Rukmini Vasanth: ‘ಪ್ರೇಮದ ಊರಲಿ’ಗೆ ರುಕ್ಮಿಣಿ ವಸಂತ್ ಮೊದಲ ಆಯ್ಕೆ; ಕೊನೆ ಕ್ಷಣದಲ್ಲಿ ಸಿನಿಮಾ ಕೈತಪ್ಪಿದ್ದೇಕೆ? | | ACTPnews

News18


Last Updated:

ಪ್ರೇಮದ ಊರಲಿ ಸಿನಿಮಾದ ಯಶಸ್ಸಿನ ನಡುವೆಯೇ ಚಿತ್ರದ ಕುರಿತ ಮತ್ತೊಂದು ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರುಕ್ಮಿಣಿ ವಸಂತ್ (Rukmini Vasanth) ಅವರನ್ನು ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ನಿರ್ದೇಶಕ ಮನೋಜ್ ಕುಮಾರ್ ಆರಂಭದಲ್ಲೇ ಕಲ್ಪಿಸಿಕೊಂಡಿದ್ದರಂತೆ.

News18
News18

ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸ್ಟಾರ್‌ಗಳ ಸಿನಿಮಾಗಳ ನಡುವೆ ಯಾವುದೇ ಭರ್ಜರಿ ಪ್ರಚಾರವಿಲ್ಲದೆ ಪ್ರೇಮದ ಊರಲಿ (Premada Oorali) ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸೆಪ್ಟೆಂಬರ್ 25ರಂದು ತೆರೆಕಂಡಿರುವ ಈ ಚಿತ್ರ ಆರಂಭದಲ್ಲಿ ಸಾಧಾರಣ ಓಪನಿಂಗ್ ಪಡೆದಿದ್ದರೂ, ಪ್ರೇಕ್ಷಕರ ಮೆಚ್ಚುಗೆ ಹಾಗೂ ಮಾತಿನ ಮೂಲಕ ದಿನದಿಂದ ದಿನಕ್ಕೆ ಚಿತ್ರಮಂದಿರಗಳಲ್ಲಿ ತನ್ನ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಿಡುಗಡೆಯಾದ 10ನೇ ದಿನಕ್ಕೆ ಚಿತ್ರದ ಭಾರತ ನೆಟ್ ಕಲೆಕ್ಷನ್ ಸುಮಾರು 16.96 ಕೋಟಿ ರೂಪಾಯಿ ತಲುಪಿದೆ ಎಂದು ವರದಿಯಾಗಿದೆ. ಸುಮಾರು 2.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಈ ಮಟ್ಟಿಗೆ ಗಳಿಕೆ ಮಾಡಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

ರುಕ್ಮಿಣಿ ವಸಂತ್‌ಗೆಂದು ಬರೆದ ಪಾತ್ರ

ಪ್ರೇಮದ ಊರಲಿ ಸಿನಿಮಾದ ಯಶಸ್ಸಿನ ನಡುವೆಯೇ ಚಿತ್ರದ ಕುರಿತ ಮತ್ತೊಂದು ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ. ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರುಕ್ಮಿಣಿ ವಸಂತ್ (Rukmini Vasanth) ಅವರನ್ನು ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ನಿರ್ದೇಶಕ ಮನೋಜ್ ಕುಮಾರ್ ಆರಂಭದಲ್ಲೇ ಕಲ್ಪಿಸಿಕೊಂಡಿದ್ದರಂತೆ.

ರುಕ್ಮಿಣಿ ವಸಂತ್ ಅಭಿನಯದ ಅಭಿಮಾನಿಯಾಗಿರುವ ಮನೋಜ್ ಕುಮಾರ್, ಕಥೆ ಬರೆಯುವಾಗಲೇ ಅವರನ್ನೇ ಗಮನದಲ್ಲಿಟ್ಟುಕೊಂಡು ಮಹಿಳಾ ಪಾತ್ರವೊಂದನ್ನು ರೂಪಿಸಿದ್ದರಂತೆ. ಬಳಿಕ ಚಿತ್ರತಂಡ ರುಕ್ಮಿಣಿ ಅವರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡಿತ್ತು.

ಆದರೆ ರುಕ್ಮಿಣಿ ಸಿನಿಮಾದಲ್ಲಿ ನಟಿಸದಿದ್ದರೂ, ಅವರ ಹೆಸರು ಮಾತ್ರ ಚಿತ್ರದ ಕಥೆಯೊಳಗೆ ಉಳಿದುಕೊಂಡಿದ್ದು ವಿಶೇಷ.

ಸಿನಿಮಾದಲ್ಲಿದೆ ರುಕ್ಮಿಣಿ-ವಸಂತ ಹೆಸರು

ಪ್ರೇಮದ ಊರಲಿ ಸಿನಿಮಾದಲ್ಲಿ ಎರಡು ಪ್ರಮುಖ ಮಹಿಳಾ ಪಾತ್ರಗಳಿವೆ. ಈ ಪಾತ್ರಗಳಿಗೆ ರುಕ್ಮಿಣಿ ಮತ್ತು ವಸಂತ ಎಂದು ಹೆಸರು ಇಡಲಾಗಿದೆ. ಈ ಎರಡು ಹೆಸರುಗಳನ್ನು ಒಟ್ಟಿಗೆ ಸೇರಿಸಿದರೆ ರುಕ್ಮಿಣಿ ವಸಂತ ಎಂಬ ಹೆಸರು ಬರುತ್ತದೆ.

ಪ್ರೇಮದ ಊರಲ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಉತ್ತಮವಾಗಿ ಮುನ್ನಡೆಯುತ್ತಿದೆ. ಆರಂಭದಲ್ಲಿ ದೊಡ್ಡ ಮಟ್ಟದ ಪ್ರಚಾರವಿಲ್ಲದೆ ತೆರೆಕಂಡ ಸಿನಿಮಾ, ಪ್ರೇಕ್ಷಕರ ಮಾತಿನ ಮೂಲಕವೇ ಹೆಚ್ಚಿನ ಗಮನ ಸೆಳೆಯುತ್ತಿದೆ.

ಚಿತ್ರದ ಕಲೆಕ್ಷನ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ರುಕ್ಮಿಣಿ ವಸಂತ್ ಸಿನಿಮಾದಲ್ಲಿ ನಟಿಸದಿದ್ದರೂ, ಅವರ ಹೆಸರಿನೊಂದಿಗೆ ಬೆಸೆದುಕೊಂಡಿರುವ ಈ ಕುತೂಹಲಕಾರಿ ಸಂಗತಿ ಇದೀಗ ಚಿತ್ರದ ಕುರಿತ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed