Darshan Case: ರೇಣುಕಾಸ್ವಾಮಿ ಕೇಸ್​ಗೆ ಟ್ವಿಸ್ಟ್​, ನಟ ದರ್ಶನ್​ಗೆ​ ಈತ ಸಿಕ್ಕಾಪಟ್ಟೆ ಕ್ಲೋಸ್​​​! ತೂಗುದೀಪ ಫಾರ್ಮ್ ಹೌಸ್​ನಲ್ಲಿ ಸಿಕ್ತು ಮಹತ್ವದ ‘ಸಾಕ್ಷಿ’ | | ACTPnews

News18


Last Updated:

ನಟನ ಆಪ್ತ ಬಳಗದಲ್ಲೂ ಈತ ಕಾಣಿಸಿಕೊಂಡಿದ್ದು, ಹೀಗಾಗಿ ಬೆದರಿಕೆ ಕೇಸ್​ನಲ್ಲಿ ದರ್ಶನ್​ಗೂ ಶುರುವಾಗುತ್ತಾ ಸಂಕಷ್ಟ? ದರ್ಶನ್​ ಜೊತೆ ಫಾರ್ಮ್​ಹೌಸ್​ನಲ್ಲಿರೋ ವಿಡಿಯೋ ವೈರಲ್​ ಆಗಿದೆ.

News18
News18

ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಕೋರ್ಟ್​​​ನಲ್ಲಿ ಟ್ರಯಲ್ ನಡೆಯುತ್ತಿರುವಾಗಲೇ ಮಹತ್ವದ ಬೆಳವಣಿಗೆಗಳು ಕೇಸ್​​ಗೆ ಟ್ವಿಸ್​ ಮೇಲೆ ಟ್ವಿಸ್ಟ್ ಕೊಡ್ತಿದೆ. ಸಾಕ್ಷಿ ಸಂದೀಪ್​​ಗೆ ಬೆದರಿಕೆ ಹಾಕಿದ ಮೂವರನ್ನ ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ದರ್ಶನ್ (Darshan) ಆಪ್ತ ಬಳಗದಲ್ಲೇ ಪುನೀತ್ ಕಾಣಿಸಿಕೊಂಡಿದ್ದಾನೆ.

ನಟ ದರ್ಶನ್​ಗೂ ಶುರು ಢವಢವ

ರೇಣುಕಾಸ್ವಾಮಿ ಹತ್ಯೆ ಸಾಕ್ಷಿಗೆ ಬೆದರಿಕೆ ಹಾಕಿದ ಕೇಸ್ ಸಂಬಂಧ ಬಂಧಿತ ಪುನೀತ್, ವೇಣು, ಸುಹಾಸ್​ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಮುಖ ಆರೋಪಿ ಹಾಗೂ ರೇಣುಕಾಸ್ವಾಮಿ ಕೇಸ್​​ನ ಸಾಕ್ಷಿಯೂ ಆಗಿರೋ ಪುನೀತ್​ ಎಂಬಾತ  ದರ್ಶನ್​ಗೆ ಸಿಕ್ಕಾಪಟ್ಟೆ ಕ್ಲೋಸ್ ಎನ್ನಲಾಗ್ತಿದೆ. ನಟನ ಆಪ್ತ ಬಳಗದಲ್ಲೂ ಈತ ಕಾಣಿಸಿಕೊಂಡಿದ್ದು, ಹೀಗಾಗಿ ಬೆದರಿಕೆ ಕೇಸ್​ನಲ್ಲಿ ದರ್ಶನ್​ಗೂ ಶುರುವಾಗುತ್ತಾ ಸಂಕಷ್ಟ?

ಕೆಲವು ಆರೋಪಿಗಳಿಗೂ ಈತ ಪರಿಚಿತ

 ಆರೋಪಿ ಪುನೀತ್​ ಎಂಬಾತ ನಟ ದರ್ಶನ್ ಫ್ಯಾನ್ ಪೇಜ್​ಗಳ ಹಲವು ಖಾತೆಗಳನ್ನ ಹ್ಯಾಂಡಲ್ ಮಾಡ್ತಿದ್ದ. ಜೊತೆಗೆ ರೇಣುಕಾಸ್ವಾಮಿ ಮರ್ಡರ್​ ಕೇಸ್​​ನಲ್ಲಿ ಕೆಲವು ಆರೋಪಿಗಳಿಗೂ ಈತ ಪರಿಚಿತನಾಗಿದ್ದ. ಹೀಗಾಗಿ ಪುನೀತ್, ವೇಣು, ಸುಹಾಸ್ ಮೂವರ ಮೊಬೈಲ್ ಫೋನ್ ಸೀಜ್ ಮಾಡಿದ್ದು, ಮಹತ್ವದ ಸಾಕ್ಷಿಗಳ ನಿರೀಕ್ಷೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪುನೀತ್​​ ಫೋನ್​ನಲ್ಲಿ ಸಿಗುತ್ತಾ ಮಹತ್ವದ ಸಾಕ್ಷ್ಯ?

ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ಜೊತೆಗೆ ವಾಟ್ಸಾಪ್ ಡೇಟಾವನ್ನ ಕೂಡ ಪೊಲೀಸರು ಚೆಕ್ ಮಾಡ್ತಿದ್ದಾರೆ. ಆರೋಪಿಗಳು ಸಂದೀಪ್​ಗೆ ವಾಟ್ಸಾಪ್ ಕರೆ ಮೂಲಕವೇ ಸಾಕ್ಷಿ ಸಂದೀಪ್​ಗೆ ಬೆದರಿಕೆ ಹಾಕಿದ್ದರು. ಡೇಟಾ ರಿಟ್ರೀವ್ ಬಳಿಕ ಮೊಬೈಲ್ ಫೋನ್​ಗಳನ್ನ ಎಫ್ಎಸ್ಎಲ್​ಗೆ ರವಾನೆ ಮಾಡಲಾಗುತ್ತೆ. ಸಿಡಿಆರ್ ರಿಪೋರ್ಟ್ ಪಡೆದು ಪ್ರತಿಯೊಂದು ಕರೆಗಳ ಪರಿಶೀಲನೆ ನಡೆಸುವ ಸಾಧ್ಯತೆ ಇದ್ದು, ಪ್ರತಿಯೊಂದು ನಂಬರ್ ಬಗ್ಗೆ ಕೂಡ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ದರ್ಶನ್ ಫಾರ್ಮ್​​ಹೌಸ್​​ನಲ್ಲಿ ಪುನೀತ್​

ದರ್ಶನ್ ಆಪ್ತ ಬಳಗದಲ್ಲೇ ಆರೋಪಿ ಬೆದರಿಕೆ ಆರೋಪಿ ಪುನೀತ್​  ಗುರುತಿಸಿಕೊಂಡಿದ್ದ ಎನ್ನುವ ಮಾಹಿತಿ ಹೊರ ಬಂದಿದೆ. ಈ ಹಿಂದೆ ತೂಗುದೀಪ್ ಫಾರ್ಮ್​​ಹೌಸ್​ನಲ್ಲಿ ನಟ ದರ್ಶನ್ ಜೊತೆಯೇ ಪುನೀತ್​​ ಕಾಣಿಸಿಕೊಂಡಿದ್ದ ವಿಡಿಯೋ ಕೂಡ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ದರ್ಶನ್ ಹಾಗೂ ಪುನೀತ್​​ಗೆ ಯಾವ ರೀತಿ ಸಂಬಂಧವಿತ್ತು ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.

(ವರದಿ: ಮುನಿರಾಜು, ನ್ಯೂಸ್​18 ಕನ್ನಡ, ಬೆಂಗಳೂರು)

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Darshan Case: ರೇಣುಕಾಸ್ವಾಮಿ ಕೇಸ್​ಗೆ ಟ್ವಿಸ್ಟ್​, ನಟ ದರ್ಶನ್​ಗೆ​ ಈತ ಸಿಕ್ಕಾಪಟ್ಟೆ ಕ್ಲೋಸ್​​​! ತೂಗುದೀಪ ಫಾರ್ಮ್ ಹೌಸ್​ನಲ್ಲಿ ಸಿಕ್ತು ಮಹತ್ವದ ‘ಸಾಕ್ಷಿ’



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed