Job In Bengaluru: ಬೆಂಗಳೂರು ಡಿಸಿ ಕಚೇರಿಯಿಂದ ಕೆಲಸದ ಅವಕಾಶ, 142 ನೇರಪಾವತಿ ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews

ಉದ್ಯೋಗಾವಕಾಶ


Last Updated:

ಬೆಂಗಳೂರು ಡಿಸಿ ಕಚೇರಿಯಿಂದ 142 ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಹುದ್ದೆಗಳಿಗೆ ಅಧಿಸೂಚನೆ. ಶೈಕ್ಷಣಿಕ ವಿದ್ಯಾರ್ಹತೆ ಇಲ್ಲ, ಕನ್ನಡ ಜ್ಞಾನ, 1 ವರ್ಷ ಅನುಭವ ಕಡ್ಡಾಯ. ಅರ್ಜಿ ಶುಲ್ಕವಿಲ್ಲ. ಕೊನೆಯ ದಿನಾಂಕ: 21-08-2026.

ಉದ್ಯೋಗಾವಕಾಶ
ಉದ್ಯೋಗಾವಕಾಶ

ಬೆಂಗಳೂರು: ಸರ್ಕಾರಿ (Govt) ವಲಯದಲ್ಲಿ ಉದ್ಯೋಗ (Job) ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಜಿಲ್ಲಾಧಿಕಾರಿಗಳ (DC) ಕಾರ್ಯಾಲಯದ ವತಿಯಿಂದ ಅತ್ಯುತ್ತಮ ಸುದ್ದಿಯೊಂದು ಹೊರಬಂದಿದೆ. ಬೆಂಗಳೂರು (Bengaluru) ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 142 ಯುಜಿಡಿ ಹೆಲ್ಪರ್ಸ್ ಮತ್ತು ಕ್ಲೀನರ್ಸ್ ನೇರಪಾವತಿ ಹುದ್ದೆಗಳ (Jobs) ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ಅಧಿಕೃತ ಶೈಕ್ಷಣಿಕ ವಿದ್ಯಾರ್ಹತೆ ಇಲ್ಲದವರಿಗೂ ಇದು ಸ್ಥಿರವಾದ ಉದ್ಯೋಗ ಅವಕಾಶವನ್ನು ಒದಗಿಸಲಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಹಾಗೂ ಸ್ಥಳ

ಮಾದನಾಯಕನಹಳ್ಳಿ ಮತ್ತು ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಈ ಹುದ್ದೆಗಳು ಖಾಲಿ ಇವೆ.

ಮಾದನಾಯಕನಹಳ್ಳಿ ನಗರಸಭೆ: 62 ಹುದ್ದೆಗಳು

ಹೆಬ್ಬಗೋಡಿ ನಗರಸಭೆ: 80 ಹುದ್ದೆಗಳು

ವಿದ್ಯಾರ್ಹತೆ ಮತ್ತು ಅನುಭವದ ವಿವರ

ಈ ಹುದ್ದೆಗಳಿಗೆ ಯಾವುದೇ ನಿರ್ದಿಷ್ಟ ಶೈಕ್ಷಣಿಕ ವಿದ್ಯಾರ್ಹತೆ ಕಡ್ಡಾಯವಾಗಿಲ್ಲ. ಆದರೆ ಅಭ್ಯರ್ಥಿಗಳಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು. ಇದರ ಜೊತೆಗೆ ಹೊರಗುತ್ತಿಗೆ, ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಕನಿಷ್ಠ 1 ವರ್ಷ ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಅಥವಾ ಹೆಲ್ಪರ್ಸ್‍ಗಳಾಗಿ ಕಾರ್ಯನಿರ್ವಹಿಸಿದ ಮುಂಗಡ ಅನುಭವವನ್ನು ಹೊಂದಿರಬೇಕು ಎಂದು ವರದಿ https://kannadasamachar.com/ ಮಾಡಿದೆ.
ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು ಹಾಗೂ ಗರಿಷ್ಠ ವಯೋಮಿತಿ 50 ವರ್ಷಗಳಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಸಾಮಾನ್ಯ ವರ್ಗದ ಎಲ್ಲ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಮಾದನಾಯಕನಹಳ್ಳಿ ಅಥವಾ ಹೆಬ್ಬಗೋಡಿ ನಗರಸಭೆ ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಗುರುತಿನ ಚೀಟಿ ಹಾಗೂ ಅನುಭವ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-08-2026 ಆಗಿರುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed