Iraq: ಸಂಸದೆ ಮನೆಯಲ್ಲಿ ಸಿಕ್ತು ಚಿನ್ನದ ಒಳ ಉಡುಪು! ಎಷ್ಟು ಕೆಜಿ ಬಂಗಾರ ಗೊತ್ತಾ? | anti curruption raid at Iraq mp s home found 27 kg gold and gold innerwear | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Iraq: ಸಂಸದೆ ಮನೆಯಲ್ಲಿ ಸಿಕ್ತು ಚಿನ್ನದ ಒಳ ಉಡುಪು! ಎಷ್ಟು ಕೆಜಿ ಬಂಗಾರ ಗೊತ್ತಾ? | anti curruption raid at Iraq mp s home found 27 kg gold and gold innerwear | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಬೃಹತ್ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಇರಾಕ್ ಅನ್ನು ಬೆಚ್ಚಿಬೀಳಿಸಿದೆ. ಆರ್ಥಿಕ ಅಪರಾಧಗಳ ಆರೋಪ ಹೊತ್ತಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರೈಡ್ ಮಾಡಲಾಗಿದೆ.

ಅಧಿಕಾರಿಗಳು ಸರಣಿ ದಾಳಿಗಳನ್ನು ನಡೆಸಿದ ನಂತರ ಇರಾಕ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನವು ವಿಶ್ವಾದ್ಯಂತ ಗಮನ ಸೆಳೆದಿದೆ.

ಇರಾಕಿ ರಾಜಕಾರಣಿ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಇರಾಕಿನ ಕಾನೂನು ಜಾರಿ ಸಂಸ್ಥೆಗಳು 57 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 490 ಕೋಟಿ ರೂ.) ನಗದು ವಶ ಪಡಿಸಿದ್ದಾರೆ. 27 ಕೆಜಿ ಚಿನ್ನ ಮತ್ತು ಚಿನ್ನದಿಂದ ಮಾಡಿದ ಬ್ರಾ ಮತ್ತು ಪ್ಯಾಂಟಿಗಳನ್ನು ವಶಪಡಿಸಿಕೊಂಡಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ಫೋಟೋಗಳು ಆರೋಪಿಸಿವೆ.

ಈ ಹೇಳಿಕೆ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡಿದೆ. ಫೋಟೋಗಳಲ್ಲಿ ನಗದು, ಚಿನ್ನದ ಬಿಸ್ಕೆಟ್ ಮತ್ತು ಐಷಾರಾಮಿ ವಸ್ತುಗಳ ರಾಶಿಯನ್ನು ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಅಧಿಕೃತ ಅಪ್ಡೇಟ್ ಇನ್ನೂ ಬಂದಿಲ್ಲ.

ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಆರೋಪ ಹೊತ್ತಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇರಾಕ್ ಪ್ರಮುಖ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ.

ಹಲವಾರು ವರದಿಗಳ ಪ್ರಕಾರ, ಭದ್ರತಾ ಸಂಸ್ಥೆಗಳು ಈ ದಾಳಿಯ ಭಾಗವಾಗಿ ಹಲವಾರು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿವೆ. ಈ ಕೆಲವು ಕಾರ್ಯಾಚರಣೆಗಳಲ್ಲಿ ದೊಡ್ಡ ಪ್ರಮಾಣದ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಡಜನ್ಗಟ್ಟಲೆ ಶಂಕಿತರನ್ನು ಬಂಧಿಸಲಾಗಿದೆ.

ಹಿಂದ್ ಅಲ್-ಅಬ್ಬಾಸಿ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳು 57 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು 27 ಕೆಜಿ ಚಿನ್ನವನ್ನು ಹಿಂದ್ ಅಲ್-ಅಬ್ಬಾಸಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದರೂ, ಪ್ರಸಾರವಾದ ಎಲ್ಲಾ ಫೋಟೋಗಳು ಅಥವಾ ವಶಪಡಿಸಿಕೊಂಡ ವಸ್ತುಗಳ ಸಂಪೂರ್ಣ ಪಟ್ಟಿಗಳ ಬಗ್ಗೆ ಇರಾಕಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಚಿನ್ನದ ಒಳ ಉಡುಪು

ಹೆಚ್ಚು ಶೇರ್ ಆಗಿರುವಂತಹ ಚಿನ್ನದಿಂದ ಮಾಡಿದ ಬ್ರಾ ಮತ್ತು ಪ್ಯಾಂಟಿಗಳು ವೈರಲ್ ಆಗಿವೆ. ಇದನ್ನು ವೈರಲ್ ಪೋಸ್ಟ್‌ಗಳಲ್ಲಿ “ಚಿನ್ನದ ಒಳ ಉಡುಪುಗಳು” ಎಂದು ವಿವರಿಸಲಾಗಿದೆ. ಆದರೆ ಈವರೆಗೆ ಈ ಸಂಬಂಧ ಅಪ್ಡೇಟ್ ಬಂದಿಲ್ಲ.

ರೈಡ್ ಸಮಯದಲ್ಲಿ ಐಷಾರಾಮಿ ಚಿನ್ನದ ವಸ್ತುಗಳನ್ನು ವಶಪಡಿಸಿಕೊಂಡಿರಬಹುದು ಎಂದು ಸೂಚಿಸಿದರೆ, ಇನ್ನು ಕೆಲವು ವರದಿಗಳು ಇದು ಅದೇ ಸಂಸದೆಯದ್ದು ಎಂದು ಹೇಳೋಕಾಗಲ್ಲ ಎಂದಿದ್ದಾರೆ.

ಇರಾಕಿ ಸಂಸದೆ ಅಲಿಯಾ ನಾಸಿಫ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದ್ದು, ಅಲ್ಲಿ ಅಧಿಕಾರಿಗಳು ಶತಕೋಟಿ ಇರಾಕಿ ದಿನಾರ್‌ಗಳು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed