Last Updated:
ಬೆಂಗಳೂರು ಡಿಸಿ ಕಚೇರಿಯಿಂದ 142 ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಹುದ್ದೆಗಳಿಗೆ ಅಧಿಸೂಚನೆ. ಶೈಕ್ಷಣಿಕ ವಿದ್ಯಾರ್ಹತೆ ಇಲ್ಲ, ಕನ್ನಡ ಜ್ಞಾನ, 1 ವರ್ಷ ಅನುಭವ ಕಡ್ಡಾಯ. ಅರ್ಜಿ ಶುಲ್ಕವಿಲ್ಲ. ಕೊನೆಯ ದಿನಾಂಕ: 21-08-2026.
ಬೆಂಗಳೂರು: ಸರ್ಕಾರಿ (Govt) ವಲಯದಲ್ಲಿ ಉದ್ಯೋಗ (Job) ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಜಿಲ್ಲಾಧಿಕಾರಿಗಳ (DC) ಕಾರ್ಯಾಲಯದ ವತಿಯಿಂದ ಅತ್ಯುತ್ತಮ ಸುದ್ದಿಯೊಂದು ಹೊರಬಂದಿದೆ. ಬೆಂಗಳೂರು (Bengaluru) ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 142 ಯುಜಿಡಿ ಹೆಲ್ಪರ್ಸ್ ಮತ್ತು ಕ್ಲೀನರ್ಸ್ ನೇರಪಾವತಿ ಹುದ್ದೆಗಳ (Jobs) ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ಅಧಿಕೃತ ಶೈಕ್ಷಣಿಕ ವಿದ್ಯಾರ್ಹತೆ ಇಲ್ಲದವರಿಗೂ ಇದು ಸ್ಥಿರವಾದ ಉದ್ಯೋಗ ಅವಕಾಶವನ್ನು ಒದಗಿಸಲಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮಾದನಾಯಕನಹಳ್ಳಿ ಮತ್ತು ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಈ ಹುದ್ದೆಗಳು ಖಾಲಿ ಇವೆ.
ಮಾದನಾಯಕನಹಳ್ಳಿ ನಗರಸಭೆ: 62 ಹುದ್ದೆಗಳು
ಹೆಬ್ಬಗೋಡಿ ನಗರಸಭೆ: 80 ಹುದ್ದೆಗಳು
ಅಭ್ಯರ್ಥಿಗಳು ಮಾದನಾಯಕನಹಳ್ಳಿ ಅಥವಾ ಹೆಬ್ಬಗೋಡಿ ನಗರಸಭೆ ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಗುರುತಿನ ಚೀಟಿ ಹಾಗೂ ಅನುಭವ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-08-2026 ಆಗಿರುತ್ತದೆ.
Bangalore [Bangalore],Bangalore,Karnataka














