Ketan Agarwal Case: ದೇವರಿಗೆ ಹರಕೆ ಹೊತ್ತು ಹುಟ್ಟಿದ ಸಿಯಾ, ಈಗ ಹಂತಕಿ! ಇಲ್ಲಿದೆ ಗೋಯಲ್ ಕುಟುಂಬದ ಕರಾಳ ಕಥೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Ketan Agarwal Case: ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಕುಟುಂಬದ ಹಿನ್ನೆಲೆಯ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಆ ಕುರಿತ ವರದಿ ಇಲ್ಲಿದೆ.

News18
News18

ಪುಣೆ (ಮಹಾರಾಷ್ಟ್ರ): ಪುಣೆಯ (Pune) ಸಮೀಪದ ಲೋಹಗಢ ಕೋಟೆಯಲ್ಲಿ (Lohagarh Fort) ನಡೆದ ಕೇತನ್ ಅಗರ್ವಾಲ್ (Ketan Agarwal) ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ಆಕಸ್ಮಿಕ ಸಾವಲ್ಲ, ಪೂರ್ವನಿಯೋಜಿತ ಕೊಲೆ, ಅದರಲ್ಲೂ, ಈ ಕೊಲೆ (Murder) ಮಾಡಿರುವುದು ಆತನ ಭಾವಿ ಪತ್ನಿ ಎನ್ನುವುದು ಎಲ್ಲರನ್ನೂ ದಿಗಿಲು ಮೂಡಿಸುವಂತಿದೆ. ಏತನ್ಮಧ್ಯೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಯಾ (Siya) ಅವರ ಕುಟುಂಬದ ಹಿನ್ನೆಲೆಯ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಆ ಕುರಿತ ವರದಿ ಇಲ್ಲಿದೆ.

ಹೌದು, ಆಕೆಯ ಸಂಬಂಧಿ ಸರಸ್ವತಿ ಗೋಯಲ್ ಹೇಳುವ ಪ್ರಕಾರ, “ಸಿಯಾಳ ತಂದೆ ತಾಯಿ ಹಲವು ವರ್ಷಗಳ ಪ್ರಾರ್ಥನೆ, ಹರಕೆಗಳ ನಂತರ ಆಕೆಯನ್ನು ಪಡೆದಿದ್ದರು. ಅದರಲ್ಲೂ, ಸಿಯಾ ಹುಟ್ಟುವ ಮುನ್ನವೇ ದಂಪತಿ ತಮ್ಮ ಕುಟುಂಬದಿಂದ ಒಬ್ಬ ಗಂಡು ಮಗುವನ್ನು ದತ್ತು ಪಡೆದಿದ್ದರು. ಧಾರ್ಮಿಕ ಮನೋಭಾವದ ಗೋಯಲ್ ಕುಟುಂಬಕ್ಕೆ ಸಿಯಾ ಏಕೈಕ ಸ್ವಂತ ಮಗಳು” ಎಂದಿದ್ದಾರೆ.

ಕರೆ ದಾಖಲೆಗಳೇ ಕೊಟ್ಟವು ಸಾಕ್ಷಿ

ಏತನ್ಮಧ್ಯೆ, ಪ್ರಕರಣದ ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಅವರ ಮೊಬೈಲ್ ಕರೆ ದಾಖಲೆಗಳು ಮಹತ್ವದ ಸಾಕ್ಷಿಯಾಗಿವೆ. ಇಬ್ಬರ ನಡುವೆ 2,000ಕ್ಕೂ ಹೆಚ್ಚು ಕರೆಗಳು ಮತ್ತು 238 ಗಂಟೆಗಳಿಗೂ ಅಧಿಕ ಚಾಟ್ ನಡೆದಿರುವುದು ಪತ್ತೆಯಾಗಿದೆ. ಅದರಲ್ಲೂ, ಕೊಲೆ ನಡೆದ ದಿನವೂ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದರು. ಜೊತೆಗೆ ಕೋಟೆಗೆ ಕೇತನ್‌ನನ್ನು ಕರೆಸುವ ಯೋಜನೆ, ಆತನ ಚಲನವಲನದ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳೇ ಇಬ್ಬರನ್ನು ಕಂಬಿ ಹಿಂದೆ ಕಳುಹಿಸಲು ಪ್ರಮುಖ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed