Last Updated:
ಇತ್ತೀಚೆಗೆ ಭಾರತ ತಂಡ ಏಷ್ಯನ್ ಗೇಮ್ಸ್ 2026ರಲ್ಲಿ ಚಿನ್ನದ ಪದಕ ಗೆದ್ದಿರುವುದರಿಂದ ತಂಡದ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ವೆಸ್ಟ್ ಇಂಡೀಸ್ ಅನ್ನು T20 ಸ್ವರೂಪದಲ್ಲಿ ಬಲಿಷ್ಠ ತಂಡವೆಂದು ಪರಿಗಣಿಸಲಾಗಿರುವುದರಿಂದ ಈ ಸರಣಿಯು ಶ್ರೇಯಸ್ ಅಯ್ಯರ್ ಅವರ ನಾಯಕತ್ವಕ್ಕೂ ಪ್ರಮುಖ ಪರೀಕ್ಷೆಯಾಗಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ T20 ಸರಣಿ ಮಂಗಳವಾರದಿಂದ ಆರಂಭವಾಗುತ್ತಿದೆ. ಲಖನೌದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ 2-1 ಅಂತರದಿಂದ ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯನ್ನುಗೆದ್ದುಕೊಂಡಿದ್ದು, ಇದೀಗ ಟಿ20 ಸರಣಿಯಲ್ಲೂ ಅದೇ ಪ್ರದರ್ಶನ ತೋರಿ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದೆ.
ಇತ್ತೀಚೆಗೆ ಭಾರತ ತಂಡ ಏಷ್ಯನ್ ಗೇಮ್ಸ್ 2026ರಲ್ಲಿ ಚಿನ್ನದ ಪದಕ ಗೆದ್ದಿರುವುದರಿಂದ ತಂಡದ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ವೆಸ್ಟ್ ಇಂಡೀಸ್ ಅನ್ನು T20 ಸ್ವರೂಪದಲ್ಲಿ ಬಲಿಷ್ಠ ತಂಡವೆಂದು ಪರಿಗಣಿಸಲಾಗಿರುವುದರಿಂದ ಈ ಸರಣಿಯು ಶ್ರೇಯಸ್ ಅಯ್ಯರ್ ಅವರ ನಾಯಕತ್ವಕ್ಕೂ ಪ್ರಮುಖ ಪರೀಕ್ಷೆಯಾಗಲಿದೆ. ಅಯ್ಯರ್ ನಾಯಕತ್ವದಲ್ಲಿ, ಭಾರತವು ಇಲ್ಲಿಯವರೆಗೆ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ವಿರುದ್ಧ T20I ಸರಣಿಯನ್ನು ಗೆದ್ದಿದ್ದರೆ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವೈಟ್ ವಾಷ್ ಮುಖಭಂಗ ಅನುಭವಿಸಿದ್ದಾರೆ. ಆದರೆ ಮೊದಲೆರಡು ಸರಣಿಗಳ ಸೋಲಿನ ಬಳಿಕ ಅಯ್ಯರ್ ನೇತೃತ್ವದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ.
ಕುಲ್ದೀಪ್ ಸೇರಿ ಮೂವರ ಕಮ್ಬ್ಯಾಕ್
ಏಷ್ಯನ್ ಗೇಮ್ಸ್ಗೆ ಹೋಲಿಸಿದರೆ ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹೊರಗುಳಿದ್ದಾರೆ. ಪಾಕ್ ವಿರುದ್ಧದ ಫೈನಲ್ನಲ್ಲಿ ಹೊರಗುಳಿದಿದ್ದ ಅರ್ಷದೀಪ್ ಸಿಂಗ್, ಏಕದಿನ ಸರಣಿ ಮುಗಿಸಿಕೊಂಡು ಬಂದಿರುವ ಕುಲ್ದೀಪ್ ಯಾದವ್, ಗಾಯದಿಂದ ಚೇತರಿಸಿಕೊಂಡಿರುವ ಮಯಾಂಕ್ ಯಾದವ್ ತಂಡಕ್ಕೆ ಮರಳಿದ್ದಾರೆ. ವೈಭವ್ ಜೊತೆಗೆ ರವಿ ಬಿಷ್ಣೋಯ್ ಕೂಡ ಮೊದಲ ಪಂದ್ಯದಿಂದ ಡ್ರಾಪ್ ಆಗಿದ್ದಾರೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಶಾಯ್ ಹೋಪ್ (ವಿಕೆಟ್ ಕೀಪರ್/ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೋ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ರೋಸ್ಟನ್ ಚೇಸ್, ಅಕೀಲ್ ಹೊಸೈನ್, ಶಮರ್ ಸ್ಪ್ರಿಂಗರ್, ಶಮರ್ ಜೋಸೆಫ್.
ಭಾರತ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಕುಲದೀಪ್ ಯಾದವ್, ಮಯಾಂಕ್ ಯಾದವ್.














