ಹುಟ್ಟಿದಾಗ
ಬೆಳೆದಾಗ
ಬಾಳಿದಾಗ
ಮಾಗಿದಾಗ
ಹೋಗುವಾಗ
ಅಣ್ಣತಮ್ಮರಾಗೆ ಹೆಜ್ಜೆಹಾಕಬೇಕು
ಆಗ ಹೆತ್ತ ಅಮ್ಮನ ಒಡಲಿಗೆ ಸಾರ್ಥಕಭಾವ…
ಮನೆ ಮನಸ್ಸು ನಂದಗೋಕುಲ
(ಚಿತ್ರ ಕೃಪೆ: ಜಗ್ಗೇಶ್ ಇನ್‌ಸ್ಟಾಗ್ರಾಮ್)
ಹಣ ಆಸ್ತಿ ಮೇಲು ಕೀಳು ನಡುವೆ ನುಸಿಳಿದರೆ
ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ..!!
ವಿರುದ್ಧ ದಿಕ್ಕಿನ ಮನಗಳ ಪರಿವಾರ ಬೆಳೆಯಿಲ್ಲದ ಪಾಳುಹೊಲ..!!
ಪ್ರೀತಿಸಿ ಬಾಳುವ ಅಣ್ಣತಮ್ಮಂದಿರು
ಅಮ್ಮನ ಮಹತ್ವ ಎಷ್ಟು ಅನ್ನೋದನ್ನು ಪ್ರತಿ ಸಾಲಿನಲ್ಲೂ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಣ್ಣತಮ್ಮಂದಿರಾಗಿಯೇ ಹೆಜ್ಜೆ ಹಾಕಬೇಕು. ಹೆತ್ತ ಅಮ್ಮನ ಒಡಲಿಗೆ ಸಾರ್ಥಕಭಾವ..ಒಂದು ವೇಳೆ ಹಣ ಆಸ್ತಿ ಮೇಲು ಕೀಳು ನಡುವೆ ನುಸಿಳಿದರೆ, ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ ಅಂತಲೂ ಹೇಳಿದ್ದಾರೆ.
ಸಹೋದರರು ಒಂದಾಗಿಯೇ ಬಾಳಬೇಕು, ಆಗಲೇ ಮನೆ ಮತ್ತು ಮನಸ್ಸು ನಂದಗೋಕಲ ಆಗುತ್ತವೆ. ಒಂದು ವಿರುದ್ಧ ದಿಕ್ಕಿನಲ್ಲಿ ನಡೆದರೆ ಮುಗಿತು. ಪರಿವಾರ ಬೆಳೆಯಿಲ್ಲದ ಪಾಳುಹೊಲ ಅಂತಲೂ ಹೇಳ್ತಾರೆ.
ಇದನ್ನ ಈಗ ಬರೆದಿರೋದು(ಚಿತ್ರ ಕೃಪೆ: ಜಗ್ಗೇಶ್ ಇನ್‌ಸ್ಟಾಗ್ರಾಮ್) ಯಾಕೆ
ಅಣ್ಣತಮ್ಮಂದಿರು ಒಂದಾಗಿಯೇ ಇರಬೇಕು, ಹುಟ್ಟಿದಾಗ ಬೆಳೆದಾಗ ಬಾಳಿದಾಗ ಮಾಗಿದಾಗ ಹೋಗುವಾಗ ಅಣ್ಣತಮ್ಮರಾಗೆ ಹೆಜ್ಜೆಹಾಕಬೇಕು ಅನ್ನೋದನ್ನು ಜಗ್ಗೇಶ್ ಇಲ್ಲಿ ಹೇಳಿಕೊಂಡಿದ್ದಾರೆ.
ಜಗ್ಗೇಶ್ ಅವರು ಒಳ್ಳೆ ವಿಚಾರಗಳನ್ನೆ ಹೇಳ್ತಾ ಇರ್ತಾರೆ. ಈಗ ಹೇಳಿರೋ ಈ ಮಾತುಗಳಿಗೂ ಒಳ್ಳೆ ಅಭಿಪ್ರಾಯಗಳೇ ಬಂದಿವೆ. ಇನ್‌ಸ್ಟಾಗ್ರಾಮ್‌ನ ಕಾಮೆಂಟ್ ಬಾಕ್ಸ್ ಅಲ್ಲಿ ಸಾಲು ಸಾಲು ಒಳ್ಳೆ ಮಾತುಗಳನ್ನೆ ಅಭಿಮಾನಿಗಳು ಬರೆದಿದ್ದಾರೆ.
ಅಣ್ಣ, ನಿಮ್ಮ ಬರವಣಿಗೆ ಅದ್ಭುತವಾಗಿದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಅಂತಲೂ ಅದ್ಯಾರೋ ಬರೆದಿದ್ದಾರೆ. ಅದ್ಭುತ ಸಹೋದರರು, ಒಂದು ಜಗಳವಿಲ್ಲದೆ, ಗಾಸಿಪ್ ಇಲ್ಲದ ಅಣ್ಣ ತಮ್ಮ ನೀವು. ಜಗ್ಗೇಶ್ ಸರ್ ಕೋಮಲ್ ಅಣ್ಣ, ನೀವು ಅಪ್ಪು ಸರ್ ಡಾ.ಶಿವಣ್ಣ ಅವರ ತರ ಅಂತಲೂ ಹೋಲಿಕೆ ಮಾಡಿಯೇ ಮತ್ತೊಬ್ಬರು ಬರೆದಿದ್ದಾರೆ.
ಜಗ್ಗೇಶ್ ಅವರ ಸಹೋದರ ಕೋಮಲ್ ಅವರು ಜೂನ್-4 ರಂದು 53 ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಅವರ ಸಹೋದರ ಕೋಮಲ್ ಅವರಿಗೆ ಶುಭ ಹಾರೈಸಿದ್ದಾರೆ.
“ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ”; ಜಗ್ಗೇಶ್ ಹೀಗೆ ಹೇಳಿದ್ದ್ಯಾಕೆ? (ಚಿತ್ರ ಕೃಪೆ: ಜಗ್ಗೇಶ್ ಇನ್‌ಸ್ಟಾಗ್ರಾಮ್)
ಸದಾ ನಾವು ಒಂದಾಗಿಯೇ ಇರೋಣ, ಕೂಡಿಯೇ ಬಾಳೋಣ ಅಂತಲೇ ಹೇಳಿದ್ದಾರೆ. ತಮ್ಮ ವಿಶೇಷ ಅನುಭವದ ಮಾತುಗಳಿಂದ ಇತರರಿಗೂ ಇಲ್ಲಿ ಬುದ್ಧಿ ಹೇಳಿದ್ದಾರೆ ಅಂತಲೂ ಹೇಳಬಹುದು.
ಕೋಮಲ್ ಕುಮಾರ್ ಅವರು 2025 ರಿಂದ 2026 ವರೆಗಿನ ಲೆಕ್ಕದಲ್ಲಿ ನಾಲ್ಕೈದು ಚಿತ್ರ ಒಪ್ಪಿದ್ದಾರೆ. ಇದರಲ್ಲಿ ಕೋಣ ಸಿನಿಮಾ ಬಂದು ಹೋಗಿದೆ. ತಮಿಳಿನ ರಾಜಪುತಿರನ್ ಚಿತ್ರ ರಿಲೀಸ್ ಆಗಿದೆ.
ರೋಲೆಕ್ಸ್ ಅಂತು ರಿಲೀಸ್ ಹಂತಕ್ಕೆ ಬಂದಿದೆ. ಆದಷ್ಟು ಬೇಗ ರಿಲೀಸ್ ಆಗುತ್ತದೆ ಅಂತ ಚಿತ್ರ ತಂಡವೇ ಹೇಳಿಕೊಂಡಿದೆ. ತೆನಾಲಿ ಡಿಎ ಎಲ್‌ಎಲ್‌ಬಿ ಚಿತ್ರದ ಒಂದು ಹಂತದ ಚಿತ್ರೀಕರಣ ಆಗಿದೆ. ಎರಡನೇ ಹಂತದ ಕೆಲಸ ಇನ್ನೇನು ಶುರು ಆಗುತ್ತದೆ.
ಕೋಮಲ್ ಅವರ ಸಂಗೀತ ಬಾರ್ ಆ್ಯಂಡ್ ರೆಸ್ಟೋರಂಟ್ ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಅಶೋಕವನ ಅನ್ನುವ ಚಿತ್ರದ ಶೂಟಿಂಗೇ ಕಂಪ್ಲೀಟ್ ಆಗಿದೆ ಅಂತ ಮಾಹಿತಿ ಸಿಗುತ್ತದೆ.












