Cricket Rules: ಒಂದಲ್ಲ, ಎರಡಲ್ಲ 10ಕ್ಕಿಂತ ಹೆಚ್ಚು! ಕ್ರಿಕೆಟ್​​​ ಲೋಕದಲ್ಲಿ ಎಷ್ಟು ರೀತಿಯ ನೋ ಬಾಲ್ ​ಗಳಿವೆ ನೋಡಿ | ಕ್ರೀಡಾ ಸುದ್ದಿ | ACTPnews

Cricket Rules: ಒಂದಲ್ಲ, ಎರಡಲ್ಲ 10ಕ್ಕಿಂತ ಹೆಚ್ಚು! ಕ್ರಿಕೆಟ್​​​ ಲೋಕದಲ್ಲಿ ಎಷ್ಟು ರೀತಿಯ ನೋ ಬಾಲ್ ​ಗಳಿವೆ ನೋಡಿ | ಕ್ರೀಡಾ ಸುದ್ದಿ


ಫ್ರಂಟ್ ಫೂಟ್ ನೋ ಬಾಲ್: ಇದು ಕ್ರಿಕೆಟ್ ನಲ್ಲಿ ಅತ್ಯಂತ ಸಾಮಾನ್ಯವಾದ ನೋ ಬಾಲ್. ಬೌಲಿಂಗ್ ಮಾಡುವಾಗ ಬೌಲರ್ ಕ್ರೀಸ್ ಗೆರೆಯನ್ನು ಮೀರಿ ಮುಂದೆ ಹೆಜ್ಜೆ ಹಾಕಿದರೆ, ಅಂಪೈರ್ ಅದನ್ನು ನೋ ಬಾಲ್ ಎಂದು ಕರೆಯುತ್ತಾರೆ.

ಬ್ಯಾಕ್ ಫೂಟ್ ನೋ ಬಾಲ್: ಇದು ಬೌಲರ್ ತನ್ನ ಬ್ಯಾಕ್ ಫೂಟ್ ನಿಂದ ಮಾಡುವ ಫೌಲ್ ಆಗಿದೆ. ಬೌಲಿಂಗ್ ಆಕ್ಷನ್ ಪೂರ್ಣಗೊಳಿಸುವಾಗ ಬೌಲರ್ ನ ಬ್ಯಾಕ್ ಫೂಟ್ ರಿಟರ್ನ್ ಕ್ರೀಸ್ (ಪಿಚ್ ನ ಎರಡೂ ಬದಿಯಲ್ಲಿರುವ ಲಂಬ ರೇಖೆಗಳು) ಅನ್ನು ಸ್ಪರ್ಶಿಸಿದರೆ ಅಥವಾ ದಾಟಿದರೆ, ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ನಿನ್ನೆಯ ಪಂದ್ಯದಲ್ಲಿ ರವಿ ಬಿಷ್ಣೋಯ್ ಇದೇ ನೋ ಬಾಲ್ ಮಾಡಿ ಸೋಲಿಗೆ ಕಾರಣರಾದರು.

ಬೀಮರ್ ಅಥವಾ ಫುಲ್ ಟಾಸ್ ನೋ ಬಾಲ್: ಬೌಲರ್ ಎಸೆದ ಚೆಂಡು ಪಿಚ್ ಮೇಲೆ ಬೀಳದೆ, ಬ್ಯಾಟರ್ ನ ಸೊಂಟದ ಎತ್ತರಕ್ಕಿಂತ ನೇರವಾಗಿ ಮೇಲೆ ಬಂದರೆ, ಅಂಪೈರ್ ಅದನ್ನು ‘ಬೀಮರ್’ ಅಥವಾ ನೋ ಬಾಲ್ ಎಂದು ಘೋಷಿಸುತ್ತಾರೆ. ಇದು ಬ್ಯಾಟರ್ ಗಳಿಗೆ ಅಪಾಯಕಾರಿಯಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಫೀಲ್ಡಿಂಗ್ ನಿರ್ಬಂಧಗಳ ಉಲ್ಲಂಘನೆ: ODI ಮತ್ತು T20 ಪಂದ್ಯಗಳಲ್ಲಿ, ಪವರ್‌ಪ್ಲೇ ನಿಯಮಗಳ ಪ್ರಕಾರ ನಿರ್ದಿಷ್ಟ ಸಂಖ್ಯೆಯ ಫೀಲ್ಡರ್‌ಗಳು ಮೂವತ್ತು-ಗಜ ವೃತ್ತದ ಹೊರಗೆ ಇದ್ದರೆ ಅಂಪೈರ್ ನೋ ಬಾಲ್ ನೀಡುತ್ತಾರೆ. ಅಲ್ಲದೆ, ಲೆಗ್ ಸೈಡ್ (ಆನ್ ಸೈಡ್) ವಿಕೆಟ್ ಹಿಂದೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್‌ಗಳು ಇರಬಾರದು, ಇಲ್ಲದಿದ್ದರೆ ಅದು ನೋ ಬಾಲ್ ಆಗಿರುತ್ತದೆ.

ವಿಕೆಟ್ ಕೀಪರ್ ನಿಯಮ ಉಲ್ಲಂಘನೆ (Wicket-Keeper Fault): ಬೌಲರ್ ಕೈಯಿಂದ ಚೆಂಡು ಬಿಡುಗಡೆಯಾಗುವ ಮೊದಲು ವಿಕೆಟ್ ಕೀಪರ್ ತನ್ನ ಕೈಗವಸುಗಳು ಅಥವಾ ದೇಹದ ಭಾಗಗಳನ್ನು ಸ್ಟಂಪ್​​ಗಳ ಮುಂದೆ ತಂದರೆ, ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ಬ್ಯಾಟರ್ ಅಥವಾ ವಿಕೆಟ್ ಗಳನ್ನು ದಾಟಿದ ನಂತರವೇ ಕೀಪರ್ ಚೆಂಡನ್ನು ಸ್ವೀಕರಿಸಬೇಕು.

ಬೌನ್ಸ್ ನೋ ಬಾಲ್ (Bounce No Ball): ಚೆಂಡು ಪಿಚ್ ಮೇಲೆ ಪುಟಿದ ನಂತರ ಬ್ಯಾಟರ್ ನಿಂತಿರುವ ಸ್ಥಾನದಲ್ಲಿ ಅವರ ತಲೆಯ ಮೇಲಿಂದ (Above head height) ಹೋದರೆ ಅದನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ.

ಕೆಲವು ಅಪರೂಪದ ನೋ ಬಾಲ್‌ಗಳು

ಡಬಲ್ ಬೌನ್ಸ್ ನೋ ಬಾಲ್ (Multi-Pitch / Double Bounce No Ball) : ಬೌಲರ್ ಎಸೆದ ಚೆಂಡು ಬ್ಯಾಟರ್ ತಲುಪುವ ಮೊದಲು ಪಿಚ್ ಮೇಲೆ ಎರಡು ಬಾರಿಗಿಂತ ಹೆಚ್ಚು ಬಾರಿ ಬೌನ್ಸ್ ಆಗಿದ್ದರೆ ಅಥವಾ ಪಿಚ್ ಮೇಲೆ ಉರುಳಿದರೆ ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ.

ಆಫ್-ದಿ-ಪಿಚ್ ಬಾಲ್: ಬೌಲರ್ ಎಸೆದ ಚೆಂಡು ಸಂಪೂರ್ಣವಾಗಿ ಪಿಚ್ ನಿಂದ ಹೊರ ಬಿದ್ದರೆ, ಅದನ್ನು ನೋ ಬಾಲ್ ಎಂದು ಘೋಷಿಸಲಾಗುತ್ತದೆ.

ಸ್ಟಂಪ್ ಬೀಳಿಸಿದರೂ ನೋಬಾಲ್ : ಚೆಂಡನ್ನು ಎಸೆಯುವಾಗ ಬೌಲರ್‌ನ ದೇಹ ಅಥವಾ ಕಾಲು ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಸ್ಟಂಪ್​​ಗಳನ್ನ ಬೀಳಿಸಿದರೆ ನೋ ಬಾಲ್ ಕೊಡಲಾಗುತ್ತದೆ. ಮೊದಲು ಇದು ಡೆಡ್ ಬಾಲ್ ಆಗಿರುತ್ತಿತ್ತು, ಈಗ ಅದನ್ನು ನೋ ಬಾಲ್ ಆಗಿ ಬದಲಾಯಿಸಲಾಗಿದೆ .

ಚಕ್ಕಿಂಗ್ ನೋ ಬಾಲ್: ಬೌಲರ್ ಚೆಂಡನ್ನು ಎಸೆಯುವಾಗ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ಬಾಗಿಸಿದರೆ (ಚಕ್ಕಿಂಗ್), ಅಂಪೈರ್ ಅದನ್ನು ನೋ ಬಾಲ್ ಎಂದು ಘೋಷಿಸುತ್ತಾರೆ.

ತಪ್ಪು ಸೈಡ್‌ನಿಂದ ಬೌಲಿಂಗ್ ಮಾಡುವುದು: ಬೌಲರ್ ತಾನು ಯಾವ ಕಡೆಯಿಂದ (Over the wicket ಅಥವಾ Round the wicket) ಬೌಲಿಂಗ್ ಮಾಡುತ್ತೇನೆ ಎಂದು ಅಂಪೈರ್‌ಗೆ ಮೊದಲೇ ತಿಳಿಸಬೇಕು. ಹಾಗೆ ತಿಳಿಸದೆ ಅಥವಾ ಹೇಳಿದ್ದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದರೆ ಅದು ನೋ ಬಾಲ್ ಆಗುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports