Last Updated:
ಜನನಾಯಗನ್ ಚಿತ್ರ ಲೀಕ್ ಆಯಿತು. ಇನ್ನು ಚಿತ್ರದ ಕತೆ ಮುಗಿತು ಅಂತ ಇಡೀ ತಂಡ ಅಂದುಕೊಂಡಿತ್ತು. ನಿರ್ಮಾಪಕರು ಬೇಸರದಲ್ಲಿಯೇ ಇದ್ದರು. ಹೀಗೆ ಜನನಾಯಗನ್ ಲೀಕ್ ಸಮಯದ ಕತೆಯನ್ನ ಯಶ್ ಈಗ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಜನನಾಯಗನ್ ಸಿನಿಮಾ (Jana Nayagan Movie) ರಿಲೀಸ್ ಆಗಿದೆ. ಹಿಟ್ ಆಗಿದೆ. ಈ ಚಿತ್ರ ಆದ್ಮೇಲೆ ನಾಯಕ ನಟ ವಿಜಯ್ ಸಿ.ಎಂ.ಆಗಿರೋದು ಇದೆ. ಆದರೆ, ಈ ಚಿತ್ರ ರಿಲೀಸ್ ಆಗುವ ಸಮಯದಲ್ಲಿ ಚಿತ್ರ ಲೀಕ್ ಆಗಿತ್ತು. ಇದರಿಂದ ಇಡೀ ಟೀಮ್ ಅದೆಷ್ಟು ಬೇಸರದಲ್ಲಿತ್ತು. ಚಿತ್ರದ ನಿರ್ಮಾಪಕ ವೆಂಕಟ್ ಕೆ.ನಾರಾಯಣ (Venkat K. Narayana) ಅದೆಷ್ಟು ನೋವುಪಟ್ಟರು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ, ರಾಕಿಂಗ್ ಸ್ಟಾರ್ ಯಶ್ (Yash) ಆ ಪೇನ್ ಬಗ್ಗೆ ಹೇಳಿಕೊಂಡಿದ್ದಾರೆ. ಚೆನ್ನೈಯಲ್ಲಿ ನಡೆದ ಟಾಕ್ಸಿಕ್ (Toxic) ಪ್ರೀ-ರಿಲೀಸ್ ಇವೆಂಟ್ ಅಲ್ಲಿಯೇ ಯಶ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ತಮಿಳುನಾಡಿನ ಜನರ ಕುರಿತು ಕೂಡ ಹೇಳಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.














