Jayam Ravi: ‘ನಾನು ಬದುಕಿರುವವರೆಗೂ ಅದು ಸಾಧ್ಯವಿಲ್ಲ’ ! ನಟ ಜಯಂ ರವಿ ಭಾವನಾತ್ಮಕ ಪೋಸ್ಟ್ | | ACTPnews

ನಟ ರವಿ ಮೋಹನ್


Last Updated:

ಸ್ನೇಹಿತರ ದಿನದಂದು ನಟ ರವಿ ಮೋಹನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ನಟ ರವಿ ಮೋಹನ್
ನಟ ರವಿ ಮೋಹನ್

ತಮಿಳು ಚಿತ್ರರಂಗದ ಜನಪ್ರಿಯ ನಟ ರವಿ ಮೋಹನ್ (Actor Ravi Mohan) ಅವರ ವೈಯಕ್ತಿಕ ಜೀವನ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಸುದ್ದಿಯಲ್ಲಿದೆ. ಪತ್ನಿ ಆರತಿ (Aarti) ಅವರೊಂದಿಗೆ ನಡೆಯುತ್ತಿರುವ ವಿಚ್ಛೇದನ ಪ್ರಕರಣದ (Divorce Case) ನಡುವೆಯೇ, ಸ್ನೇಹಿತರ ದಿನದಂದು ನಟ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ವಿಚ್ಛೇದನ ಪ್ರಕರಣದ ನಡುವೆ ವೈರಲ್ ಆದ ಪೋಸ್ಟ್

ರವಿ ಮೋಹನ್ ಹಾಗೂ ಪತ್ನಿ ಆರತಿ ನಡುವಿನ ಭಿನ್ನಾಭಿಪ್ರಾಯಗಳು ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕ ಚರ್ಚೆಯ ವಿಷಯವಾಗಿವೆ. ಇಬ್ಬರೂ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ.

ಈ ಬೆಳವಣಿಗೆಗಳ ನಡುವೆಯೇ ಸ್ನೇಹಿತರ ದಿನದಂದು ನಟ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ನಿಜವಾದ ಸ್ನೇಹಿತರಿಗೆ ಧನ್ಯವಾದ

ರವಿ ಮೋಹನ್ ತಮ್ಮ ಪೋಸ್ಟ್‌ನಲ್ಲಿ, ಕಷ್ಟದ ಸಮಯದಲ್ಲಿ ತಮ್ಮ ಜೊತೆಯಾಗಿ ನಿಂತ ನಿಜವಾದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.

ಜೀವನದ ಸಂಕಷ್ಟದ ಕ್ಷಣಗಳಲ್ಲಿ ತಮ್ಮನ್ನು ಬೆಂಬಲಿಸಿದವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ತಾವು ಜೀವಂತವಾಗಿರುವವರೆಗೆ ಕೆಲವೊಂದು ಸಂಗತಿಗಳು ಎಂದಿಗೂ ನಡೆಯುವುದಿಲ್ಲ ಎಂಬ ರೀತಿಯ ಹೇಳಿಕೆಯನ್ನು ಕೂಡ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರವಿ ಮೋಹನ್, ಕೆಲವರು ನ್ಯಾಯಾಲಯದ ತಿರಸ್ಕಾರಕ್ಕೆ ಕಾರಣವಾಗುವ ರೀತಿಯ ನಡೆಗಳನ್ನು ಮುಂದುವರಿಸುತ್ತಿರುವುದು ವಿಷಾದಕರ ಎಂದು ಬರೆದಿದ್ದಾರೆ.

ಆ ಪೋಸ್ಟ್ ಅನ್ನು ಕೆಲವರು ರವಿ ಮೋಹನ್ ಹಾಗೂ ಗಾಯಕಿ ಕೆನಿಷಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾಡಲಾಗಿದೆ ಎಂದು ಊಹಿಸಿದ್ದರು. ಆದರೆ ಆರತಿ ಈ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿರಲಿಲ್ಲ.

ರವಿ ಮೋಹನ್ ಮತ್ತ ಗಾಯಕಿ ಕೆನಿಷಾ ನಡುವಿನ ಆತ್ಮೀಯತೆ ಕುರಿತು ಈ ಹಿಂದೆ ಹಲವು ರೀತಿಯ ಊಹಾಪೋಹಗಳು ಕೇಳಿಬಂದಿತ್ತು. ನಂತರ ಕೆನಿಷಾ ತಮ್ಮದೇ ದಾರಿಯಲ್ಲಿ ಸಾಗಲು ಬಯಸುವುದಾಗಿ ಹೇಳಿರುವ ಸುದ್ದಿಯೂ ಹರಿದಾಡಿತ್ತು.ಈ ಎಲ್ಲಾ ಬೆಳವಣಿಗೆಗಳ ನಡುವೆ ರವಿ ಮೋಹನ್ ಹಂಚಿಕೊಂಡಿರುವ ಈ ಒಂದು ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ಅಧಿಕೃತ ಸ್ಪಷ್ಟನೆ ಇಲ್ಲ

ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್‌ನ್ನು ಆರತಿಗೆ ಪರೋಕ್ಷ ಟಾಂಗ್ ಎಂದು ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೂ, ರವಿ ಮೋಹನ್ ತಮ್ಮ ಸಂದೇಶದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports