸುದ್ದಿನೂ ಇತ್ತು.

Kichcha Sudeep Anup Bhandari Billa Ranga Baasha shooting updates

ಜೂನ್-26 ರಿಂದ ಶೂಟಿಂಗ್ ಶುರು

(ಚಿತ್ರ ಕೃಪೆ: ಸುದೀಪ್ ಇನ್‌ಸ್ಟಾಗ್ರಾಮ್)

ಆದರೆ, ಸುದೀಪ್ ಅವರು ಕೆಡಿ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ತಮ್ಮ ಬಿಲ್ಲ ರಂಗ ಬಾಷಾ ಶುರು ಆಗುವ ಬಗ್ಗೆ ಹೇಳಿಕೊಂಡಿದ್ದರು. ಇದರ ನಡುವೆ ಸುದೀಪ್ ನಾಲ್ಕು ಚಿತ್ರ ಒಪ್ಪಿರೋ ಮಾಹಿತಿನೂ ಇತ್ತು.
ಸುದೀಪ್ ಹೇಳಿರೋದು ಏನು

ಸುದೀಪ್ ತಮ್ಮ ಚಿತ್ರಗಳ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಿಮ್ಮನ್ನ ರಂಜಿಸುವುದು ನನಗೆ ಅತ್ಯಂತ ಸಂತೋಷದ ಕೆಲಸವೇ ಆಗಿದೆ.

ಆದರೆ, ನಾನು ಮಾರ್ಕ್ ಆದ್ಮೆಲೆ ಸ್ವಲ್ಪ ಬ್ರೇಕ್ ತೆಗೆದಕೊಂಡಿದ್ದೆ. ಆದರೂ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ ಇದ್ದೆ. ಈಗ ಬ್ಯಾಕ್ ಟು ಬ್ಯಾಕ್ ಅನ್ನುವ ಹಾಗೆ ಸಿನಿಮಾ ಕೆಲಸಗಳು ಶುರು ಆಗುತ್ತವೆ.

ನಾಲ್ಕು ಸ್ಕ್ರಿಪ್ಟ್ ಲಾಕ್ ಆಗಿವೆ

ನಾಲ್ಕು ಚಿತ್ರಗಳ ಕತೆ ಓಕೆ ಆಗಿದೆ. ಈ ಚಿತ್ರಗಳ ಕೆಲಸವು ಶುರು ಆಗುತ್ತದೆ. ಈ ಚಿತ್ರಗಳಲ್ಲದೆ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ. ಜೂನ್-26 ರಿಂದ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ ಅಂತ ಸುದೀಪ್ ಬರೆದುಕೊಂಡಿದ್ದಾರೆ.

Kichcha Sudeep Anup Bhandari Billa Ranga Baasha shooting updates

ನಾಲ್ಕು ಸ್ಕ್ರಿಪ್ಟ್ ಲಾಕ್ ಆಗಿವೆ

(ಚಿತ್ರ ಕೃಪೆ: ಸುದೀಪ್ ಎಕ್ಸ್‌ಖಾತೆ)

ಬೆಂಗಳೂರಿನಲ್ಲಿಯೇ ಈ ಚಿತ್ರದ ಚಿತ್ರೀಕರಣ ಶುರು ಆಗುತ್ತಿದೆ. ಈ ಒಂದು ಚಿತ್ರದ ಕೆಲಸದಲ್ಲಿಯೇ ಸುದೀಪ್ ಬ್ಯುಸಿ ಆಗಲಿದ್ದಾರೆ.

ಈ ಸಲ ನಿರ್ಮಾಪಕರು ಯಾರು

ಬಿಲ್ಲ ರಂಗ ಬಾಷಾ ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. ಈ ಚಿತ್ರ ನಿಂತೇ ಹೋಯಿತು ಅನ್ನೋ ಮಾತು ಇತ್ತು. ಆದರೆ, ಈ ಚಿತ್ರವನ್ನ ಈ ಸಲ ಟಾಲಿವುಡ್‌ ಹನುಮಾನ್ ಚಿತ್ರ ನಿರ್ಮಿಸಿದ್ದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಿಸುತ್ತಿದ್ದಾರೆ.

ಬಿಲ್ಲ ರಂಗ ಬಾಷಾ ಬಿಗ್ ಚಿತ್ರ

ಬಿಲ್ಲ ರಂಗ ಬಾಷಾ ಅತಿ ದೊಡ್ಡ ಚಿತ್ರವೇ ಆಗಿದೆ. ಹಾಗೆ ಇದು ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. ಸುದೀಪ್ ಮತ್ತು ಅನೂಪ್ ಭಂಡಾರಿ ಈ ಚಿತ್ರದ ಮೂಲಕ ಹೊಸದೊಂದು ಜಗತ್ತಿನ ಪರಿಚಯ ಮಾಡಿಸೋಕೆ ಮುಂದಾಗಿದ್ದಾರೆ.

ಈ ಒಂದು ದೊಡ್ಡ ಚಿತ್ರಕ್ಕೂ ಮುಂಚೆ ತಮ್ಮ ಕಲ್ಪನೆಯನ್ನ ವಿಕ್ರಾಂತ್ ರೋಣ ಚಿತ್ರದಲ್ಲಿ ಟ್ರೈ ಮಾಡಿದ್ದರು. ಅದು ಸಕ್ಸಸ್ ಆದ್ಮೇಲೇನೆ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಕೈಹಾಕಿದ್ದರು. ಅದು ಏನು ಅನ್ನೋದು ಚಿತ್ರದ ಮೊದಲ ಹಂತದ ಚಿತ್ರೀಕರಣದಲ್ಲಿಯೇ ಗೊತ್ತಾಗಿದೆ. ಇನ್ನು ಇಡೀ ಚಿತ್ರ ಹೇಗೆಲ್ಲ ಇರ್ತದೆ ಅನ್ನುವ ಕುತೂಹಲ ಹೆಚ್ಚಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed