Jaggesh: ‘ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ’; ಜಗ್ಗೇಶ್ ಹೀಗೆ ಹೇಳಿದ್ಯಾಕೆ? | | ACTPnews

jaggesh emotional words about mother and brother on social media


ಅಮ್ಮನ ಮಹತ್ವ ಸಾರುವ ಸಾಲುಗಳು

ಹುಟ್ಟಿದಾಗ

ಬೆಳೆದಾಗ

ಬಾಳಿದಾಗ

ಮಾಗಿದಾಗ

ಹೋಗುವಾಗ

ಅಣ್ಣತಮ್ಮರಾಗೆ ಹೆಜ್ಜೆಹಾಕಬೇಕು

ಆಗ ಹೆತ್ತ ಅಮ್ಮನ ಒಡಲಿಗೆ ಸಾರ್ಥಕಭಾವ…

ಮನೆ ಮನಸ್ಸು ನಂದಗೋಕುಲ

(ಚಿತ್ರ ಕೃಪೆ: ಜಗ್ಗೇಶ್ ಇನ್‌ಸ್ಟಾಗ್ರಾಮ್)

ಹಣ ಆಸ್ತಿ ಮೇಲು ಕೀಳು ನಡುವೆ ನುಸಿಳಿದರೆ

ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ..!!

ವಿರುದ್ಧ ದಿಕ್ಕಿನ ಮನಗಳ ಪರಿವಾರ ಬೆಳೆಯಿಲ್ಲದ ಪಾಳುಹೊಲ..!!

ಪ್ರೀತಿಸಿ ಬಾಳುವ ಅಣ್ಣತಮ್ಮಂದಿರು

ಜಗ್ಗೇಶ್ ಅವರು ಈ ಸಾಲುಗಳನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ. ಇದನ್ನ ಓದುತ್ತಲೇ ಹೋದಂತೆ ಅಮ್ಮನ ಮಹತ್ವ ತಿಳಿಯುತ್ತಾ ಹೋಗುತ್ತದೆ.

ಅಮ್ಮನ ಮಹತ್ವ ಎಷ್ಟು ಅನ್ನೋದನ್ನು ಪ್ರತಿ ಸಾಲಿನಲ್ಲೂ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಣ್ಣತಮ್ಮಂದಿರಾಗಿಯೇ ಹೆಜ್ಜೆ ಹಾಕಬೇಕು. ಹೆತ್ತ ಅಮ್ಮನ ಒಡಲಿಗೆ ಸಾರ್ಥಕಭಾವ..ಒಂದು ವೇಳೆ ಹಣ ಆಸ್ತಿ ಮೇಲು ಕೀಳು ನಡುವೆ ನುಸಿಳಿದರೆ, ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ ಅಂತಲೂ ಹೇಳಿದ್ದಾರೆ.

ಮನೆ ಮನಸ್ಸು ನಂದಗೋಕುಲ

ಸಹೋದರರು ಒಂದಾಗಿಯೇ ಬಾಳಬೇಕು, ಆಗಲೇ ಮನೆ ಮತ್ತು ಮನಸ್ಸು ನಂದಗೋಕಲ ಆಗುತ್ತವೆ. ಒಂದು ವಿರುದ್ಧ ದಿಕ್ಕಿನಲ್ಲಿ ನಡೆದರೆ ಮುಗಿತು. ಪರಿವಾರ ಬೆಳೆಯಿಲ್ಲದ ಪಾಳುಹೊಲ ಅಂತಲೂ ಹೇಳ್ತಾರೆ.

jaggesh emotional words about mother and brother on social media

ಇದನ್ನ ಈಗ ಬರೆದಿರೋದು(ಚಿತ್ರ ಕೃಪೆ: ಜಗ್ಗೇಶ್ ಇನ್‌ಸ್ಟಾಗ್ರಾಮ್) ಯಾಕೆ

ಅಣ್ಣತಮ್ಮಂದಿರು ಒಂದಾಗಿಯೇ ಇರಬೇಕು, ಹುಟ್ಟಿದಾಗ ಬೆಳೆದಾಗ ಬಾಳಿದಾಗ ಮಾಗಿದಾಗ ಹೋಗುವಾಗ ಅಣ್ಣತಮ್ಮರಾಗೆ ಹೆಜ್ಜೆಹಾಕಬೇಕು ಅನ್ನೋದನ್ನು ಜಗ್ಗೇಶ್ ಇಲ್ಲಿ ಹೇಳಿಕೊಂಡಿದ್ದಾರೆ.

ಜಗ್ಗೇಶ್ ಮಾತಿಗೆ ಬಂದ ಕಾಂಪ್ಲಿಮೆಂಟ್ಸ್

ಜಗ್ಗೇಶ್ ಅವರು ಒಳ್ಳೆ ವಿಚಾರಗಳನ್ನೆ ಹೇಳ್ತಾ ಇರ್ತಾರೆ. ಈಗ ಹೇಳಿರೋ ಈ ಮಾತುಗಳಿಗೂ ಒಳ್ಳೆ ಅಭಿಪ್ರಾಯಗಳೇ ಬಂದಿವೆ. ಇನ್‌ಸ್ಟಾಗ್ರಾಮ್‌ನ ಕಾಮೆಂಟ್‌ ಬಾಕ್ಸ್ ಅಲ್ಲಿ ಸಾಲು ಸಾಲು ಒಳ್ಳೆ ಮಾತುಗಳನ್ನೆ ಅಭಿಮಾನಿಗಳು ಬರೆದಿದ್ದಾರೆ.

ಇದನ್ನೂ ಓದಿ: Ayogya-2 Movie: ಜುಲೈ-8 ರಂದು ‘ಅಣ್ಣ ಬಂದ್ರೆ’ ಸಾಂಗ್ ರಿಲೀಸ್

ಅಣ್ಣ, ನಿಮ್ಮ ಬರವಣಿಗೆ ಅದ್ಭುತವಾಗಿದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಅಂತಲೂ ಅದ್ಯಾರೋ ಬರೆದಿದ್ದಾರೆ. ಅದ್ಭುತ ಸಹೋದರರು, ಒಂದು ಜಗಳವಿಲ್ಲದೆ, ಗಾಸಿಪ್ ಇಲ್ಲದ ಅಣ್ಣ ತಮ್ಮ ನೀವು. ಜಗ್ಗೇಶ್ ಸರ್ ಕೋಮಲ್ ಅಣ್ಣ, ನೀವು ಅಪ್ಪು ಸರ್ ಡಾ.ಶಿವಣ್ಣ ಅವರ ತರ ಅಂತಲೂ ಹೋಲಿಕೆ ಮಾಡಿಯೇ ಮತ್ತೊಬ್ಬರು ಬರೆದಿದ್ದಾರೆ.

ಇದನ್ನ ಈಗ ಬರೆದಿರೋದು ಯಾಕೆ

ಜಗ್ಗೇಶ್ ಅವರ ಸಹೋದರ ಕೋಮಲ್ ಅವರು ಜೂನ್-4 ರಂದು 53 ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಅವರ ಸಹೋದರ ಕೋಮಲ್ ಅವರಿಗೆ ಶುಭ ಹಾರೈಸಿದ್ದಾರೆ.

jaggesh emotional words about mother and brother on social media

“ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ”; ಜಗ್ಗೇಶ್ ಹೀಗೆ ಹೇಳಿದ್ದ್ಯಾಕೆ? (ಚಿತ್ರ ಕೃಪೆ: ಜಗ್ಗೇಶ್ ಇನ್‌ಸ್ಟಾಗ್ರಾಮ್)

ಸದಾ ನಾವು ಒಂದಾಗಿಯೇ ಇರೋಣ, ಕೂಡಿಯೇ ಬಾಳೋಣ ಅಂತಲೇ ಹೇಳಿದ್ದಾರೆ. ತಮ್ಮ ವಿಶೇಷ ಅನುಭವದ ಮಾತುಗಳಿಂದ ಇತರರಿಗೂ ಇಲ್ಲಿ ಬುದ್ಧಿ ಹೇಳಿದ್ದಾರೆ ಅಂತಲೂ ಹೇಳಬಹುದು.

ಕೋಮಲ್ ಸಿನಿಮಾಗಳ ವಿವರ

ಕೋಮಲ್ ಕುಮಾರ್ ಅವರು 2025 ರಿಂದ 2026 ವರೆಗಿನ ಲೆಕ್ಕದಲ್ಲಿ ನಾಲ್ಕೈದು ಚಿತ್ರ ಒಪ್ಪಿದ್ದಾರೆ. ಇದರಲ್ಲಿ ಕೋಣ ಸಿನಿಮಾ ಬಂದು ಹೋಗಿದೆ. ತಮಿಳಿನ ರಾಜಪುತಿರನ್ ಚಿತ್ರ ರಿಲೀಸ್ ಆಗಿದೆ.

ರೋಲೆಕ್ಸ್ ಅಂತು ರಿಲೀಸ್ ಹಂತಕ್ಕೆ ಬಂದಿದೆ. ಆದಷ್ಟು ಬೇಗ ರಿಲೀಸ್ ಆಗುತ್ತದೆ ಅಂತ ಚಿತ್ರ ತಂಡವೇ ಹೇಳಿಕೊಂಡಿದೆ. ತೆನಾಲಿ ಡಿಎ ಎಲ್‌ಎಲ್‌ಬಿ ಚಿತ್ರದ ಒಂದು ಹಂತದ ಚಿತ್ರೀಕರಣ ಆಗಿದೆ. ಎರಡನೇ ಹಂತದ ಕೆಲಸ ಇನ್ನೇನು ಶುರು ಆಗುತ್ತದೆ.

ಕೋಮಲ್ ಅವರ ಸಂಗೀತ ಬಾರ್ ಆ್ಯಂಡ್ ರೆಸ್ಟೋರಂಟ್ ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಅಶೋಕವನ ಅನ್ನುವ ಚಿತ್ರದ ಶೂಟಿಂಗೇ ಕಂಪ್ಲೀಟ್ ಆಗಿದೆ ಅಂತ ಮಾಹಿತಿ ಸಿಗುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports