Last Updated:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ಆಗೋದಾಗಿ ಪ್ರದೋಷ್ ಮುಂದೆ ಬಂದಿದ್ದು, ಈ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರದೂಷ್ನನ್ನ ಕೋರ್ಟ್ಗೆ ಜೈಲಾಧಿಕಾರಿಗಳು ಕರೆತರಲಿದ್ದು, ದರ್ಶನ್ ಪಾಲಿಗೆ ಇಂದು ಬಿಗ್ ಡೇ ಆಗಿದೆ.
ಬೆಂಗಳೂರು (ಸೆ.02): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರೋ ದರ್ಶನ್ಗೆ (Darshan) ಸಾಲು ಸಾಲು ಸಂಕಷ್ಟಗಳು ಎದುರಾಗ್ತಿದೆ. ಮಾಫಿ ಸಾಕ್ಷಿಯಾಗಿ ಪ್ರದೋಷ್ ಏನು ಹೇಳಿಕೆ ನೀಡ್ತಾನೆ ಎನ್ನುವ ಭಯ ದಾಸನನ್ನ ಆವರಿಸಿದೆ. 14ನೇ ಆರೋಪಿ ಪ್ರದೂಷ್ (Pradosh) ರನ್ನು ಮಾಫಿ ಸಾಕ್ಷಿಯಾಗಿ 59ನೇ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ಪರಿಗಣಿಸಿದೆ. ಈ ಆದೇಶ ರದ್ದು ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಇಂದು ಬೆಳಗ್ಗೆಯೇ ಪ್ರಕಟಿಸಲಿದ್ದು, ಜೊತೆಗೆ ಮಾಫಿ ಸಾಕ್ಷಿ ಹೇಳಿಕೆ ಕೂಡ ಇಂದೇ ದಾಖಲಾಗೋ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಾಫಿ ಸಾಕ್ಷಿಗೆ ಕೋರ್ಟ್ ಅನುಮತಿ ಕೊಟ್ರೆ ದಾಸನಿಗೆ ದೊಡ್ಡ ಸಂಕಟ ಎದುರಾಗಲಿದ್ದು, ಹೀಗಾಗಿ ದರ್ಶನ್ ಪಾಲಿಗೆ ಇಂದು ಬಿಗ್ ಡೇ..














