Last Updated:
ಕೆ.ಆರ್. ಮಾರ್ಕೆಟ್‌ನಲ್ಲಿ ವಾಹನಗಳು ಮತ್ತು ಸರಕುಗಳಿಗೆ ಪ್ರವೇಶ ಶುಲ್ಕ ನಿಗದಿ. ದೊಡ್ಡ ವಾಹನಗಳಿಗೆ 350 ರೂ., ಲಘು ವಾಹನಗಳಿಗೆ 100 ರೂ., ಚಿಕ್ಕ ವಾಹನಗಳಿಗೆ 75 ರೂ. ಪ್ರತಿ ಮೂಟೆಗೂ 5 ರೂ. ಶುಲ್ಕ. ಡಿಜಿಟಲ್ ಪಾವತಿ ಸೌಲಭ್ಯ.
ಬೆಂಗಳೂರಿನ (Bengaluru) ಹೆಮ್ಮೆಯ, ಐತಿಹಾಸಿಕ ಕೆ.ಆರ್. ಮಾರ್ಕೆಟ್‍ಗೆ (K R Market) ಹೆಜ್ಜೆ ಇಡುವ ಮುನ್ನ ಅಥವಾ ನಿಮ್ಮ ಸರಕುಗಳನ್ನು ಒಳಗೆ ತರುವ ಮುನ್ನ ಈ ಸುದ್ದಿ ನಿಮಗೆ ಅತ್ಯಂತ ಮುಖ್ಯ. ರಾಜಧಾನಿಯ ಜೀವನಾಡಿಯಾಗಿರುವ ಕೆ.ಆರ್. ಮಾರ್ಕೆಟ್‍ನ ಸಮಗ್ರ ಅಭಿವೃದ್ಧಿ, ಸಿವಿಲ್ ಕಾಮಗಾರಿಗಳು, ಸ್ಮಾರ್ಟ್ (Smart) ತಂತ್ರಜ್ಞಾನದ ಅಳವಡಿಕೆ ಹಾಗೂ ಒಟ್ಟಾರೆ ನಿರ್ವಹಣೆಗಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಬರೋಬ್ಬರಿ 10 ವರ್ಷಗಳ ದೀರ್ಘಾವಧಿಯ ಟೆಂಡರ್ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಇದರ ಬೆನ್ನಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುವ ಸರಕು ಸಾಗಣೆ ವಾಹನಗಳು ಹಾಗೂ ಪ್ರತಿಯೊಂದು ವಸ್ತುವಿನ ಮೂಟೆಗಳ ಮೇಲೂ ಅಧಿಕೃತ ಪ್ರವೇಶ ಶುಲ್ಕದ ಬಾಸುಂಡೆ ಬಿದ್ದಿದೆ.














