Last Updated:
ಪಿಸಿಬಿಯು 14 ಏಕದಿನಗಳು ಮತ್ತು ಆರು ಟಿ20ಐಗಳು ಸೇರಿದಂತೆ ಒಟ್ಟು 25 ಪಂದ್ಯಗಳನ್ನು ಒಳಗೊಂಡ ಪ್ರಸಾರ ಹಕ್ಕುಗಳ ಹರಾಜಿಗಾಗಿ 600 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳ (60 ಕೋಟಿ ಪಿಕೆಆರ್) ಕನಿಷ್ಠ ಮೂಲ ಬೆಲೆಯನ್ನು (Reserve Price) ನಿಗದಿಪಡಿಸಿ ಟೆಂಡರ್ ಕರದಿತ್ತು. ಆದರೆ ಕೇವಲ ಒಂದೇ ಮೀಡಿಯಾ ಸಂಸ್ಥೆ ಹರಾಜಿನಲ್ಲಿ ಪಾಲ್ಗೊಂಡು ಕೇವಲ 350 ಮಿಲಿಯನ್ ಪಾಕಿಸ್ತಾನ ರೂಪಾಯಿಗೆ ಖರೀದಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮೀಡಿಯಾ ಹಕ್ಕುಗಳ ಮಾರಾಟದಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ತನ್ನ ತವರಿನಲ್ಲಿ ನಡೆಯಲಿರುವ 25 ಅಂತರರಾಷ್ಟ್ರೀಯ ಪಂದ್ಯಗಳ ಪ್ರಸಾರ ಹಕ್ಕುಗಳಿಗಾಗಿ (Broadcasting Rights) ತಾನು ನಿಗದಿಪಡಿಸಿದ್ದ ಮೂಲ ಬೆಲೆಗಿಂತ ಅತ್ಯಂತ ಕಡಿಮೆ ಮೊತ್ತದ ಬಿಡ್ಕಿಂತ ಕೇವಲ ಅರ್ಧದಷ್ಟನ್ನ ಮಾತ್ರ ಪಡೆದು ಆಘಾತ ಅನುಭವಿಸಿದೆ. ಪಿಸಿಬಿ ಕರೆದಿದ್ದ ಬಿಡ್ಡಿಗ್ ಕರೆದಿದ್ದ ನೇರಪ್ರಸಾರದ ಹಕ್ಕುಗಳನ್ನ ಖರೀದಿಸಲು ಪಾಕಿಸ್ತಾನ ಟೆಲಿವಿಷನ್ (PTV) ಮಾತ್ರ ಏಕೈಕ ಬಿಡ್ದಾರನಾಗಿ ಮುಂದೆ ಬಂದಿದ್ದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಪಿಸಿಬಿಯು 14 ಏಕದಿನಗಳು ಮತ್ತು ಆರು ಟಿ20ಐಗಳು ಸೇರಿದಂತೆ ಒಟ್ಟು 25 ಪಂದ್ಯಗಳನ್ನು ಒಳಗೊಂಡ ಪ್ರಸಾರ ಹಕ್ಕುಗಳ ಹರಾಜಿಗಾಗಿ 600 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳ (60 ಕೋಟಿ ಪಿಕೆಆರ್) ಕನಿಷ್ಠ ಮೂಲ ಬೆಲೆಯನ್ನು (Reserve Price) ನಿಗದಿಪಡಿಸಿ ಟೆಂಡರ್ ಕರದಿತ್ತು. ಆದರೆ, ಈ ಹಿಂದಿನ ಹರಾಜು ಪ್ರಕ್ರಿಯೆಗಳಿಗಿಂತ ಭಿನ್ನವಾಗಿ, ಈ ಬಾರಿ ಆಸಕ್ತ ಪ್ರಸಾರಕರು ಒಟ್ಟಾಗಿ ಮೈತ್ರಿಕೂಟಗಳನ್ನು (Consortiums) ರಚಿಸಿಕೊಂಡು ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಕ್ರಿಕೆಟ್ ಮಂಡಳಿಯು ಅನುಮತಿ ನೀಡಿರಲಿಲ್ಲ. ಈ ನಿರ್ಧಾರದಿಂದಾಗಿ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇಲ್ಲದೆ, ಪಿಸಿಬಿ ತಾನು ಅಂದುಕೊಂಡಿದ್ದಕ್ಕಿಂತ ಭಾರಿ ಕಡಿಮೆ ಮೊತ್ತಕ್ಕೆ ಅಂದರೆ 35 ಕೋಟಿ ಪಾಕಿಸ್ತಾನ ರೂಪಾಯಿಗನ್ನ ಮಾತ್ರ ಪಡೆದುಕೊಂಡಿದೆ.
ಈ ಪ್ರಸಾರ ಹಕ್ಕುಗಳಲ್ಲಿ ಪಾಕಿಸ್ತಾನದ ಹಲವಾರು ತವರು ಸರಣಿಗಳು ಸೇರಿವೆ. ಈ ತಿಂಗಳು, ಶ್ರೀಲಂಕಾ ವಿರುದ್ಧ ಮೂರು ಟಿ20ಐಗಳು ನಡೆಯಲಿವೆ. ನಂತರ ಇಂಗ್ಲೆಂಡ್ ವಿರುದ್ಧ ಏಳು ಪಂದ್ಯಗಳ ತ್ರಿಕೋನ ಸರಣಿ, ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು, ಐರ್ಲೆಂಡ್ ವಿರುದ್ಧದ ಮೂರು T20Iಗಳು ಮತ್ತು 2027 ರ ಜನವರಿಯಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ಜೊತೆ ಏಳು ಪಂದ್ಯಗಳ ತ್ರಿಕೋನ ಸರಣಿಯನ್ನು ಸಹ ಒಳಗೊಂಡಿದೆ. ಆದರೆ, ಜಿಂಬಾಬ್ವೆ ಈಗಾಗಲೇ ತಮ್ಮ ಕ್ರಿಕೆಟ್ ಮಂಡಳಿಯೊಂದಿಗಿನ ಆಂತರಿಕ ಸಮಸ್ಯೆಗಳಿಂದಾಗಿ ಪಾಕಿಸ್ತಾನ ಪ್ರವಾಸ ಮಾಡುವುದು ಕಷ್ಟಕರ ಎಂದು ಹೇಳಿದೆ ಎಂದು ವರದಿಯಾಗಿದೆ.
ಪಿಸಿಬಿಗೆ ಪ್ರಸಾರ ಹಕ್ಕುಗಳನ್ನು ಈ ಹಿಂದೆ ಪಡೆದಿದ್ದ ಕನಿಷ್ಠ ಮೂರು ಪ್ರಸಾರಕರು ಇನ್ನೂ ಬಾಕಿ ಪಾವತಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಈ ಹಿಂದೆ ಒಕ್ಕೂಟವಾಗಿ ಹಕ್ಕುಗಳನ್ನು ಪಡೆದಿದ್ದ ಕಂಪನಿಗಳು ಸೇರಿವೆ. ಬಾಕಿ ಹೊಂದಿರುವ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸದಿದ್ದರೂ, ಅವರು ಈ ಬಾರಿ ಬಿಡ್ಡಿಂಗ್‌ನಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ರಾಷ್ಟ್ರೀಯ ತಂಡಗಳ ಇತ್ತೀಚಿನ ಪ್ರದರ್ಶನಗಳು ನಿರೀಕ್ಷೆಗಳನ್ನು ಪೂರೈಸಿಲ್ಲ, ಇದು ಪ್ರಾಯೋಜಕರು ಮತ್ತು ಜಾಹೀರಾತುದಾರರಿಂದ ಆಸಕ್ತಿ ಕಡಿಮೆಯಾಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಸೂಪರ್ ಲೀಗ್‌ನ 11ನೇ ಸೀಸನ್‌ನ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಪಿಸಿಬಿಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಕಳೆದ ಸೀಸನ್‌ನ ಪ್ರಸಾರ ಹಕ್ಕುಗಳನ್ನು ಗೆದ್ದ ಪ್ರಸಾರಕರೊಬ್ಬರು ಇನ್ನೂ ಕೋಟ್ಯಂತರ ರೂಪಾಯಿ ಬಾಕಿ ಪಾವತಿಸಬೇಕಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಇಡೀ 25 ಅಂತರರಾಷ್ಟ್ರೀಯ ಪಂದ್ಯಗಳ ಪ್ರಸಾರ ಹಕ್ಕು ಒಟ್ಟಾಗಿ ಕೇವಲ ₹35 ಕೋಟಿ ಪಾಕಿಸ್ತಾನಿ ರೂಪಾಯಿಗೆ (PKR 350 Million) ಮಾರಾಟವಾಗಿದೆ. ಇದನ್ನು ಭಾರತೀಯ ರೂಪಾಯಿಗೆ (INR) ಪರಿವರ್ತಿಸಿದರೆ ಸರಿಸುಮಾರು ₹10.5 ಕೋಟಿ ರೂ. ಆಗುತ್ತದೆ. ಆದರೆ ಭಾರತದಲ್ಲಿ ಬಿಸಿಸಿಐ ಪ್ರಸ್ತುತ (2023-2028ರ ಸೈಕಲ್) ತನ್ನ ದೇಶದಲ್ಲಿ ನಡೆಯುವ ಪ್ರತಿ ಒಂದು ಪಂದ್ಯಕ್ಕೆ ಸರಾಸರಿ ₹67.75 ಕೋಟಿ ಭಾರತೀಯ ರೂಪಾಯಿ (INR) ಆದಾಯವನ್ನು ಪಡೆಯುತ್ತಿದೆ.














