Rising Bharat Summit: ಕ್ರಿಕೆಟ್‌ನಂತೆ ಇತರೇ ಕ್ರೀಡೆಗಳಿಗೆ ಬೆಂಬಲ ಬೇಕು! ‘ರೈಸಿಂಗ್ ಭಾರತ್‌’ನಲ್ಲಿ ಸೈನಾ ನೆಹ್ವಾಲ್ ಡಿಮ್ಯಾಂಡ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸೈನಾ ನೆಹ್ವಾಲ್​


Last Updated:

ನ್ಯೂಸ್18 ರೈಸಿಂಗ್ ಭಾರತ್ ಇಂಡಿಯಾ ಸಮ್ಮಿಟ್ – ಸೌತ್ ಎಡಿಷನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಸೈನಾ ನೆಹ್ವಾಲ್, ಭಾರತದಲ್ಲಿ ವಿಶ್ವ ದರ್ಜೆಯ ಕ್ರೀಡಾಪಟುಗಳು ನಿರಂತರವಾಗಿ ರೂಪುಗೊಳ್ಳಬೇಕಾದರೆ ವ್ಯವಸ್ಥೆ, ಪ್ರಚಾರ, ಹೂಡಿಕೆ ಮತ್ತು ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೈನಾ ನೆಹ್ವಾಲ್​
ಸೈನಾ ನೆಹ್ವಾಲ್​

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದ ದಿಗ್ಗಜ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal), ‘ನ್ಯೂಸ್18 ರೈಸಿಂಗ್ ಭಾರತ್ ಇಂಡಿಯಾ ಸಮ್ಮಿಟ್ – ಸೌತ್ ಎಡಿಷನ್’ (Rising Bharat India Summit) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿರುವ ಸೈನಾ ನೆಹ್ವಾಲ್, ಭಾರತದಲ್ಲಿ ವಿಶ್ವ ದರ್ಜೆಯ ಕ್ರೀಡಾಪಟುಗಳು ನಿರಂತರವಾಗಿ ರೂಪುಗೊಳ್ಳಬೇಕಾದರೆ ವ್ಯವಸ್ಥೆ, ಪ್ರಚಾರ, ಹೂಡಿಕೆ ಮತ್ತು ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ವಿಶ್ವದ ನಂಬರ್-1 ರ್ಯಾಂಕ್ ಪಡೆದ ಆಟಗಾರ್ತಿಯಾಗಿ ಸೈನಾ ನೆಹ್ವಾಲ್ ಅವರು ಭಾರತೀಯ ಕ್ರೀಡಾ ರಂಗದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಆದರೆ, ಈ ಯಶಸ್ಸಿನ ಹಿಂದೆ ಹಲವು ಸವಾಲುಗಳಿದ್ದವು. ವಿಶೇಷವಾಗಿ ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಲು ಹೊರಡುವ ಕ್ರೀಡಾಪಟುಗಳು ಎದುರಿಸುವ ಕಷ್ಟಗಳನ್ನು ತಾವು ಸ್ವತಃ ಅನುಭವಿಸಿರುವುದಾಗಿ ನ್ಯೂಸ್18 ರೈಸಿಂಗ್ ಭಾರತ್ ಇಂಡಿಯಾ ಸಮ್ಮಿಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕ್ರಿಕೆಟ್‌ನ ಯಶಸ್ಸಿಗೆ ಬಲಿಷ್ಠ ವ್ಯವಸ್ಥೆಯೇ ಕಾರಣ

ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿರುವ ಸೈನಾ ನೆಹ್ವಾಲ್, ಭಾರತದಲ್ಲಿ ಕ್ರಿಕೆಟ್ ಇಷ್ಟೊಂದು ಜನಪ್ರಿಯವಾಗಲು ಬಲವಾದ ವ್ಯವಸ್ಥೆ, ಯಶಸ್ವಿ ಲೀಗ್‌ಗಳು ಮತ್ತು ನಿರಂತರ ಪ್ರಚಾರವೇ ಪ್ರಮುಖ ಕಾರಣ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ದೇಶಾದ್ಯಂತ ಅನೇಕ ಟೂರ್ನಮೆಂಟ್ ಹಾಗೂ ಸ್ಪರ್ಧೆಗಳನ್ನು ನಡೆಸುವುದು ಮಾತ್ರವಲ್ಲದೆ, ಅವುಗಳನ್ನು ಟಿವಿಯಲ್ಲಿ ವ್ಯಾಪಕವಾಗಿ ಪ್ರಸಾರ ಮಾಡುವುದರಿಂದ ಕ್ರಿಕೆಟ್ ಜನರಿಗೆ ಇನ್ನಷ್ಟು ಹತ್ತಿರವಾಗಿದೆ ಎಂದು ಹೇಳಿದರು.

ಇತರ ಕ್ರೀಡೆಗಳಲ್ಲಿಯೂ ಅನೇಕ ಟೂರ್ನಮೆಂಟ್‌ಗಳು ನಡೆಯುತ್ತಿದ್ದರೂ, ಅವುಗಳನ್ನು ಹೆಚ್ಚಾಗಿ ಆಯಾ ಕ್ರೀಡೆಗಳ ಅಭಿಮಾನಿಗಳು ವೀಕ್ಷಿಸುತ್ತಾರೆ. ಈ ಒಂದು ಪರಿಸ್ಥಿತಿಯನ್ನು ಬದಲಾಯಿಸಲು, ಕ್ರೀಡಾ ಸಂಘಗಳು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಇತರ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಸರಿಯಾದ ಪ್ರಚಾರದ ಮೂಲಕ ಮಾತ್ರ ಇತರ ಕ್ರೀಡೆಗಳು ಕ್ರಿಕೆಟ್ ಮಟ್ಟಕ್ಕೆ ಬೆಳೆಯಬಹುದು ಎಂದು ಹೇಳಿದರು.

ಯಶಸ್ಸಿನ ಮೊದಲು ಬೆಂಬಲ ಬೇಕು, ನಂತರ ಅಲ್ಲ

ಯುವ ಆಟಗಾರರಿಗೆ ಸಿಗುವ ಬೆಂಬಲದ ವಿಷಯದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಸೈನಾ ನೆಹ್ವಾಲ್ ಹೇಳಿದರು. ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಹೆಸರನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತಾ, ಅವರು ಈಗಾಗಲೇ ಅತ್ಯುನ್ನತ ಮಟ್ಟದ ತರಬೇತಿ ಮತ್ತು ಸಪೋರ್ಟ್ ಪಡೆಯುತ್ತಿದ್ದಾರೆ. ಅಂತಹ ವ್ಯವಸ್ಥೆಯು ಇತರ ಕ್ರೀಡೆಗಳಲ್ಲಿ ಕಂಡುಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ತಮ್ಮ ಕ್ರೀಡಾ ವೃತ್ತಿಜೀವನದ ಆರಂಭಿಕ ದಿನಗಳನ್ನು ಮೆಲುಕು ಹಾಕಿದ ಸೈನಾ ನೆಹ್ವಾಲ್, ಆರಂಭಿಕ ದಿನಗಳಲ್ಲಿ ನಮಗೆ ಯಾವುದೇ ಬೆಂಬಲವಿರಲಿಲ್ಲ. ಆಗ ಒಬ್ಬ ಕ್ರೀಡಾಪಟುವಿಗೆ ಟ್ರೈನರ್, ಆಹಾರ ತಜ್ಞರು, ವೈದ್ಯರು ಮತ್ತು ಮಾನಸಿಕ ತರಬೇತುದಾರರಂತಹ ಸಂಪೂರ್ಣ ಬೆಂಬಲ ತಂಡದ ಅಗತ್ಯವಿದೆ ಎಂದು ಅರಿತುಕೊಂಡೆ ಎಂದು ಹೇಳಿದರು.

ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ

ಪ್ರಸ್ತುತ, ಅನೇಕ ಕ್ರೀಡಾಪಟುಗಳು ಪ್ರಮುಖ ಯಶಸ್ಸನ್ನು ಸಾಧಿಸಿದ ನಂತರವೇ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಮತ್ತು ಬೆಂಬಲವನ್ನು ಪಡೆಯುತ್ತಾರೆ ಎಂದು ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿದ್ದಾರೆ. ಆದರೆ ವಿಶ್ವ ದರ್ಜೆಯ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕಾದರೆ ಈ ವಿಧಾನವು ಬದಲಾಗಬೇಕಾಗಿದೆ. ಯುವ ಆಟಗಾರರು ತಮ್ಮ ವೃತ್ತಿಜೀವನದ ಆರಂಭದಿಂದಲೇ ಗುಣಮಟ್ಟದ ತರಬೇತಿ, ವೈದ್ಯಕೀಯ ಬೆಂಬಲ, ಫಿಟ್ನೆಸ್ ತಜ್ಞರು ಮತ್ತು ಮಾನಸಿಕ ತರಬೇತಿಯಂತಹ ಎಲ್ಲಾ ಸಂಪನ್ಮೂಲಗಳಿಗೆ ಪ್ರವೇಶವನ್ನು ಹೊಂದಿದ್ದರೆ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಉತ್ತಮ ಅವಕಾಶವಿರುತ್ತದೆ ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports