Jason Sanjay: ‘ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು’! ಮೊದಲ ಪ್ರೀತಿ ರಹಸ್ಯ ಬಿಚ್ಚಿಟ್ಟ ವಿಜಯ್ ಪುತ್ರ ಜೇಸನ್! | | ACTPnews

News18


Last Updated:

ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ (Jason Sanjay), ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

News18
News18

ಇತ್ತೀಚೆಗಷ್ಟೇ ಬಿಡುಗಡೆಯಾದ ಸಿಗ್ಮಾ (Sigma) ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿರುವ ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ (Jason Sanjay), ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಾಲೇಜು ದಿನಗಳಲ್ಲಿ ತಾವು ಪ್ರೀತಿಸುತ್ತಿದ್ದ ಹುಡುಗಿಯ ಬಗ್ಗೆ ಜೇಸನ್ ಮನಬಿಚ್ಚಿ ಮಾತನಾಡಿದ್ದು, ತಮ್ಮ ಮೊದಲ ಲವ್ ಕೇವಲ ಒಂದೂವರೆ ವರ್ಷಗಳ ಕಾಲ ಮುಂದುವರಿದಿತ್ತು ಎಂದು ಹೇಳಿದ್ದಾರೆ.

ಕಾಲೇಜು ದಿನಗಳಲ್ಲೇ ಮೊದಲ ಪ್ರೀತಿ

ತಮ್ಮ ಬಾಲ್ಯ ಹಾಗೂ ಯೌವನದ ದಿನಗಳ ಬಗ್ಗೆ ಮಾತನಾಡಿರುವ ಜೇಸನ್ ಸಂಜಯ್, ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾರೆ. ಅದು ತಮ್ಮ ಜೀವನದಲ್ಲಿನ ಮೊದಲ ಹಾಗೂ ಏಕೈಕ ಪ್ರೀತಿ ಎಂದು ಹೇಳಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರೂ ಗಾಢವಾದ ಪ್ರೀತಿಯಲ್ಲಿದ್ದರು. ಆದರೆ ಕೆಲವು ಸಮಯದ ಬಳಿಕ ಪರಸ್ಪರ ಒಪ್ಪಿಗೆಯೊಂದಿಗೆ ಆ ಸಂಬಂಧವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾಗಿ ಜೇಸನ್ ತಿಳಿಸಿದ್ದಾರೆ.

ಬ್ರೇಕಪ್ ಬಳಿಕ ಕಾಡಿತ್ತು ಖಾಲಿತನ

ಪ್ರೀತಿ ಸಂಬಂಧ ಅಂತ್ಯಗೊಂಡ ನಂತರದ ದಿನಗಳು ಸುಲಭವಾಗಿರಲಿಲ್ಲ ಎಂದು ಜೇಸನ್ ಹೇಳಿದ್ದಾರೆ. ಬ್ರೇಕಪ್ ಬಳಿಕ ತಮ್ಮಲ್ಲಿ ತೀವ್ರವಾದ ಖಾಲಿತನದ ಭಾವನೆ ಮೂಡಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ತಮ್ಮನ್ನು ತಾವು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದು, ಇದೇ ಅವಧಿಯಲ್ಲಿ ಸಿನಿಮಾ ನಿರ್ದೇಶನದತ್ತ ಹೆಚ್ಚು ಗಮನ ಹರಿಸಲು ಆರಂಭಿಸಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: Darshan Case: ಸ್ಟೋನಿ ಬ್ರೂಕ್ ಪಾರ್ಟಿಯಿಂದ ಪಟ್ಟಣಗೆರೆ ಶೆಡ್ ತನಕ! ರೇಣುಕಾಸ್ವಾಮಿ ಕೇಸ್​ನ ಮಹತ್ವದ ಹಂತ

ಬ್ರೇಕಪ್ ನಂತರದ ಕಷ್ಟದ ಸಮಯದಲ್ಲಿ ಸಂಗೀತ ತಮ್ಮ ಪಾಲಿಗೆ ದೊಡ್ಡ ಆಸರೆಯಾಗಿತ್ತು ಎಂದು ಜೇಸನ್ ಸಂಜಯ್ ಹೇಳಿದ್ದಾರೆ. ವಿಶೇಷವಾಗಿ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ವಿರಹಗೀತೆಗಳನ್ನು ಕೇಳುತ್ತಾ ಏಕಾಂಗಿತನದಿಂದ ಹೊರಬರಲು ಪ್ರಯತ್ನಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ. ಭಾವನಾತ್ಮಕವಾಗಿ ಕಷ್ಟದ ಸಮಯದಲ್ಲಿದ್ದಾಗ ಸಂಗೀತ ತಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಸಹಾಯ ಮಾಡಿತ್ತು ಎಂದು ಹೇಳಿದ್ದಾರೆ.

ಬ್ರೇಕಪ್ ನಂತರ ತಾವು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾಗಿ ಜೇಸನ್ ತಿಳಿಸಿದ್ದಾರೆ. ಆ ಸಮಯದಲ್ಲಿ ಹಳೆಯ ನೆನಪುಗಳಿಂದ ಹೊರಬರಲು ಹಾಗೂ ತಮ್ಮ ವೃತ್ತಿಜೀವನದತ್ತ ಗಮನ ಹರಿಸಲು ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿದ್ದಾಗಿ ಹೇಳಿದ್ದಾರೆ. ತಮ್ಮ ವೈಯಕ್ತಿಕ ವಿಚಾರಗಳು ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು ಎಂಬ ಕಾರಣಕ್ಕೂ ಅವರು ಖಾಸಗಿ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು.

ಇದನ್ನೂ ಓದಿ: Dhruva Sarja: ಮಾಸ್​​ ಅಲ್ಲ ನಭಾ ನಟೇಶ್ ಜೊತೆ ಭಾವಲೋಕದ ಪ್ರಯಾಣಕ್ಕೆ ರೆಡಿಯಾದ ಧ್ರುವ ಸರ್ಜಾ

ತಮ್ಮಲ್ಲಿದ್ದ ಸ್ವಲ್ಪ ಮಟ್ಟಿನ ಅಹಂಕಾರದಿಂದಾಗಿ ಆ ಯುವತಿಯೊಂದಿಗೆ ಮತ್ತೆ ಮಾತನಾಡಲು ಅಥವಾ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸಲಿಲ್ಲ ಎಂದು ಜೇಸನ್ ಸ್ಪಷ್ಟಪಡಿಸಿದ್ದಾರೆ. ಸಂಬಂಧ ಮುಗಿದ ಬಳಿಕ ಅದನ್ನು ಮತ್ತೆ ಆರಂಭಿಸುವ ಬದಲು ತಮ್ಮ ಜೀವನದಲ್ಲಿ ಮುಂದೆ ಸಾಗಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ. ಜೇಸನ್ ಅವರ ಈ ಮುಕ್ತ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ.

ವೈಯಕ್ತಿಕ ಜೀವನದ ವಿಚಾರಗಳನ್ನು ಹಂಚಿಕೊಂಡಿರುವ ಜೇಸನ್ ಸಂಜಯ್, ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಸಿಗ್ಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ತಮಿಳುನಾಡಿನಾದ್ಯಂತ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಸಂದೀಪ್ ಕಿಶನ್ ನಾಯಕನಾಗಿ ಹಾಗೂ ಪ್ರಿಯಾ ಅಭಿಲ್ಲಾ ನಾಯಕಿಯಾಗಿ ಅಭಿನಯಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed